16 May 2024

ಜೇನು ಸಾಕಾಣಿಕೆಯ ವೈಜ್ಞಾನಿಕ ಕ್ರಮಗಳು

ಜೇನು ಸಾಕಾಣಿಕೆ :

ಅನೇಕ ರೈತರು ಜೇನು ಸಾಕಾಣಿಕೆ ಮಾಡುತ್ತಾ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದಾರೆ. ಬನ್ನಿ ಬಂಧುಗಳೇ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನಾವು ನಮ್ಮ ಜೀವನದಲ್ಲಿ ಒಬ್ಬ ಮಾದರಿ ರೈತರಾಗಿ ಬೆಳೆಯುದನ್ನ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಜೇನು ಸಾಕಾಣಿಕೆ ಎಂದರೆ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜೇನು ಸಾಕಾಣಿಕೆ ಎಂದರೇನು?

ಹೊಲಗಳಲ್ಲಿ ಅಥವಾ ಖಾಲಿ ಜಾಗದಲ್ಲಿ ಜೇನು ಸಾಕಣೆ ಮಾಡುವುದಕ್ಕೆ ಜೇನು ಸಾಕಾಣಿಕೆ ಎಂದು ಕರೆಯುತ್ತಾರೆ.
ಜಗತ್ತಿನಾದ್ಯಂತ ಇರುವ ವಿವಿಧ ಬಗೆಯ ಕೀಟಗಳು ಮತ್ತು ನೊಣಗಳಲ್ಲಿ ಮಾನವನಿಗೆ ಅತ್ಯಂತ ಮುಖ್ಯವಾಗಿ ಉಪಕಾರಿಯಾಗುವಂತಿರುವ ನೊಣ ಎಂದರೆ ಅದು ಜೇನು ನೊಣ ಏಕೆಂದರೆ ಭಾರತವು ಪ್ರತಿ ವರ್ಷವೂ 20,000 ಟನ್ ಗಿಂತ  ಹೆಚ್ಚಿನ ಜೇನನ್ನು ಉತ್ಪಾದಿಸುತ್ತದೆ ಅದರಲ್ಲಿ ಶೇಕಡ 20 ರಿಂದ 30 ರಷ್ಟು ಜೇನುನೊಣಗಳನ್ನು ರಫ್ತು ಮಾಡಲಾಗುತ್ತದೆ.

ಆದರೆ ಇಂದಿನ ಕಾಲದಲ್ಲಿ ಜನರು ಜೇನು ಉತ್ಪಾದನೆಯನ್ನು ತುಂಬಾ ಕಡಿಮೆ ಮಾಡುತ್ತಿದ್ದಾರೆ ಏಕೆಂದರೆ ಇದರ ಸಂಪೂರ್ಣವಾದ ಮಾಹಿತಿಯನ್ನು ಜನರ ತಿಳಿದುಕೊಂಡಿಲ್ಲ ಮತ್ತು ಇತರ ಲಾಭದಾಯಕ ಉದ್ಯಮವನ್ನು ಜನರ ತಿಳಿದುಕೊಂಡಿಲ್ಲ.

ಜೇನು ಬಳಕೆಯಲ್ಲಿ ಅಥವಾ ಜೇನು ಉತ್ಪಾದನೆಯಲ್ಲಿ ಭಾರತ

ಜೇನು ಸಾಕಾಣಿಕೆಯಲ್ಲಿ ಮತ್ತು ಜೇನು ಸೇವನೆಯಲ್ಲಿ ಭಾರತವು ಅತ್ಯಂತ ಹಿಂದೆ ಉಳಿದ ದೇಶವಾಗಿದೆ. ಏಕೆಂದರೆ ಬೇರೆ ದೇಶಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಆಗುತ್ತದೆ ಎಂದು ನಮ್ಮ ಅಭಿಪ್ರಾಯ. ಬೇರೆ ದೇಶಗಳಲ್ಲಿ ಜನ ಸೇವನೆ ಪ್ರತಿಯೊಬ್ಬ ವ್ಯಕ್ತಿಗೆ 2ನೂರು ಗ್ರಾಮ ಇರುತ್ತದೆ ಆದರೆ ಭಾರತದಲ್ಲಿ ಒಬ್ಬ ವ್ಯಕ್ತಿಗೆ ಕೇವಲ 8.4 ಗ್ರಾಂ ಅಷ್ಟು ಜನ ಸೇವನೆ ಇದೆ.

ನಾವು ಜೇನಿನ ಉಪಯಗಳನ್ನು ನೋಡುವುದಾದರೆ ಬಹಳಷ್ಟು ನಾನು ನಿಮಗೆ ಹೇಳಲು ಬಯಸುತ್ತೇನೆ.
ಅಂದರೆ ಮೊದಲನೆಯದಾಗಿ ಬೆಳೆಗಳ ಪರಾಗಸ್ಪರ್ಶವನ್ನು ಹೆಚ್ಚಿಗೆ ಮಾಡುತ್ತದೆ
ಜೇನುತುಪ್ಪ ಉತ್ಪಾದನೆ ಮಾಡುವುದು.
ಮೇಣನ್ನು ಉತ್ಪಾದನೆ ಮಾಡುವುದು.
ಜೇನುನೊಣಗಳು ಮಾನವನಿಗೆ ಅತ್ಯಂತ ಸ್ನೇಹಜೀವಿಗಳಾಗಿದ್ದರು ಕೂಡ ಕೆಲವೊಂದು ಜೇನು ನೊಣಗಳು  ಅಪಾಯಕಾರಿಯಾಗಿದೆ.

ಜೇನುನೊಣಗಳು  ತಮ್ಮ ಆಹಾರಕ್ಕಾಗಿ ಹೂಗಳ ಮಕರಂದವನ್ನು ಹೀರುತ್ತವೆ ಮತ್ತು ಪರಾಗವನ್ನು ಸಂಗ್ರಹಿಸಿ ಜೇನುತುಪ್ಪ ಸಂಗ್ರಹಣೆ ಮಾಡುತ್ತವೆ. ಈ ಜೇನುತುಪ್ಪಗಳಿಂದ ಅನೇಕ ಔಷಧಿಕರಣ ಮತ್ತು ಆರೋಗ್ಯಕಾರಿಯದ ಅಂಶಗಳಿವೆ.
ಜೇನುತುಪ್ಪ ಹಾಗೂ ಜೇನು ಆಧಾರಿತ ಅನೇಕ ಉತ್ಪನ್ನಗಳು ಔಷಧಿಕರಣ ಅಂಶಗಳನ್ನು ಹೊಂದಿರುತ್ತವೆ, ಆದ್ದರಿಂದ ನಾವು ಜೇನುತುಪ್ಪವನ್ನು ಉತ್ಪಾದನೆ ಮಾಡುವುದು ಮತ್ತು ಸೇವಿಸುವುದು ಅತ್ಯಂತ ಉಪಕಾರಿಯಾಗಿದೆ ಎಂದು ನಾವು ಹೇಳಬಹುದು.

ಏನು ಸಾಕಣೆ ಯನ್ನು ಆರಂಭಿಸುವ ಮೊದಲು ನಾವು ಅದರ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಮತ್ತು ತಿಳುವಳಿಕೆಯನ್ನು ಪಡೆಯುವುದು ಅತ್ಯಂತ ಉಪಕಾರಿಯಾಗಿದೆ ಏಕೆಂದರೆ ನಾವು ಯಾವುದೇ ಒಂದು ಕೆಲಸವನ್ನು ಶುರು ಮಾಡಬೇಕಾದರೆ ಅದರ ಬಗ್ಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಸೂಕ್ತ. ಏಕೆಂದರೆ ಯಾವುದೇ ಒಂದು ವಿಷಯದ ಬಗ್ಗೆ ಸಂಪೂರ್ಣವಾದ ಜ್ಞಾನವಿಲ್ಲದೆ ನಾವು ಆರಂಭ ಮಾಡಿದರೆ ಅದು ವಿಫಲವಾಗುವುದು ಕಡಾ ಖಂಡಿತ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ನಾವು ಈ ಲೇಖನವನ್ನು ಬರೆದಿದ್ದೇವೆ.

ಮೊದಲಿಗೆ ನಾವು ಜೇನುನೊಣಗಳಲ್ಲಿ ಇರುವ ವಿವಿಧ ರೀತಿಯ ಜೇನುನೊಣಗಳ ಬಗ್ಗೆ ತಿಳಿದುಕೊಳ್ಳೋಣ.

1. ಜೇನುನೊಣಗಳು ( ಎಪಿಸಡೋರ್ಸಾಟಾ)
2. ಕಡ್ಡಿ ಜೇನುನೊಣ ( ಎಫಿಸ್ ಫ್ಲೋರಿಯಾ )
3. ಯುರೋಪಿಯನ್ ಜೇನು ( ಎಪಿಸ್ ಮೆಲ್ಲಿಪೆರಾ)
4. ಟ್ರಿಗೋನಾ ಇರಿಡಿಪೆನ್ನಿಸ್
5. ಎಫೀಸ್ ಸೆರಾನಾ( ತುಡುವೆ ಜೇನು )
ಮೊದಲನೇದಾಗಿ ನಾವು ಜೇನುನೊಣಗಳಾದಂತಹ ಅಪಿಸಡೋರ್ಸಾಟಾ ಬಗ್ಗೆ ತಿಳಿದುಕೊಳ್ಳೋಣ.
ಈ ಜೇನುನೊಣವು  ಎಲ್ಲಾ ಜೇನುನೊಣಗಳಿಗೆ ಹೋಲಿಸಿದರೆ ಅತಿ ದೊಡ್ಡದಾಗಿದೆ. ಇದು ಅನೇಕ ಸ್ಥಳಿಯ ಹೆಸರುಗಳಿಂದ ಕರೆಸಿಕೊಳ್ಳಲ್ಪಡುತ್ತದೆ ಅವುಗಳಲ್ಲಿ ಕೆಲವೊಂದಿಷ್ಟು ಗಳೆಂದರೆ,
ಕಲ್ಲು ಜೇನು, ಮರ ಜೇನು.

ಈ ಒಂದು ತಡೆಯು ಅತ್ಯಂತ ದೊಡ್ಡ ಮತ್ತು ಎತ್ತರವಾದ ಮರಗಳಲ್ಲಿ ಅಥವಾ ಕಟ್ಟಡಗಳಲ್ಲಿ ಗೋಪುರಗಳಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳ ಮೇಲ್ಬಾಗದಲ್ಲಿ ತನ್ನ ಗೂಡನ್ನು ಕಟ್ಟಿಕೊಳ್ಳುತ್ತದೆ. ಜೇನುಗೂಡನ್ನು ಕಟ್ಟಿಕೊಂಡು ಅದರೊಳಗೆ ವಾಸಿಸುತ್ತದೆ. ಈ ಒಂದು ಕಡೆಗೆ ವರ್ಷಕ್ಕೆ ಸುಮಾರು ಹೆಚ್ಚುಕಡಿಮೆ 20 ರಿಂದ 25 ಕೆಜಿಗಳಷ್ಟು ಜೇನುತುಪ್ಪವನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿರುತ್ತದೆ. ಈ ತರಹದ ಜೇನು ನೊಣಗಳನ್ನು ಪೆಟ್ಟಿಗೆಯೊಳಗೆ ಇಟ್ಟು ಸಾಕುವುದು ಸಾಧ್ಯವಿಲ್ಲ ಏಕೆಂದರೆ ಈ ಒಂದು ತಳಿಗೆ ಹೆಚ್ಚು ಗಾಳಿ ಬೆಳಕಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಪೆಟ್ಟಿಗೆಯಲ್ಲಿ ಇಟ್ಟು ಸಾಕುವುದು ಸಾಧ್ಯವಾಗುವುದಿಲ್ಲ.

2. ಕಡ್ಡಿ ಜೇನು ಅಥವಾ ಕೋಲು ಜೇನು ಅಥವಾ ಎಪಿಸ್ ಫ್ಲೋರಿಯಾ:

ಈ ಒಂದು ತಡೆಯುಡುವೇ ಜೇನುಗಳಿಗಿಂತ ಅತ್ಯಂತ ಸಣ್ಣದಾಗಿರುತ್ತವೆ. ಈ ಒಂದು ಜೇನುಗಳಿಗೆ ವಿವಿಧ ತರಹದ ಹೆಸರುಗಳಿಂದ ಕರೆಯುತ್ತಾರೆ . ಅವುಗಳೆಂದರೆ ಕಿರು ಜೇನು ಸಣ್ಣ ಜೇನು, ಚಿಟ್ಟೆ ಜೇನು ಎಂಬ ವಿಧದ ಹೆಸರುಗಳಿಂದ ಕರೆಯಲ್ಪಡುತ್ತವೆ. ಈ ತರಹದ ಜೇನುನೊಣಗಳು ಸಾಮಾನ್ಯವಾಗಿ ಗಿಡಗಳ ಪೊದೆಗಳಲ್ಲಿ ಹಾಗೂ ಮರದ ಕೊಂಬೆಗಳಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ವಾಸಿಸುತ್ತವೆ. ಈ ತಳಿಗಳಿಗೆ ಹೆಚ್ಚಾಗಿ ಗಾಳಿ ಬೆಳಕು ಬೇಕಾಗಿರುವುದರಿಂದ ಇವಳು ಹೆಚ್ಚಾಗಿ ವಲಸೆ ಹೋಗುತ್ತಿರುತ್ತವೆ. ಈ ತಳಿಗಳನ್ನು ಸಾಕುವುದು ಅಷ್ಟೋಂದು ಲಾಭದಾಯಕವಾಗಿಲ್ಲ ಏಕೆಂದರೆ ವರ್ಷಕ್ಕೆ ಸುಮಾರು 700 ಗ್ರಾಂ. ಇಂದ 1 ಕೆಜಿವರೆಗೆ ಮಾತ್ರ ಜೇನುತುಪ್ಪವನ್ನು ಉತ್ಪಾದಿಸುತ್ತವೆ. ಆದ್ದರಿಂದ ನಾವು ಈ ತಳಿಯನ್ನು ಜೇನು ಸಾಕಾಣಿಕೆಗೆ ಶಿಫಾರಸು ಮಾಡುವುದಿಲ್ಲ.

3. ಯುರೋಪಿಯನ್ ಜೇನು :

ಯುರೋಪಿಯನ್ ಜೇನಿಗೆ ಇನ್ನೊಂದು ಹೆಸರಿನಿಂದ ಕೂಡ ಕರೆಯುತ್ತಾರೆ ಅದು ಇಟಲಿಯನ್ ಜೇನು.  ಈ ತಳಿಗಳ ಜೇನುನನಗಳು ತುಡುವೇ ಜೇನುನೊಣಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದು ಇವುಗಳನ್ನು ನಾವು ಜೇನು ಸಾಕಾಣಿಕೆಗೆ ಬಳಸಬಹುದು ಏಕೆಂದರೆ ಇವುಗಳು ಸುಮಾರು ವರ್ಷಕ್ಕೆ 20 ರಿಂದ 30 ಕೆಜಿ ಅಷ್ಟು ಜೇನನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇವಳನ್ನು ಪೆಟ್ಟಿಗೆಯಲ್ಲಿಟ್ಟು ಸಾಕಬಹುದು. ಈ ಒಂದು ಜೇನನಗಳ ತಡಿಯಿಂದ ಅನೇಕ ಔಷಧೀಕರಣ ಅಂಶಗಳನ್ನು ಹೊಂದಿರುತ್ತವೆ. ಅವುಗಳೆಂದರೆ ರೋಗನಿರೋಧಕ ಶಕ್ತಿ ಹೊಂದಿರುತ್ತವೆ.

4. ಟ್ರೈಗೋನ್ ಇರಿಡಿಪೆನ್ನಿಸ್ ಅಥವಾ ಮುಜಂಟಿ ಜೇನು :

ಟ್ರೈಗೋನ್ ಇರಿಡಿಪೆನ್ನೀಸ್ ಈ ಒಂದು ತಳಿಯೂ ಜೇನಿನ ಒಂದು ವಿಧದ ತಳಿಯಾಗಿದ್ದು ಗೋಡೆಗಳ ಸಂದುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಈ ತಳಿಗಳನ್ನು ಜೇನು ಸಾಕಾಣಿಕೆಗೆ ನಾವು ಶಿಫಾರಸು ಮಾಡುವುದಿಲ್ಲ ಏಕೆಂದರೆ ಇವು ಲಾಭದಾಯಕವಾಗಿಲ್ಲ ಏಕೆಂದರೆ ಈ ಜೇನುಗಳನ್ನು ಸಾಕುವುದರಿಂದ ನಾವು ಹಾನಿಗೊಳಗಾಗಬಹುದು. ಈ ತಳಿಗಳು ಒಂದುಗೂಡಿಗೆ ಸುಮಾರು 350 ಗ್ರಾಂ ನಷ್ಟು ವರ್ಷಕ್ಕೆ ಜೇನುತುಪ್ಪವನ್ನು ಸಂಗ್ರಹ ಮಾಡುತ್ತವೆ. ಇವುಗಳು ಲಾಭದಾಯಕವಾಗಿಲ್ಲ ಆದರೆ ಔಷಧಿಕರಣ ಗುಣಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಇವುಗಳು ಸಮಾಜದಲ್ಲಿ ಒಂದು ಹೆಚ್ಚಿನ ಮಹತ್ವವನ್ನು ಪಡೆದಿರುತ್ತವೆ. ಇವುಗಳನ್ನು ನಾವು ಔಷಧಿ ಗುಣಗಳಿಗೆ ಮಾತ್ರ ಸಾಕಬಹುದು ಲಾಭಗಳಿಸಲು ಇವುಗಳನ್ನು ಸಾಕಿದರೆ ನಾವು ಹಾನಿಗೊಳಾಗಬಹುದು. ನೀವು ಈ ತಳಿಗಳನ್ನು ಜೇನು ಸಾಕಾಣಿಕೆಗೆ ಆರಿಸಿಕೊಳ್ಳಬೇಕಾದರೆ ಒಂದು ಸಲ ಯೋಚಿಸಿ ನೋಡಬೇಕು. ಒಂದೇ ತಳಿಯನ್ನು ಮಾತ್ರವಲ್ಲ ಯಾವುದೇ ತಳಿಯನ್ನು ಕೂಡ ನೀವು ಜೇನು ಸಾಕಾಣಿಕೆಗೆ ಆರಿಸಿಕೊಳ್ಳಬೇಕಾದರೆ ಒಂದು ಸಲ ಯೋಚಿಸಿ ನೋಡಿ ಏಕೆಂದರೆ ನಾವು ಆರಿಸಿಕೊಳ್ಳುವ ತಳಿ ನಮ್ಮ ಲಾಭಕ್ಕೆ ಅನುಗುಣವಾಗಿರಬೇಕು. ಏಕೆಂದರೆ ನಾವು ಜೇನು ಸಾಕಾಣಿಕೆ ಮಾಡುವುದು ಲಾಭಕ್ಕೋಸ್ಕರ, ನೀವು ಔಷಧಿ ಗುಣಕ್ಕೆ ಮಾತ್ರ ಮಾಡಬೇಕೆಂದರೆ ಸಣ್ಣ ಪ್ರಮಾಣದಲ್ಲಿ ಮಾಡಿಕೊಳ್ಳಬಹುದು. ಆದರೆ ಲಾಭ ಗಳಿಸಲು ಮಾಡುವುದು ಇದು ಸೂಕ್ತವಲ್ಲ.

5. ಎಪಿಸ ಸೇರಾನ ಅಥವಾ ತುಡುವೆ ಜೇನು :

ಈ ಒಂದು ಜೇನು ಸಾಕುವುದು ಅತ್ಯಂತ ಲಾಭದಾಯಕವಾಗಿದ್ದು ಮತ್ತು ಇದನ್ನು ಪೆಟ್ಟಿಗೆಲಿಟ್ಟು ಸಾಕುವುದು ಅತ್ಯಂತ ಸುಲಭವಾಗಿದೆ. ಈ ಒಂದು ತಳಿಯ ಜೇನಿನಿಂದ ನೂರು ವರ್ಷಕ್ಕೆ 10 ರಿಂದ 15 ಕೆಜಿಗಳಷ್ಟು ಜೇನುತುಪ್ಪವನ್ನು ಪಡೆಯುವ ಸಾಧ್ಯತೆಗಳಿವೆ. ಈ ಜೇನು ನೊಣಗಳು ವಾಸ ಮಾಡುವ ಜಾಗವೆಂದರೆ ಕತ್ತಲು ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತವೆ ಅವುಗಳಲ್ಲಿ ಹುತ್ತ ಮರದ ಪೊಟರೆ ಹಳೆಯ ಗೋಡೆಗಳ ಸಂದುಗಳಲ್ಲಿ ಇವುಗಳ ಹೆಚ್ಚಾಗಿ ವಾಸಿಸುವುದು ಕಂಡುಬರುತ್ತದೆ.

ಈ ಜೇನುನೊಣಗಳು ಮನುಷ್ಯನಿಗೆ ಕಡಿಯುವುದು ತುಂಬಾ ವಿರಳ, ಆದ್ದರಿಂದ ಇವುಗಳನ್ನು ಜೇನು ಸಾಕಾಣಿಕೆಗೆ ಹೆಚ್ಚಾಗಿ ಬಳಸುತ್ತಾರೆ. ಇವಳು ವರ್ಷಕ್ಕೆ 10 ರಿಂದ 15 ಕೆಜಿಗಳಷ್ಟು ಜೇನು ಉತ್ಪಾದಿಸುವುದರಿಂದ. ಮತ್ತೆ ಇವುಗಳನ್ನು ನಾವು ಜೇನು ಸಾಕಾಣಿಕೆಗೆ ಯಾವುದೇ  ತೊಂದರೆಯಿಲ್ಲದೆ ಇವುಗಳನ್ನು ಸಾಕಬಹುದು. ಮತ್ತು ಈ ಒಂದು ಜೇನಿನ ತಳಿಯನ್ನು ಭಾರತೀಯ ಜನ ಎಂದು ಕೂಡ ಕರೆಯುತ್ತಾರೆ. ಈ ತಳಿಗಳ ಜೇನು ಸಾಕಾಣಿಕೆ ಅತ್ಯಂತ ಲಾಭದಾಯಕವಾಗಿದ್ದು, ಇದರಿಂದ ನೀವು ಹೆಚ್ಚಿಗೆ ಲಾಭವನ್ನು ಪಡೆದು ತಮ್ಮ ಜೀವನವನ್ನು ಆರ್ಥಿಕವಾಗಿ ಸಮೃದ್ಧಿ ಗೊಳಿಸಿಕೊಳ್ಳಬಹುದು.

ಜೇನು ಸಾಕಾಣಿಕೆಗೆ ಅತ್ಯಂತ ಲಾಭದಾಯಕ ತಳಿ :

ಜೇನು  ಸಾಕಾಣಿಕೆಯಲ್ಲಿ ಅತಿ ಹೆಚ್ಚು ಲಾಭವನ್ನು ಪಡೆಯಲು ಮೊದಲ ಒಂದು ಅಂಶ ಬೇಕಾಗಿರುವುದು ತಳಿಯನ್ನು ಆರಿಸಿಕೊಳ್ಳುವುದು.
ನಮ್ಮ ಭಾರತೀಯ ಜೇನು ತಳಿಯನ್ನು  ಆರಿಸಿಕೊಳ್ಳುವುದು ಸೂಕ್ತವೆಂದು ನಾವು ನಿಮಗೆ ತಿಳಿಸುತ್ತೇವೆ. ಅದೇ ರೀತಿ ಯುರೋಪಿಯನ್ ಜಾತಿಯ ಯುರೋಪಿಯನ್ ಜೇನು ಕೂಡ ಅತಿ ಹೆಚ್ಚು ಲಾಭದಾಯಕವಾಗಿದೆ. ಮತ್ತು ಯಾವ ಪ್ರದೇಶದಲ್ಲಿ ಅತಿ ಹೆಚ್ಚು ಬಿಸಿಲು ಇರುತ್ತದೆಯೋ ಆ ಪ್ರದೇಶಗಳಲ್ಲಿ ಭಾರತೀಯ ತುಡುವೆ ಜೇನು ಅತ್ಯಂತ ಸೂಕ್ತವಾಗಿದೆ ಎಂದು ಹೇಳಬಹುದು.

ಜೇನುನೊಣಗಳ ಕುಟುಂಬ ಸದಸ್ಯರು :
ಜೇನುನೊಣಗಳ ಕುಟುಂಬದಲ್ಲಿ ಹಲವು ಗಂಡು ಜೇನುನೊಣಗಳು ಮತ್ತು ಎಂಟರಿಂದ 10,000 ಕೆಲಸಗಾರ ಜೇನುನೊಣಗಳು ಇರುತ್ತವೆ. ಹಾಗೂ ಒಂದು ಜೇನುನೊಣಗಳ ಕುಟುಂಬದಲ್ಲಿ ಒಂದೇ ಒಂದು ರಾಣಿ ಜೇನು ಇರುತ್ತದೆ. ಈ ಒಂದು ಹೆಣ್ಣು ರಾಣಿ ಜೇನು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಇಡುವ ಒಂದು ಸಾಮರ್ಥ್ಯವನ್ನು ಹೊಂದಿರುತ್ತದೆ. ಹೇಗೆ ಒಂದು ರಾಜ ಮನೆತನಕ್ಕೆ ರಾಜ ಮುಖ್ಯ ವ್ಯಕ್ತಿಯೋ ಅದೇ ರೀತಿ ಜೇನು ನೊಣಗಳ ಕುಟುಂಬದಲ್ಲಿ ರಾಣಿ ಜೇನು ಅತ್ಯಂತ ಪ್ರಬಲಶಾಲಿಯಾದ ಜೇನು ಆಗಿರುತ್ತದೆ.

ರಾಣಿ ಜೇನು ಇದರ ಮುಖ್ಯವಾದ ಕೆಲಸಗಳು ಈ ಕೆಳಗಿನಂತಿರುತ್ತವೆ :

ಪೂರ್ತಿ ಕುಟುಂಬದ ಕೆಲಸಗಳನ್ನು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಕೆಲಸಗಾರ ಜೇನುನೊಣಗಳು ಗೂಡಿನ ಎಲ್ಲಾ ಕೆಲಸಗಳನ್ನು ಶಿಸ್ತು ಬದ್ಧವಾಗಿ ಮಾಡುತ್ತಿವೆಯೋ ಇಲ್ಲವೋ ಎಂದು ನೋಡಿಕೊಳ್ಳುವುದು ರಾಣಿ ಜೇನಿನ ಮುಖ್ಯವಾದ ಕೆಲಸವಾಗಿರುತ್ತದೆ.
ರಾಣಿ ಜೇನು ದಿನಕ್ಕೆ ಸಾವಿರಾರು ಮೊಟ್ಟೆಗಳನ್ನು ಇಡುವ ಸಂತಾನವನ್ನು ಅಭಿವೃದ್ಧಿಗೊಳಿಸುವುದು ರಾಣಿ ಜನಿನ ಮುಖ್ಯ ಕೆಲಸವಾಗಿರುತ್ತದೆ.
ಮತ್ತೊಂದು ಮುಖ್ಯವಾದ ರಾಣಿ ಜೇನಿನ ಕರ್ತವ್ಯವೆಂದರೆ ಹೂವಿನ ರಸ ಸಂಗ್ರಹಿಸುವುದು ಮತ್ತು ಪರಾಗ ಸಂಗ್ರಹಿಸುವುದು.
ಗೂಡು ಕಟ್ಟುವುದು ಕೂಡ ರಾಣಿ ಜೇನಿನ ಮುಖ್ಯವಾದ ಕೆಲಸವಾಗಿರುತ್ತದೆ.
ಮಕರಂದವನ್ನು ಜೇನುತುಪ್ಪವಾಗಿ ಪರಿವರ್ತಿಸುವುದು ಕೂಡ ಹೆಣ್ಣು ಜೇನಿನ ಕೆಲಸವಾಗಿರುತ್ತದೆ.

ಅದೇ ರೀತಿ ಇನ್ನು ಹಲವಾರು ಕರ್ತವ್ಯಗಳು ರಾಣಿ ಜೇನಿನದಾಗಿರುತ್ತದೆ.ಅವುಗಳಲ್ಲಿ ಗೂಡಿನ ರಕ್ಷಣೆ ಮಾಡುವುದು, ರಾಣಿ ನೋಣವನ್ನು ಉತ್ಪತ್ತಿ ಮಾಡುವುದು ಹೀಗೆ ಹತ್ತು ಹಲವಾರು ಕೆಲಸಗಳನ್ನು ರಾಣಿ ಜೇನೂ ಅತ್ಯಂತ ಶಿಸ್ತಿನಿಂದ ಈ ಕೆಲಸವನ್ನು ಮಾಡುತ್ತದೆ.ಮತ್ತು ಇವುಗಳು ನೃತ್ಯ ಮಾಡುವುದರ ಮೂಲಕ ತಮ್ಮ ಸಂಭಾಷಣೆಯನ್ನು ಒಂದರಿಂದ ಮತ್ತೊಂದಕ್ಕೆ ನಡೆಸುತ್ತವೆ.
ಜೇನುನೊಣಗಳ ವಿವಿಧ ತಳಿಗಳು ಮತ್ತು ರಾಣಿ ಜನಿನ ಕರ್ತವ್ಯಗಳನ್ನು ತಿಳಿದುಕೊಂಡ ಮೇಲೆ ಜೇನು ಸಾಕಾಣಿಕೆಗೆ ಬೇಕಾಗಿರುವ ಕೆಲವಂದು ಸಾಮಗ್ರಿಗಳ ಬಗ್ಗೆ ನಾವು ತಿಳಿದುಕೊಳ್ಳೋಣ.

1. ಜೇನುಗೂಡುಗಳು
2. ಧೂಮಪಾನಿ
3. ಹೈವ ಟೂಲ್
4. ಕ್ವೀನ್ ಕ್ಯಾಚರ್
5. ಬೀ ಸೂಟ್
7. ಕೈಗವಸಗಳು
8. ಶೂಗಳು
9.ಸಾರಭೂತ ತೈಲಗಳು
10.ಪಿಡರ್ಸ್
11.ಸಕ್ಕರೆ
12. ಕ್ವೀನ್ ಎಕ್ಸ್ಕ್ಲೂಡರ್ 
13. ರಾಣಿ ಮಾರ್ಕರ್
14. ಜೇನು ನೊಣಗಳು
15. ರಾಣಿ

ಮೇಲೆ ನೀಡಿರುವ ಪ್ರತಿಯೊಂದು ಸಾಮಗ್ರಿಗಳ ಬಗ್ಗೆ ನಾವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ. ಈ ಎಲ್ಲಾ ಸಾಮಗ್ರಿಗಳು ಜೇನು ಸಾಕಾಣಿಕೆಗೆ ಅತೀ ಮುಖ್ಯವಾಗಿ ಬೇಕಾಗಿರುತ್ತದೆ.ಆದ್ದರಿಂದ ನಾವು ಈ ಎಲ್ಲಾ ಪ್ರತಿಯೊಂದು ಸಾಮಗ್ರಿಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ .
ಮೊದಲನೇದಾಗಿ ನಾವು

1. ಜೇನುಗೂಡುಗಳ ಬಗ್ಗೆ ತಿಳಿದುಕೊಳ್ಳೋಣ :

ಜೇನು ಗೂಡುಗಳೆಂದರೆ ಜೇನುನೊಣಗಳು ವಾಸಿಸುವ ಸ್ಥಳಗಳಾಗಿವೆ. ನಮಗೆ ಯಾವ ರೀತಿ ಜೇನು ಗೂಡುಗಳು ಬೇಕು ಅದನ್ನು ನಾವು ಮೊದಲೇ ನಿರ್ಧರಿಸಬೇಕಾಗುತ್ತದೆ. ಕೇಂದ್ರ ಜೇನು ಸಾಕಾಣಿಕೆಯಲ್ಲಿ ಜೇನು ಗೂಡುಗಳ ಆರಿಸುವುದಕ್ಕೆ ಅತ್ಯಂತ ಮಹತ್ವದ್ದಾಗಿದೆ.  ಏಕೆಂದರೆ ಕೆಲವೊಂದಿಷ್ಟು ಜನ ಜೇನು ಸಾಕಾಣಿಕೆಯನ್ನು ಹವ್ಯಾಸವಾಗಿ ಮಾಡುತ್ತಾರೆ ಅಥವಾ ಮತ್ತೊಂದಿಷ್ಟು ಜನ ಲಾಭಕ್ಕಾಗಿ ಮಾಡುತ್ತಾರೆ.

ಆದ್ದರಿಂದ ನೀವು ಯಾವ ರೀತಿ ಜೇನು ಗೂಡುಗಳನ್ನು ಇಟ್ಟುಕೊಳ್ಳಬೇಕೆಂಬುದು ನೀವು ಮೊದಲೇ ನಿರ್ಧರಿಸಬೇಕಾಗುತ್ತದೆ. ಯಾವ ರೀತಿ ಜೇನು ಗೂಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದಕ್ಕೆ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಈ ಕ್ಷೇತ್ರದಲ್ಲಿ ಅತ್ಯುತ್ತಮ ಜ್ಞಾನ ಮತ್ತು ಅನುಭವ ಹೊಂದಿರುವಂತಹ ತಜ್ಞರನ್ನು ಇದರ ಬಗ್ಗೆ ಕೇಳಿದರೆ ಉತ್ತಮವಾಗಿರುತ್ತದೆ. ಏಕೆಂದರೆ ಜೇನುಗೂಡುಗಳನ್ನು ಆರಿಸಿಕೊಳ್ಳುವುದು ಅತ್ಯಂತ ಮಹತ್ವದ ನಿರ್ಧಾರವಾಗಿರುತ್ತದೆ. ಜೇನುನೊಣಗಳು ವಾಸಿಸುವ ಸ್ಥಳವಾಗಿದ್ದರಿಂದ ಇದು ಅತ್ಯುತ್ತಮವಾಗಿರಬೇಕು ಮತ್ತು ಜೇನುನೊಣಗಳಿಗೆ ಬೇಕಾದಂತಹ ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸುವಂಥದ್ದಾಗಿರಬೇಕು.

2. ಧೂಮಪಾನಿ :

ನಾವು ಜೇನು ಸಾಕಾಣಿಕೆಯನ್ನು ಮಾಡಬೇಕಾದರೆ ಧೂಮಪಾನೀ ಗಳನ್ನು ತೆಗೆದುಕೊಳ್ಳುವುದು ಮುಖ್ಯ ಆದ್ಯತೆ ಇರಬೇಕು ಏಕೆಂದರೆ
ಜೇನು ಗೂಡುಗಳಲ್ಲಿ ಬರುವಂತಹ ಹೊಗೆಯನ್ನು ಹೊರ ಹಾಕುವುದಕ್ಕೆ ಈ ಸಾಧನವು ಅತಿ ಮುಖ್ಯವಾಗಿದೆ. ಮತ್ತು ಈ ಧೂಮಪಾನಿಗಳಲ್ಲಿ ಬರುವಂತ ಹೊಗೆ ಜೇನುನೊಣಗಳಿಗೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ.
ನಾವು ಧೂಮಪಾನಿಗಳನ್ನು ಯಾವಾಗ ಉಪಯೋಗ ಮಾಡಬೇಕೆಂದರೆ ಜೇನುನೊಣಗಳು ಜೇನುಗೂಡನ್ನು ಕಟ್ಟುವ ಮೊದಲು 24 ಗಂಟೆ ಅವಧಿಯಲ್ಲಿ ಈ ಸಾಧನವನ್ನು ಉಪಯೋಗಿಸಬೇಕು. ಕೊನೆಯದಾಗಿ ಹೇಳಬೇಕೆಂದರೆ ಜೇನು ಸಾಕಾಣಿಕೆಯಲ್ಲಿ ಧೂಮಪಾನಿಯು ಮುಖ್ಯ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಾವು ಜೇನು ಸಾಕಾಣಿಕೆಯನ್ನು ಮಾಡುವಾಗ ಈ ಧೂಮಪಾನ ಯನ್ನು ಕೊಂಡುಕೊಳ್ಳುವುದು ಮತ್ತು ಅದರಲ್ಲೇ ಉತ್ತಮವಾದದ್ದನ್ನು ಆರಿಸಿಕೊಂಡು ಬಳಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ನಾವು ಜೇನು ಸಾಕಾಣಿಕೆಯಲ್ಲಿ ಹೆಚ್ಚು ಲಾಭವನ್ನು ಪಡೆಯಬೇಕೆಂದರೆ ಪ್ರತಿಯೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ ಕೆಲಸವಾಗಿರುತ್ತದೆ. ಕೆಲವೊಂದಿಷ್ಟು ಜನ ಕೇಳಬಹುದು ನಾವು ಧೂಮಪಾನಿಯನ್ನು ಉಪಯೋಗಿಸದೆ ಜೇನು ಸಾಕಾಣಿಕೆ ಮಾಡಬಹುದೇ? ಹೌದು, ಖಂಡಿತವಾಗಿ ಮಾಡಬಹುದು ಏಕೆಂದರೆ ಇದಕ್ಕೆ ಹಲವಾರು ದಾರಿಗಳಿವೆ ಅವುಗಳಲ್ಲಿ ಕೆಲವೊಂದು ನಾನು ನಿಮಗೆ ಹೇಳಲು ಇಷ್ಟಪಡುತ್ತೇನೆ. ಜನತೆಗೆಯುವ ಸರಳ ಮತ್ತು ಭವಿಷ್ಯ ಅತ್ಯಂತ ಹಳೆಯ ವಿಧಾನವೆಂದರೆ ಅದು ಕ್ರಷ್ ಮತ್ತು ಸ್ಟ್ರೇನ್ ವಿಧಾನ.
ಈ ರೀತಿ ನೀವು ಜೇನುತುಪ್ಪವನ್ನು ಜೇನುಗೂಡಿನಿಂದ ಬೇರ್ಪಡಿಸಬಹುದು.

3. ಹೈವ್ ಟೂಲ್ :

ಈ ಸಾಧನವು ಜೇನುಗೂಡಿನ ಉಪಕರಣಗಳಲ್ಲಿ ಮತ್ತೊಂದು ಅತ್ಯಂತ ಅಗ್ಗದ ಸಾಧನವಾಗಿದೆ. ಅದೇ ರೀತಿ ಈ ಒಂದು ಸಾಧನವು ಜೇನು ಸಾಕಾಣಿಕೆಯಲ್ಲಿ ಅತ್ಯಂತ ಅಗತ್ಯವಾದ ಸಾಧನವೆಂದು ಪರಿಗಣಿಸುತ್ತೇವೆ. ಜೇನುನೊಣಗಳು ತಮ್ಮ ಜೇನುಗೂಡುಗಳನ್ನು ಪ್ರೊಪೆಲ್ ನೊಂದಿಗೆ ಜೋಡಿಸಲು ಇದು ಅತ್ಯಂತ ಸಹಕಾರಿಯಾಗಿದೆ.
ಈ ಒಂದು ಸಾಧನ ಅತ್ಯಂತ ಗಟ್ಟಿ ಮುಟ್ಟಾಗಿದೆ ಮತ್ತು ಚೌಕಟ್ಟುಗಳನ್ನು ಬೇರ್ಪಡಿಸಲು ಮತ್ತು ಜೇನುಗೂಡಿನ ದೇಹಗಳನ್ನು ಬೇರ್ಪಡಿಸಲು ಕಷ್ಟವಾಗುವುದರಿಂದ ನಾವು ಈ ಸಾಧನವನ್ನು ಬೆಳೆಸಿ ಇದನ್ನು ಹಗುರವಾದ ಕೆಲಸವಾಗಿ ಮಾಡಿಕೊಳ್ಳಬಹುದು. ಈ ಒಂದು ಸಾಧನದಿಂದ ಜೇನುನೊಣದ ಕುಟುಕಿನ ನಂತರ ಚರ್ಮದಿಂದ ವಿಷದ ಚೀಲವನ್ನು ತೆಗೆದುಹಾಕಲು ಮತ್ತು ಜೇನು ಸಾಕಾಣಿಕೆದಾರರು ಈ ಉಪಕರಣವಲ್ಲದೆ ಜೇನುಗೂಡಿಗೆ ಭೇಟಿಯನ್ನು ನೀಡುವುದಿಲ್ಲ. ಆದ್ದರಿಂದ ಈ ಸಾಧನವು ಅತ್ಯಂತ ಮಹತ್ವದ್ದಾಗಿದೆ.

ಈ ಸಾಧನನ ಉಪಯೋಗಿಸುವುದರಿಂದ ನಾವು ಜೇನು ಸಾಕಾಣಿಕೆಯಲ್ಲಿ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಜೇನುತುಪ್ಪವನ್ನು ಪಡೆಯಬಹುದು. ಮತ್ತು ಸುಲಭವಾಗಿ ಅತೀ ಕಡಿಮೆ ಅವಧಿಯಲ್ಲಿ, ಮತ್ತು ಜೇನುಗಳಲ್ಲಿ ಅತಿ ಕಡಿಮೆ ರೋಗವನ್ನು ಕೂಡ ನಾವು ಪಡೆಯಬಹುದು. ಈ ಒಂದು ಸಾಧನವನ್ನು ಬಳಸುವುದರಿಂದ ನಾವು ಕಳ್ಳತನದ ಸಮಸ್ಯೆಗಳನ್ನು ಕೂಡ ತಪ್ಪಿಸಬಹುದು. ಒಟ್ಟಾರೆ ಹೇಳಬೇಕೆಂದರೆ ಈ ಸಾಧನವು ಅತ್ಯಂತ ಉಪಕಾರಿಯಾಗಿದೆ ಮತ್ತು ಜೇನು ಸಾಕಾಣಿಕೆಯಲ್ಲಿ ಮಹತ್ವದ್ದಾಗಿದೆ.

4. ಕ್ವೀನ್ ಕ್ಯಾಚರ್ :

ಈ ಒಂದು ಸಾಧನವು ಜೇನು ಸಾಕಾಣಿಕೆಯಲ್ಲಿ ಮತ್ತೊಂದು ಮಹತ್ವದ ಮತ್ತು ಅಗತ್ಯ ಸಾಧನವಾಗಿ ಗುರುತಿಸಿಕೊಳ್ಳುತ್ತದೆ. ಏಕೆಂದರೆ ಜೇನು ಸಾಕಾಣಿಕೆಯಲ್ಲಿ ಅಥವಾ ಜೇನುತುಪ್ಪ ಮಾಡುವುದರಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುವ ಜೇನು ಹುಳ ಎಂದರೆ ಅದು ರಾಣಿಜೇನು. ಈ ಒಂದು ಸಾಧನದಿಂದ ನಾವು ರಾಣಿ ಜೇನು ಹುಳವನ್ನು ಹಿಡಿಯಲು ಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಈ ಸಾಧನದಿಂದ ನಾವು ರಾಣಿ ಜೇನನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿ ಹಿಡಿಯಬಹುದು. ನಾವು ಕೈಗಳಿಂದ ಇವುಗಳನ್ನು ಹಿಡಿಯಲು ಹೋದರೆ ನಾವು ಕೈಗೆ ಗಾಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಲು ಕ್ವೀನ್ ಕ್ಯಾಚರ್ ಸಾಧನವು ಅತ್ಯಂತ ಉಪಕಾರಿಯಾಗಿದೆ. ಮತ್ತು ರಾಣಿ ಜನರೊಂದಿಗೆ ಸಲುವಾಗಿ ಕೆಲಸ ಮಾಡಲು ಸೌಮ್ಯವಾದ ಮಾರ್ಗವಾಗಿದೆ. ರಾಣಿ ಜೇನನ್ನು
ಸುಲಭವಾಗಿ ಒಳಗೆ ತೆವಳಿಸಲು ಈ ಸಾಧನವು ಅತ್ಯಂತ ಉಪಕಾರಿಯಾಗಿದೆ.

5. ಬಿ ಸೂಟ್ :

ಜೇನು ಸಾಕಾಣಿಕೆಯಲ್ಲಿ ಜೇನುನೊಣಗಳು ಮನುಷ್ಯನಿಗೆ ಕಚ್ಚಿ ಹಾನಿ ಮಾಡಬಹುದಾಗಿರುತ್ತದೆ. ಜೇನು ನೊಣಗಳು ಕಚ್ಚುವುದರಿಂದ ಅಥವಾ ಕುಟುಕುವುದರಿಂದ ರಕ್ಷಿಸಿಕೊಳ್ಳಲು ಈ ವಿಶೇಷ ಬಟ್ಟೆಗಳನ್ನು ಧರಿಸುತ್ತಾರೆ. ವಿಶೇಷ ಬಟ್ಟೆಗಳಿಗೆ ನಾವು ಬೀ ಸೂಟ್ ಎಂದು ಕರೆಯಲಾಗುತ್ತದೆ. ಜೇನುನೊಣಗಳು ಕಣ್ಣಿಗೆ ಕಡೆಯ ಸಾಧ್ಯತೆ ಇರುತ್ತದೆ ಮುಖಕ್ಕೆ ಕಡೆಯುವ ಸಾಧ್ಯವಿರುತ್ತದೆ. ಈ ಎಲ್ಲಾ ಜೇನುನೊಣಗಳು ಕಚ್ಚುವುದರಿಂದ ರಕ್ಷಿಸಿಕೊಳ್ಳಲು ಈ ಸಾಧನವು ಅತ್ಯಂತ ಉಪಕಾರಿಯಾಗಿದೆ. ಜೇನು ಸಾಕಾಣಿಕೆದಾರರು ಧರಿಸುವ ಬಟ್ಟೆಗಳನ್ನು ಜೇನು ಸಾಕಣೆ ಸೂಟ್ ಅಥವಾ ಜೇನು ಸಾಕಣೆ  ಬಟ್ಟೆಗಳೆಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ತರಹದ ಬಟ್ಟೆಗಳು ಉದ್ದವಾದ ತೋಳುಗಳ ಬಟ್ಟೆಯಾಗಿರುತ್ತವೆ ಮತ್ತು ಉದ್ದವಾದ ಪ್ಯಾಂಟುಗಳನ್ನು ಒಳಗೊಂಡಿರುತ್ತವೆ. ಅದೇ ರೀತಿ ಜೇನು ಸಾಕಾಣಿಕೆದಾರರು ಟೋಪಿಗಳನ್ನು, ಮತ್ತು ಮುಖಕ್ಕೆ ಮುಚ್ಚಿಕೊಳ್ಳಲು ಮುಸುಕಿನಿಂದ ಮುಚ್ಚಿಕೊಂಡಿರುತ್ತಾರೆ. ಈ ರೀತಿ ಮಾಡುವುದರಿಂದ ನಾವು ಅತ್ಯಂತ ಸುಲಭವಾಗಿ ಜೇನು ಸಾಕಾಣಿಕೆ ಮಾಡಬಹುದು, ಮತ್ತು ಯಾವುದೇ ರೀತಿಯ ತೊಂದರೆ ಇಲ್ಲದೆ ಅಥವಾ ಜೇನುಹುಳಗಳು ಕಚ್ಚುವುದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಜೇನು ಸಾಕಾಣಿಕೆ ಮಂಚೆ ಈ ಸಾಧನದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳುವುದು ಅತ್ಯಂತ ಉಪಕಾರಿಯಾಗಿದೆ ಮತ್ತು ಲಾಭದಾಯಕವಾಗಿದೆ ಎಂದು ನಾವು ಹೇಳಬಹುದು.

7. ಕೈಗವಸಗಳು :

ಜೇನು ಸಾಕಾಣಿಕೆಯಲ್ಲಿ ಮತ್ತೊಂದು ಅತ್ಯಂತ ಉಪಕಾರಿಯಾದ ಸಾಧನವೆಂದರೆ ಅದು ಕೈಗವಸುಗಳು. ಕೈಗವಸಗಳನ್ನು ಇಂಗ್ಲೀಷಿನಲ್ಲಿ ಗ್ಲೋಸ್ ಎಂದು ಕರೆಯುತ್ತಾರೆ. ಇವುಗಳನ್ನು ಕೈಗಳಿಗೆ ಹಾಕಿಕೊಳ್ಳಲು ಉಪಯೋಗಿಸುತ್ತಾರೆ. ಕೈಗವಸಗಳಿಲ್ಲದೆ ನಾವು ಜೇನು ಸಾಕಾಣಿಕೆಯಲ್ಲಿ ಜೇನುಗೂಡಿನ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿರುವುದಿಲ್ಲ ಏಕೆಂದರೆ ಜನುಮಗಳು ನಮ್ಮ ಕೈಯನ್ನು ಕಚ್ಚಿ ಕಚ್ಚಿ ಅಪಾಯ ಮಾಡುತ್ತವೆ. ಜನನಗಳ ಕೈಗಳಿಗೆ ಕಚ್ಚುವುದನ್ನು ಕಾಪಾಡಿಕೊಳ್ಳಲು ಈ ಸಾಧನವು ಬಾಳ ಸಹಕಾರಿಯಾಗಿದೆ ಎಂದು ನಾವು ಹೇಳಬಹುದು. ಈ ಕೈಗವಸಗಳನ್ನು ಕರದಿಸಿಕೊಳ್ಳುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಗಟ್ಟಿಮುಟ್ಟಾಗಿರಬೇಕು ಮತ್ತು ನಿಮ್ಮ ಕೈಗಳ ಒಂದು ಅಳತೆಯನ್ನು ಸರಿಯಾಗಿ ಹೊಂದಿರಬೇಕು.

ಜೇನು ಸಾಕಾಣಿಕೆಯಲ್ಲಿ ಈ ಕೆಳಗಿನ ಕೈಗವಸಗಳು ಅತ್ಯಂತ ಉಪಕಾರಿಯಾಗಿದೆ.
ಅವುಗಳಲ್ಲಿ ಮೊದಲನೆಯದಾಗಿ ರಬ್ಬರ್ ಕೈಗವಸಗಳು ,  ಚರ್ಮದ ಜನ ಸಾಕಾಣಿಕೆ ಕೈಗವಸಗಳು, ಗಾಳಿ ಮತ್ತು ಕಪ್ ರಕ್ಷಿತ ಜೇನು ಸಾಕಾಣೆ ಕೈಗವಸಗಳು ಮತ್ತು ಹಂಬಲ್ ಬಿ114 ಮೇಕೆ ಚರ್ಮದ ಜೇನು ಸಾಕಾಣಿಕೆ ಕೈಗವಸಗಳು. ಈ ರೀತಿ ಕೈಗವಸಗಳಲ್ಲಿ ಅನೇಕ ತರಹದ ಕೈಗವಸಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು   ನಿಮಗೆ ಯಾವುದು ಉತ್ತಮವೆನಿಸುತ್ತದೆ ಎಂದ ಮೊದಲ ತಿಳಿದುಕೊಂಡ ನಂತರ ನೀವು ಈ ವಸ್ತುವಿಗೆ ಕರೆದಿಸಿಕೊಳ್ಳಲು ಹೋಗಬಹುದು.

8. ಶೂಗಳು :

ಕಾಲುಗಳನ್ನು ರಕ್ಷಿಸಿಕೊಳ್ಳಲು ಉಪಯೋಗಿಸುವ ಸಾಧನವನ್ನು ಶೂಗಳೆಂದು ಕರೆಯುತ್ತಾರೆ. ಜೇನು ಸಾಕಾಣಿಕೆಯಲ್ಲಿ ಶೂಗಳು ಅಥವಾ ಬೂಟುಗಳು ಬಹಳ ಉಪಕಾರಿಯಾಗಿರುತ್ತವೆ. ಏಕೆಂದರೆ ನಾವು ಬರಿಗಾಲಿನಲ್ಲಿ ಹೋದರೆ ಜೇನುನೊಣಗಳಿಂದ ರಕ್ಷಣೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅವುಗಳ ಕಚ್ಚುವ ಸಾಧ್ಯವಿರುತ್ತದೆ. ಈ ಸಾಧನವನ್ನು ಹಾಕಿಕೊಳ್ಳುವುದರಿಂದ ನಾವು ಜೇನು ನೊಣಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಬೂಟುಗಳಲ್ಲಿ ಅನೇಕ ತರದ ಶೂಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜೇನು ಸಾಕಾಣಿಕೆ ಗಾರರು ಇವುಗಳನ್ನು ಖರೀದಿಸುವಾಗ ತಮಗೆ ಯಾವ ಅಳತೆಯ ಬೂಟಗಳು ಸರಿ ಹೊಂದುತ್ತದೆಯೋ ಎಂದು ನೋಡಿಕೊಳ್ಳಬೇಕು. ನಾವು ಇವುಗಳೆಲ್ಲವನ್ನು ಜೇನುನೊಣಗಳಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದೇವೆ. ಹೀಗಂತ ಜೇನುನೊಣಗಳು ಕೆಟ್ಟ ಜೀವಿಗಳಲ್ಲ. ಜೇನುನೊಣಗಳು ತಾವಾಗಿಯೇ ಮನುಷ್ಯನ ಮೇಲೆ ಯಾವತ್ತೂ ದಾಳಿಯನ್ನು ಮಾಡುವುದಿಲ್ಲ ಬದಲಾಗಿ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅಥವಾ ಜೇನುತುಪ್ಪಕ್ಕಾಗಿ ಅವುಗಳ ಮೇಲೆ ದಾಳಿಯನ್ನು ಮಾಡಿದರೆ ಜೇನುನೊಣಗಳು ಹಿಂದುರಿಗಿ ಬಿದ್ದು ಮನುಷ್ಯನ ಮೇಲೆ ದಾಳಿ ಮಾಡುವುದು ಖಂಡಿತ.

ಜೇನು ಸಾಕಾಣಿಕೆಯಲ್ಲಿ ಬೂಟುಗಳನ್ನು ನಾವು ಖರೀದಿಸುವುದು ಉತ್ತಮವಾಗಿದೆ. ಇವುಗಳನ್ನು ಹಾಕಿಕೊಳ್ಳುವುದರಿಂದ ಅನೇಕ ಜನರಿಗೆ ತೊಂದರೆ ಉಂಟು ಮಾಡಬಹುದು ಏಕೆಂದರೆ ಕಾಲನ್ನು ಎತ್ತಿ ಇಡುವಾಗ ಇವು ತೊಂದರೆ ಕೊಡುತ್ತವೆ. ಕೆಲವೊಂದಿಷ್ಟು ಬೂಟುಗಳು ತೂಕದಲ್ಲಿ ಭಾರವಾಗಿರುತ್ತವೆ. ಆದ್ದರಿಂದ ಬೂಟುಗಳನ್ ಖರೀದಿಸಿಕೊಂಡರೆ ನಡೆದಾಡಲು ಸ್ವಲ್ಪ ಕಷ್ಟವಾಗಬಹುದು. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬೂಟುಗಳ ಲಭ್ಯವಿದ್ದು ಮತ್ತೊಮ್ಮೆ ಮತ್ತೊಮ್ಮೆ ಪರಿಶೀಲಿಸಿ ಖರೀದಿಸಬೇಕೆಂದು ನಾವು ನಿಮಗೆ ಸಲಹೆ ನೀಡುತ್ತೇವೆ.

9. ಕ್ವೀನ್ ಎಕ್ಸಲುಡರ್ :

ಈ ಸಾಧನವನ್ನು ಕನ್ನಡದಲ್ಲಿ ರಾಣಿ ಹೊರಗಡೆ ಇಡುವ ಸಾಧನ ಎಂದು ಕರೆಯುತ್ತಾರೆ. ನಾವು ನೈಸರ್ಗಿಕವಾಗಿ ಜೇನು ಸಾಕಣೆಯನ್ನು ಮಾಡುತ್ತೇವೆ ಎಂದರೆ ಈ ಸಾಧನದ ಬಹುಶಃ ಅವಶ್ಯಕತೆ ನಿಮಗೆ ಇರುವುದಿಲ್ಲ. ನೈಸರ್ಗಿಕವಾಗಿ ಮಾಡುವುದಿಲ್ಲ ವೆಂದರೆ ಈ ಸಾಧನದ ಅಗತ್ಯವಿರುತ್ತದೆ.ಜೇನು ಸಾಕಾಣಿಕೆಯನ್ನು ಬರಿ ಲಾಭವನ್ನು ಗಳಿಸಲು ಮಾತ್ರವಲ್ಲದೆ ನಾವು ಇದನ್ನು ಒಂದು ಉದ್ಯಮ ರೀತಿಯಲ್ಲಿ ಬೆಳೆಸಬಹುದು. ಅನೇಕ ರೈತರು ಇದನ್ನು ದೊಡ್ಡ ಉದ್ಯಮವಾಗಿಯೇ ಬೆಳೆಸಿದ್ದಾರೆ. ಮಾರುಕಟ್ಟೆಯಲ್ಲಿ ಇಂದು ಕೆಜಿಗೆ 250 ರಿಂದ 300 ಬೆಲೆ ಇರುತ್ತದೆ. ಜೇನು ಸಾಕಾಣಿಕೆಯು ಮಲೆನಾಡಿನಲ್ಲಿ ಒಂದು ಉದ್ಯಮದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಒಂದಾನೊಂದು ಕಾಲದಲ್ಲಿ ಜೇನು ಸಾಕಾಣಿಕೆ ಎಂದರೆ ಅಥವಾ ಜೇನು ಹುಳಗಳೆಂದರೆ ಹೆದರುವ ಭೀತಿ ಇತ್ತು. ಆದರೆ ಇಂದಿನ ಕಾಲದಲ್ಲಿ ಅದು ಬದಲಾಗುತ್ತಿದೆ ಏಕೆಂದರೆ ಜೇನು ಸಾಕಾಣಿಕೆಯಿಂದ ಅನೇಕ ಜನರು ಅತ್ಯಂತ ಶ್ರೀಮಂತರಾಗಿ ತಮ್ಮ ಜೀವನದಲ್ಲಿ ಸಮೃದ್ಧಿ ಸಂಪತ್ತನ್ನು ಹೊಂದುತ್ತಿದ್ದಾರೆ.

ಜೇನು ಸಾಕಾಣಿಕೆಯನ್ನು ಮಾಡಲು ಸರಕಾರದಿಂದ ಅನೇಕ ರೀತಿ ಯೋಜನೆಗಳ ಲಭ್ಯವಿದ್ದು ನಾವು ಅವುಗಳನ್ನು ಬಳಸಿಕೊಂಡು  ಜೇನು ಸಾಕಾಣಿಕೆಯನ್ನು ಮಾಡಿ ನಮ್ಮ ಜೀವನದಲ್ಲಿ ಮುಂದೆ ಬರಬಹುದು. ಜೇನು ಸಾಕಾಣಿಕೆಯಲ್ಲಿ ಮತ್ತೊಂದು ವಿಶೇಷವಾದ ಅಂಶವೇನೆಂದರೆ ಇದರಲ್ಲಿ ಹೆಚ್ಚು ಖರ್ಚಿಲ್ಲದೆ ನಾವು ಸುಲಭವಾಗಿ ಇದನ್ನು ಮಾಡಬಹುದು. ಇದನ್ನು ಮಾಡಲು ನಾವು ಹೆಚ್ಚಿನ ಸಮಯವನ್ನು ದಿನನಿತ್ಯ ಹೂಡಿಕೆ ಮಾಡುವ ಅವಶ್ಯಕತೆ ಇರುವುದಿಲ್ಲ. ಸರ್ಕಾರದ ಜೇನು ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಾವು ತರಬೇತಿಯನ್ನು ಪಡೆದು ಜೇನು ಸಾಕಣೆಯನ್ನು ಆರಂಭಿಸಲು ಸೂಕ್ತವಾಗಿದೆ.

ಜೇನು ಸಾಕಾಣಿಕೆಯಲ್ಲಿ ಮತ್ತೊಂದು ವಿಶೇಷವೇನೆಂದರೆ ಬೇರೆ ತರಹದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ವೇದಿಕೆ ಇಲ್ಲ ಆದರೆ ಜೇನುತುಪ್ಪಕ್ಕೆ ಮಾರುಕಟ್ಟೆಯಲ್ಲಿ ಅತ್ಯಂತ ಉತ್ತಮವಾದ ಒಂದು ವೇದಿಕೆ ಇದೆ. ಒಂದು ಬಾಕ್ಸ್ ನಲ್ಲಿ ಒಂದು ಜೇನು ಕುಟುಂಬದ ಮೂಲಕ ವಾರ್ಷಿಕವಾಗಿ 8 ರಿಂದ 10 ಕೆಜಿ ತುಪ್ಪವನ್ನು ನಾವು ತೆಗೆಯಬಹುದು. ಇವತ್ತಿನ ಮಾರುಕಟ್ಟೆಯಲ್ಲಿ ಕೆಜಿಗೆ ರೂ.250 ರಿಂದ 350 ರೂಪಾಯಿವರೆಗೆ ಬೆಲೆ ಇರುತ್ತದೆ. ಜೇನು ಸಾಕಾಣಿಕೆಯನ್ನು ಆರಂಭ ಮಾಡಿ ನಿಮ್ಮ ಜೀವನವನ್ನು ಸುಂದರ ಮಾಡಿಕೊಳ್ಳಿ.

Leave a Reply

Your email address will not be published. Required fields are marked *