18 May 2024

ಹೊಸ ವರ್ಷದಿಂದ ನಿಮ್ಮ ಗ್ಯಾಸ್ ಸಿಲಿಂಡರ ಕೇವಲ 500 ಮಾತ್ರ, ಕೆಂದ್ರ ಸರಕಾರದಿಂದ ಭರ್ಜರಿ ಘೋಷಣೆ ಎಸ್ಟು ನಿಜ ಇಲ್ಲಿದೆ ಮಾಹಿತಿ

ಹೊಸ ವರ್ಷದಿಂದ ನಿಮ್ಮ ಗ್ಯಾಸ್ ಸಿಲಿಂಡರ ಕೇವಲ 500 ಮಾತ್ರ

ಅಡುಗೆ ಅನಿಲ ಸಂಪರ್ಕ ಹೊಂದಿರುವವರು
ಆಧಾರ್ E-KYC ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ.

ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ
ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ E-KYC ಮಾಡಿಸಬಹುದಾಗಿದೆ. ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್ ನ್ನು ಮನೆಗೆ
ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ
 E-KYC ಮೊಬೈಲ್ ಆ್ಯಪ್ ಗಳ ಮೂಲಕ E-KYC ಮಾಡಿಸಬಹುದಾಗಿದೆ.

ಈ ಪ್ರಯುಕ್ತ ಸಾರ್ವಜನಿಕರು ಆತಂಕದಿಂದ ಗ್ಯಾಸ್ಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ ಎಂದು ಸಾರ್ವಜನಿಕದ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಉಜ್ವಲ್ ಯೋಜನೆ ಅಡಿಯಲ್ಲಿ ಇರುವ ಗ್ಯಾಸ್ ಸಿಲಿಂಡರ್ ಗಳಿಗೆ ಮಾತ್ರ ಈ ಯೋಜನೆ ಲಭಿಸುವುದು.

ನಿಮ್ಮ ಗ್ಯಾಸ್ ಏಜೆನ್ಸಿ ಯನ್ನು ಸಂಪರ್ಕಿಸಿ ಈ ಕೆವೈಸಿ ಮಾಡಿಸಿಕೊಳ್ಳಬೇಕು
ಇಲ್ಲವಾದರೆ ನಿಮಗೆ ಸಬ್ಸಿಡಿ ಹಣ ದೊರೆಯುವುದಿಲ್ಲ
ಸರ್ಕಾರದ ಆದೇಶದಂತೆ ಯಾವುದೇ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ

ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ
ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ EKyc ಮಾಡಿಸಬೇಕು. ಉಳಿದ ಗ್ರಾಹಕರು ಕೆವೈಸಿ
ಮಾಡಿಸಬೇಕಾದ ಅಗತ್ಯವಿಲ್ಲ.

ಕೆವೈಸಿ ಮಾಡಿಸಿದಾಕ್ಷಣ 500 ರೂಗೆ ಗ್ಯಾಸ್ ಸಿಲಿಂಡ‌ರ್ ಸಿಗುತ್ತದೆ ಎಂಬುದು ಸುಳ್ಳು” ಎಂದು ತಿಳಿಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಹೇಮಲತಾರವರು ವಾರ್ತಾಭಾರತಿಯೊಂದಿಗೆ ಮಾತನಾಡಿ, “ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ
ಸಂದೇಶದಲ್ಲಿ ಹುರುಳಿಲ್ಲ.

ಉಜ್ವಲ ಗ್ರಾಹಕರಿಗೆ ಮಾತ್ರ ಆಧಾರ್ ದೃಢೀಕರಣ ಕಡ್ಡಾಯವಾಗಿದೆ.ಉಳಿದ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಬ್ಸಿಡಿ ಘೋಷಣೆ ಮಾಡಿಲ್ಲ. ಹಾಗಾಗಿ ಗ್ರಾಹಕರು ಗೊಂದಲಕ್ಕೆ ಒಳಗಾಗಬಾರದು” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *