19 May 2024

ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಆಗಿದೆಯಾ

ಗೃಹಲಕ್ಷ್ಮಿಯೋಜನೆಗೆ ಇನ್ನೂ ಸಿಗದ ಆರಂಭ; 2 ಸಾವಿರ ಯಾವಾಗ? ಕಾಯ್ತಿದ್ದಾರೆ ಸ್ತ್ರೀಯರು! ಈ ಎಲ್ಲ ಮಾಹಿತಿಗಾಗಿ ಲೇಖನಿಯನ್ನು ಸಂಪೂರ್ಣವಾಗಿ ಓದಿ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಐದು ದಿನ ಕಳೆದರೂ ಸರ್ವರ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಇದು ಒಂದ್ಕಡೆಯಾದರೆ ಗೃಹಲಕ್ಷ್ಮಿ ಅರ್ಜಿ ನೋಂದಣಿ ಆರಂಭ ಇನ್ನೂ ಆರಂಭ ಆಗಿಲ್ಲ.

ಹೌದು ಜೂನ್ 15ರಿಂದಲೇ ರಿಜಿಸ್ಟ್ರೇಷನ್ ಎಂದಿದ್ದ ಸರ್ಕಾರದ‌ ಮಾತು ಕೇಳಿ ಪ್ರತಿ ತಿಂಗಳು ಎರಡು ಸಾವಿರ ಪಡೆಯಲು ಮನೆಯ ಯಜಮಾನಿಯರು ಕಾಯುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆ ಅರ್ಜಿ‌ ಸಲ್ಲಿಸಲು ಅಗತ್ಯವಿರೋ ಸಾಫ್ಟ್‌ವೇರ್ ಇನ್ನೂ ರೆಡಿ ಆಗಿಲ್ಲ.

ಸದ್ಯ ಪ್ರಗತಿಯಲ್ಲಿರುವ ತಾಂತ್ರಿಕ ಕಾರ್ಯ ಮುಗಿಯಲು ಕನಿಷ್ಠ 2 ವಾರ ಬೇಕಂತೆ.‌ ಹೀಗಾಗಿ ಯೋಜನೆ ಜಾರಿ ಇನ್ನೆರಡು ವಾರ ವಿಳಂಬ ಆಗುವ ಸಾಧ್ಯತೆಯಿದೆ.
ಪೂರ್ವ ಸಿದ್ಧತೆ ಇಲ್ಲದೆ ಯೋಜನೆ ಜಾರಿಗೆ ಮುಂದಾಗಿದ್ದು, ಅರ್ಜಿ ಸಲ್ಲಿಕೆ ಪ್ರತಿಕ್ರಿಯೆ ತಡವಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಯೋಜನೆ ಜಾರಿ ಬಗ್ಗೆ ಮಾತನಾಡುತ್ತಿದ್ದರೂ, ಇದುವರೆಗೆ ಯೋಜನೆಗೆ ಸಂಬಂಧಿಸಿದ ಸಾಫ್ಟ್‌ವೇರ್ ಸಿದ್ಧವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ಹೊಂದಾಣಿಕೆ ಸಮಸ್ಯೆ ಬಹುದೊಡ್ಡ ತಲೆನೋವಾಗಿದೆಯಂತೆ.

ಉಳಿದಂತೆ ಗೃಹಜ್ಯೋತಿ ರೀತಿ ಗೊಂದಲ ಆಗದಂತೆ ಎಲ್ಲಾ ಕ್ರಮಗಳನ್ನು ಕೈಗೊಂಡು, ಅರ್ಜಿ ಸಲ್ಲಿಕೆಗೆ ಚಾಲನೆ ನೀಡಲು ಸರ್ಕಾರ ಎದುರು ನೋಡುತ್ತಿದೆಯಂತೆ.

ಇನ್ನು, ಯೋಜನೆಗೆ ಅನುದಾನ ಹೊಂದಿಸಲು ವಿಳಂಬ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಜುಲೈವರೆಗೂ ಗೃಹ ಲಕ್ಷ್ಮಿಗೆ ಯಜಮಾನಿಯರು ಕಾಯಲೇಬೇಕು.

Leave a Reply

Your email address will not be published. Required fields are marked *