21 May 2024

ಮುಂದೆ ಜಾರಿ ಆಗಲಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು

ಸರ್ಕಾರದ ಗ್ಯಾರಂಟಿ ಸಂಪೂರ್ಣ ಮಾಹಿತಿ

ಎಲ್ಲರಿಗೂ ನಮಸ್ಕಾರ ಬಂಧುಗಳೇ. ಇತ್ತೀಚಿಗೆ ನಡೆದ ಎಲೆಕ್ಷನ್ ನಲ್ಲಿ ಬಹುಮತದಿಂದ ಆಯ್ಕೆಯಾಗಿರುವ ಅಂತಹ ಕಾಂಗ್ರೆಸ್ ಪಕ್ಷದಲ್ಲಿ  ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ ಮತ್ತು ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇವರು ಈ ಚುನಾವಣೆಯಲ್ಲಿ ಗೆಲ್ಲಲು ಅವರ ಅತ್ಯಂತ ನಂಬಿಕೆಯ ಹಲವು ಯೋಜನೆಗಳ, ಪ್ರಣಾಳಿಕೆಯಿಂದ ಇದು ಸಾಧ್ಯವಾಯಿತು ಮತ್ತು ಜನರ ನಂಬಿಕೆಯನ್ನು ಗಳಿಸಿತು. ಈ ಯೋಜನೆಗಳು ಜನರ ಒಂದು ಮನಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಅತ್ಯಂತ ನಂಬಿಕೆ ಮತ್ತು ಭರವಸೆಯನ್ನು ಮೂಡಿಸಿದೆ. ಅದೇ ರೀತಿ ಪಕ್ಷವು ಕೂಡ ಈ ನಂಬಿಕೆ ಮತ್ತು ಭರವಸೆಗಳನ್ನು ಉಳಿಸಿಕೊಳ್ಳಲು ತಮ್ಮ ಈ ಯೋಜನೆಗಳನ್ನು ಇತ್ತೀಚಿಗೆ ಜಾರಿಗೆಗೋಳಿಸಲಾಗಿದೆ. ನಾವು ಈ ಒಂದು ಲೇಖನದಲ್ಲಿ ಆ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯ ತನಕ ಓದಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
ಈ ಲೇಖನದಲ್ಲಿ ನಾವು ಮೊದಲು ಗೃಹಲಕ್ಷ್ಮಿ ಎಂಬ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಈ ಯೋಜನೆಯ ಉದ್ದೇಶ ಏನು ಮತ್ತು ಈ ಯೋಜನೆಗಳಲ್ಲಿ ಯಾವ ಯಾವ ಪ್ರಮುಖ ಅಂಶಗಳಿವೆ ಎಂದು ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಈ ಯೋಜನೆಯ ಹೆಸರು ಈ ಕೆಳಗಿನಂತಿದೆ.

1.ಗೃಹಲಕ್ಷ್ಮಿ ಯೋಜನೆ:

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ನಂತರ ಮೊದಲನೆಯ ಸಚಿವ ಸಂಪುಟದಲ್ಲಿ ತಮ್ಮ ಯೋಜನೆಗಳನ್ನು ಜಾರಿಗೆಗೊಳಿಸಲು ಘೋಷಣೆಯನ್ನು ಸಿದ್ಧ ಮಾಡಿದ್ದಾರೆ. ಈ ಯೋಜನೆಯ ಹೆಸರೇ ತಿಳಿಸುವಂತೆ ಗೃಹಲಕ್ಷ್ಮಿ ಎಂದರೆ, ಮನೆಯ ಒಡತಿಗೆ ಲಕ್ಷ್ಮಿ ಎಂದರೆ ದುಡ್ಡನ್ನು ಕೊಡುವ ಒಂದು ಈ ಯೋಜನೆಯನ್ನು ಜಾರಿಗೊಳಿಸಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರಮುಖವಾಗಿ ಮನೆಯ ಒಡತಿಗೆ ಅಂದರೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಕೊಡುವ ಈ ಯೋಜನೆ ಬಹಳ ಅತ್ಯಂತ ಉಪಕಾರಿಯಾಗಿದೆ ಎಂದು ಹೇಳಲು ತಪ್ಪಾಗಲಿಕ್ಕಿಲ್ಲಾ.ಈ ಯೋಜನೆಯನ್ನು 2023 ಚುನಾವಣೆಗೆ ಪ್ರಣಾಳಿಕೆಯಾಗಿ ಸಿದ್ಧಪಡಿಸಿರುವ ಸಿಎಂ ಸಿದ್ದರಾಮಯ್ಯನವರು ಮತ್ತು ಡಿಕೆ ಶಿವಕುಮಾರ್ ಅವರು ಈ ಯೋಜನೆಯನ್ನು ಜಾರಿಗೆ ತಂದೆ ತರುತ್ತಾರೆ ಎಂದು ಎಲ್ಲರ ನಂಬಿಕೆಯೂ ಸುಳ್ಳಾಗದು.ಈ ಈ ಯೋಜನೆಯಲ್ಲಿ ಅರ್ಹರಾಗಿರುವ ಮನೆಯ ಒಡತಿಗೆ ಪ್ರತಿ ತಿಂಗಳು ರಾಜ್ಯ ಸರ್ಕಾರವು ಅಂದರೆ ಕಾಂಗ್ರೆಸ್ ಪಕ್ಷವು ತಿಂಗಳಿಗೆ ರೂ.2000 ಅನ್ನು ಕೊಡಲು ಮುಂದಾಗಿರುವ ಯೋಜನೆ ಅತ್ಯಂತ ಉಪಕಾರಿಯಾಗಿದೆ ಏಕೆಂದರೆ ಅನೇಕ ಹೆಣ್ಣು ಮಕ್ಕಳು ಹೊರಗೆ ಕೆಲಸ ಮಾಡಲು ಹೋಗುತ್ತಿಲ್ಲ ಅವರು ಬರೀ ಮನೆಯ ಅಡುಗೆ ಕೆಲಸವನ್ನು ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಾರೆ. ಅವರು ಸಣ್ಣ ಸಣ್ಣ ಖರ್ಚಿಗೂ ಕೂಡ ತನ್ನ ಮನೆಯ ಯಜಮಾನನನ್ನು ಕೇಳುವ ಒಂದು ಸನ್ನಿವೇಶವು ಇನ್ನು ಮುಂದೆ ಬರಲಾರದು ಎಂಬ ಈ ಯೋಜನೆ ಸಹಕಾರಿಯಾಗಿದೆ.
ಪ್ರತಿ ತಿಂಗಳು ರೂಪಾಯಿ 2000 ದಂತೆ ವರ್ಷಕ್ಕೆ 24,000 ರೂಪಾಯಿಯ ನೆರವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಲಾಗಿದೆ. ಮತ್ತು ಈ ಯೋಜನೆಯಿಂದ ರಾಜ್ಯದ ಒಂದುವರೆ ಕೋಟಿ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ ಎಂದು ಕೂಡ ಹೇಳಲಾಗಿದೆ.
ಕರ್ನಾಟಕ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳೂ ರೂಪಾಯಿ 2000ಗಳನ್ನು ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ.
ದಿನಾಂಕ 2023 ಮೇ 20ರಂದು, ಈ ಆದೇಶವನ್ನು ಅಧಿಕೃತವಾಗಿ ಹೊರಡಿಸಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯ ಕುಟುಂಬ ಯಜಮಾನ ಮಹಿಳೆಗೆ ಪ್ರತಿ ತಿಂಗಳ 2000ಗಳನ್ನು ನೀಡುವ ಗ್ರಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರವು ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯನ್ನು 2023 ಮೇ 20ರಂದು  ನಡೆದ ಸಚಿವ ಸಂಪುಟದ ತೀರ್ಮಾನದಂತೆ ಹೊರಡಿಸಲಾಗಿದೆ. ಮತ್ತು ಈ ಯೋಜನೆಯ ಆದೇಶದಲ್ಲಿ ಕರ್ನಾಟಕ ರಾಜ್ಯಪಾಲರ ಅಗ್ನಿಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಬಿಎಂ ಚಂದ್ರಶೇಖರ್ ರವರು ಈ ಆದೇಶಕ್ಕೆ ಹಸ್ತಾಕ್ಷರವನ್ನು ನೀಡಿದ್ದಾರೆ.
ಈ ಒಂದು ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಚುನಾವಣೆಯ ಮುಂಚೆ ಪ್ರಸ್ತಾಪಿಸಿದಾಗ ಅನೇಕ ಜನರು ಟೀಕೆಯನ್ನು ವ್ಯಕ್ತಪಡಿಸಿದರು ಕಾಂಗ್ರೆಸ್ ಸರ್ಕಾರವು ತನ್ನ ನಂಬಿಕೆ ಮತ್ತು ಭರವಸೆಯನ್ನು ಉಳಿಸಿಕೊಳ್ಳುವುದರಲ್ಲಿ ಮುಂದಾಯಿತು. ಸಿದ್ದರಾಮಯ್ಯನವರು ಮತ್ತು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ಮುಖ್ಯ ನಾಯಕರಾಗಿ ಕರ್ನಾಟಕದ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಲು ಸಾಕ್ಷಿಯಾದರು.
ಕರ್ನಾಟಕದ ಚುನಾವಣೆಯಲ್ಲಿ ಬಹುಮತ ದಿಂದ ಆರಿಸಿ ಬಂದಂತಹ ಕಾಂಗ್ರೆಸ್ ಪಕ್ಷವು ಈ ಸಲ ಅನೇಕ ಜನಹಿತ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಅವುಗಳಲ್ಲಿ ಪ್ರಮುಖವಾದ ಯೋಜನೆಎಂದರೆ, ಗೃಹಲಕ್ಷ್ಮಿ ಯೋಜನೆ.

ಮತ್ತು ಸಿಎಂ ಸಿದ್ದರಾಮಯ್ಯನವರ ಬಗ್ಗೆ ಹೇಳಬೇಕೆಂದರೆ ಅವರು ಅತ್ಯಂತ ಪ್ರಭಾವಶಾಲಿಯ ನಾಯಕರೆಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಅವರ ಮಾತಿನ ಗತ್ತು ಗಮ್ಮತ್ತು ಹಾಗೆ ಇದೆ. ಸಿದ್ದರಾಮಯ್ಯನವರು ಇದಕ್ಕಿಂತ ಮುಂಚೆ 2013 ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾದಾಗ ಸತತ ಐದು ವರ್ಷ ತಾವೇ ಅಧಿಕಾರ ನಡೆಸಿ ಪ್ರಭಾವಶಾಲಿ ನಾಯಕರೆಂದು ಕರ್ನಾಟಕ ರಾಜ್ಯದಲ್ಲಿ ಗುರುತಿಸಿಕೊಂಡರು. ಈ ಚುನಾವಣೆಯಲ್ಲಿಯೂ ಕೂಡ ತಮ್ಮ 5 ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಭರವಸೆಗಳನ್ನು ಮೂಡಿಸಿ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕ ಸರ್ಕಾರವನ್ನು ರಚಿಸಿತು. ಮತ್ತು ಸಿಎಂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಹಾಗೂ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿ ಇತ್ತೀಚಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು. ಮತ್ತು ಇವರ ಜೊತೆ ಎಂಟು ಸಚಿವರು ಕೂಡ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಸಿಎಂ ಸಿದ್ದರಾಮಯ್ಯನವರು ಮನ್ನೆ ನಡೆದ ಕಾರ್ಯಕ್ರಮದಲ್ಲಿ ತಾವು ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಕ್ಯಾಬಿನೆಟ್ ಸಂಪುಟದಲ್ಲಿ ಹಿಂದೆ ಜಾರಿಗೊಳಿಸಲು ಸಂಪೂರ್ಣ ಸಿದ್ಧತೆಯನ್ನು ನಡೆಸುತ್ತೇವೆ ಎಂದು ಜನರಲ್ಲಿ ಭರವಸೆಯನ್ನು ಮೂಡಿಸಿ ಜನರ ಪ್ರೀತಿಯನ್ನು ಗಳಿಸಿದರು. ಈ ಐದು ಗ್ಯಾರಂಟಿ ಯೋಜನೆಗಳು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

2.ಮಹಿಳೆಯರಿಗೆ ಉಚಿತ ಬಸ್ ಸೇವೆ.

ಕಾಂಗ್ರೆಸ್ ಪಕ್ಷವು ಮಹಿಳೆಯರ ಹಿತಕ್ಕಾಗಿ ಈ ಒಂದು ಯೋಜನೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದಾರೆ. ನೀ ಎಂದು ಯೋಚನೆಯಿಂದ ಮಹಿಳೆಯರನ್ನು ಆಕರ್ಷಿಸಲು ಕಾಂಗ್ರೆಸ್ ಪರ ಪಕ್ಷಕ್ಕೆ ಸಹಾಯವಾಯಿತು. ಇಂದಿನ ಕಾಲದಲ್ಲಿ ಅನೇಕ ಹಳ್ಳಿ ಮಹಿಳೆಯರು ಹೊರಗೆ ಹೋಗದೆ ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡು, ತಮ್ಮ ಜೀವನವನ್ನು ಸಾಗಿಸುತ್ತಾರೆ. ಉಚಿತ ಬಸ್ ಸೇವೆ ಈ ಒಂದು ಯೋಜನೆಯಿಂದ ಅನೇಕ ಮಹಿಳೆಯರು ಹೊರ ಹೋಗಲು ಸಹಾಯವಾಗುತ್ತದೆ. ಉಚಿತ ಬಸ್ ಸೇವೆ ಯೋಜನೆಯನ್ನು ಜಾರಿಗೆ ಹೊಡಿಸಲು ಕರ್ನಾಟಕ ಸರ್ಕಾರವು ಅನೇಕ ಷರತ್ತುಗಳನ್ನು ಕೂಡ ಹಾಕುವ ಸಾಧ್ಯತೆ ಇದೆ. ಈ ತರಹದ ಯೋಜನೆಯನ್ನು ದೆಹಲಿಯ ಸರ್ಕಾರ ಕೂಡ ಈ ಹಿಂದೆ ಜಾರಿಗೆ ಗೊಳಿಸಲಾಗಿದೆ. ಆಮ್ ಆದ್ಮಿ ಪಕ್ಷವು ಈ ಯೋಜನೆಯನ್ನು ಇವರಿಗಿಂತ ಮುಂಚೆ ಜಾರಿಗೊಳಿಸಲಾಗಿದೆ. ದೆಹಲಿಯಲ್ಲಿನ ಸರ್ಕಾರವು ಉಚಿತ ಬಸ್ ಸೇವೆ ಒದಗಿಸಿದ ನಂತರ ಕೂಡ ಲಾಭದಲ್ಲಿದೆ, ಆದರೆ ಕರ್ನಾಟಕ ರಾಜ್ಯ ಸರ್ಕಾರದ ಒಂದು ಸ್ಥಿತಿ ಹೇಗೆ ಆಗುತ್ತದೆ ಎಂದು ಮುಂದೆ ನಾವು ನೋಡಬಹುದು. ಒಂದು ಯೋಜನೆಯಿಂದ ಅನೇಕ ಮಹಿಳೆಯರಿಗೆ ಸಹಾಯವಾಗುತ್ತದೆ ಮತ್ತು ವಿದ್ಯಾರ್ಥಿನಿಯರಿಗಂತು ಇದು ಒಂದು ಹೇಳಿ ಮಾಡಿಸಿದಂತ ಯೋಜನೆ ಎಂದು ಕರೆಯಬಹುದು.
ಉಚಿತ ಬಸ್ ಸೇವೆ ಈ ಯೋಜನೆಯನ್ನು ಕರ್ನಾಟಕ ಚುನಾವಣೆಯ ಮುಂಚೆ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ನೀಡಿ ಜನರನ್ನು ಆಕರ್ಷಿಸಿತ್ತು. ಈ ಒಂದು ಯೋಜನೆಯ ಘೋಷಣೆ ಹೀಗಿತ್ತು ” ಉಚಿತ ಪ್ರಯಾಣ, ನಮ್ಮ ಪ್ರಮಾಣ “. ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಎಂಬ ಘೋಷಣೆ ಈ ಯೋಜನೆಯದಾಗಿತ್ತು. ಈ ಯೋಜನೆಯಿಂದ ಕಾಂಗ್ರೆಸ್ ಪಕ್ಷವು ಪ್ರತಿ ವರ್ಷಕ್ಕೆ ಹೆಚ್ಚು ಕಡಿಮೆ 35 ಸಾವಿರ ಕೋಟಿ ತಮ್ಮ ಬಜೆಟಿನಲ್ಲಿ ತೆಗೆದಿಡಬೇಕಾಗುತ್ತದೆ. ಏಕೆಂದರೆ ಈಗಾಗಲೇ ಕರ್ನಾಟಕ ಸಾರಿಗೆ ಸಂಸ್ಥೆಯು ಸ್ವಲ್ಪ ಹಾನಿ ಎಲ್ಲಿದೆ ಎಂದು ಅನೇಕ ಮೂಲಗಳಿಂದ ತಿಳಿದು ಬಂದಿದೆ. ಆದ್ದರಿಂದ ಈ ಯೋಜನೆಯನ್ನು ಜಾರಿಗೆ ಗೊಳಿಸುವುದರಿಂದ ಕರ್ನಾಟಕ ಸಾರಿಗೆ ಸಂಸ್ಥೆಯು ಹಾನಿಯಾಗಬಹುದೆಂದು ಅನೇಕ ಜನರು ಮಾತನಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣ ಸೇವೆ ಈ ಯೋಜನೆಯು ಅನೇಕ ಶರತ್ತುಗಳನ್ನು ಹೊಂದುತ್ತದೆ ಎಂದು ಅನೇಕ ಜನರು ಹೇಳುತ್ತಿದ್ದಾರೆ ಏಕೆಂದರೆ, ಹೈಟೆಕ್ ಬಸ್ಗಳಾದಂತಹ
ವೋಲ್ವೋ, ರಾಜಹಂಸ ಈ ಬಸ್ಗಳನ್ನು ಹೊರತುಪಡಿಸಿ ಬೇರೆ ಬಸ್ಸುಗಳಲ್ಲಿ ಜಾರಿಗೆ ಉಳಿಸುವ ಸಾಧ್ಯತೆ ಇದೆ.

ಈ ಒಂದು ಯೋಜನೆಯ ಮೇಲೆ ಕರ್ನಾಟಕ ರಾಜ್ಯ ಸರ್ಕಾರವು ಯಾವ ರೀತಿ ಶರತ್ತುಗಳನ್ನು ಹಾಕಬಹುದೆಂದು ನಾವು ಕೆಳಗೆ ಚರ್ಚಿಸೋಣ. ಮೊದಲನೆಯದಾಗಿ ಇಂತಿಷ್ಟು ಕಿಲೋಮೀಟರ್ ನವರೆಗೆ ಮಾತ್ರ ಉಚಿತ ಬಸ್ ಪ್ರಯಾಣ?. ಏಕೆಂದರೆ ಪ್ರಯಾಣಿಕರು ಎಷ್ಟು ಕಿಲೋಮೀಟರ್ ವರೆಗೆ ಬೇಕು ಅಷ್ಟು ಕಿ.ಮೀ ಅವರಿಗೆ ಉಚಿತ ಪ್ರಯಾಣವನ್ನು ದೊರಕಿಸಿದರೆ ಕರ್ನಾಟಕ ಸಾರಿಗೆ ಸಂಸ್ಥೆಯು ಹಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ಈ ಷರತ್ತನ್ನು ಹಾಕಬಹುದು ಎಂದು ನಾವು ಭಾವಿಸಬಹುದು.
ಇದಕ್ಕೆ ಬೇರೆ ಬಸ್ ಪಾಸ್ ದೊರಕಿಸುವ ಸಾಧ್ಯತೆಗಳು ಕೂಡ ಇವೆ.
ಅಥವಾ ನಿರ್ದಿಷ್ಟ ಒಂದು ಮತ್ತು ಇನ್ನೊಂದು ಊರಿನ ನಡುವೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ? ಸಾಧ್ಯತೆಗಳು ಕೂಡ ಇವೆ. ನಾವು ಈ ಯೋಜನೆಯನ್ನು ಅಧಿಕೃತವಾಗಿ ಜಾರಿಗೆಗೊಳಿಸುವ ತನಕ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.  ಒಲ್ವೋ ಬಸ್ಸನ್ನು ಹೊರತುಪಡಿಸಿ  ಹೊರತುಪಡಿಸಿ ಬಿಎಂಟಿಸಿ ಬಸ್ ಗಳಿಗೆ ಮಾತ್ರ ಅವಕಾಶಗಳನ್ನು  ಒದಗಿಸಿ ಕೊಡಬಹುದು ಎಂದು ನಾವು ಭಾವಿಸಬಹುದು?.
ಅಥವಾ ವರ್ಷಕ್ಕೆ ಇಷ್ಟೇ ಪ್ರಯಾಣ ಮಾಡಬಹುದು ಉಚಿತವಾಗಿ ಎಂದು ಯೋಜನೆ ಜಾರಿಗೆ ಗೊಳಿಸುವ ವಸಾಧ್ಯವೂ ಕೂಡ ಇವೆ.ಏಕೆಂದರೆ ವರ್ಷಪೂರ್ತಿ ಉಚಿತವಾಗಿ ಪ್ರಯಾಣ ಮಾಡಲು ಅನುಮತಿ ನೀಡಿದರೆ ರಾಜ್ಯ ಸಾರಿಗೆ ಸಂಸ್ಥೆಯು ಹಾನಿಗೊಳಗಾಗಬಹುದು. ಹಾಲಿಡೇ ಟ್ರಿಪ್, ಪ್ರವಾಸ ಮತ್ತು ಮುಂತಾದ ಮನರಂಜನೆಗಳಿಗಾಗಿ ಹೋಗುವ ಪ್ರಯಾಣಕ್ಕೆ ಅನುಮತಿ ನೀಡಬಹುದೇ? ಕಾಯ್ದು ನೋಡೋಣ ನಾವು ಈ ಯೋಜನೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರವು ಘೋಷಣೆಯಾಗುವ ತನಕ ನಾವು ಯಾವುದೇ ರೀತಿಯ ಊಹೆ  ಮಾಡಲಾಗುವುದಿಲ್ಲ.
ಚುನಾವಣೆಯ ಮುಂಚೆ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ನಾವು ಈ ಐದು  ಗ್ಯಾರಂಟಿ ಯೋಜನೆಗಳನ್ನು, ಜೂನ್ 1 ನೇ ತಾರೀಖಿನಿಂದಲೇ ಜಾರಿಗೆ ಗೊಳಿಸುತ್ತೇವೆ ಎಂದು ಜನರಲ್ಲಿ ಭರವಸೆಯನ್ನು ಮೂಡಿಸಿದ್ದರು. ಈ ಯೋಜನೆಯನ್ನು ಜೂನ್ ಒಂದನೇ ತಾರೀಕು ಒಳಗಡೆ ಇವರು ಜಾರಿಗೆಗೊಳಿಸಲಿಲ್ಲವೆಂದರೆ ಜನರು ಜಗಳಕ್ಕೆ ಏಳುವ ಸಾಧ್ಯತೆವಿದೆ. ಇದರಿಂದ ಅನೇಕ ಹೆಣ್ಣು ಮಕ್ಕಳು ಅನೇಕ ಬಸ್ಸುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜಗಳ ತೆಗೆಯುತ್ತಿದ್ದಾರೆ ನಾವು ಏಕೆ ಟಿಕೆಟ್ ತೆಗೆದುಕೊಳ್ಳಬೇಕು? ಕಾಂಗ್ರೆಸ್ ಸರ್ಕಾರವು ಜೂನ್ 1 ನೇ ತಾರೀಖಿನ ಒಳಗಡೆ ಈ ಯೋಜನೆಯನ್ನು ಜಾರಿಗೆ ಗೊಳಿಸಿದರೆ ಕರ್ನಾಟಕದಲ್ಲಿ ಹಿತವಾದ ವಾತಾವರಣವನ್ನು ನಾವು ನೋಡಬಹುದು. ಡಿಕೆ ಶಿವಕುಮಾರ್ ಅವರು ಇತ್ತೀಚಿಗೆ ಒಂದು ಸಭೆಯಲ್ಲಿ ಹೀಗೆ ಹೇಳಿದ್ದರು, ನಾವು ಕ್ಯಾಬಿನೆಟ್ ಸಭೆಯಲ್ಲಿ ಈ ಐದು ಯೋಜನೆಗಳನ್ನು ಜಾರಿಗೊಳಿಸುವ ಒಪ್ಪಿಗೆಯನ್ನು ನೀಡುತ್ತೇವೆ ಎಂದು. ನಾವು ಇದನ್ನು ಜೂನ್ ಒಂದನೇ ತಾರೀಕಿನವರೆಗೆ ಕಾಯ್ದು ನೋಡಬೇಕು ಹೇಗೆ ಮಾಡುತ್ತಾರೆ ಎಂದು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಜನರ ತಲೆಯಲ್ಲಿರುವುದು ಒಂದೇ ಅವುಗಳೇನೆಂದರೆ 5 ಗ್ಯಾರಂಟಿ ಯೋಜನೆಗಳು. ಏಕೆಂದರೆ ಕಾಂಗ್ರೆಸ್ ಸರ್ಕಾರವು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಈ ಐದು ಗ್ಯಾರಂಟಿ ಯೋಜನೆಗಳೇ ಸಹಾಯ ಮಾಡಿದವು. ಕಾಂಗ್ರೆಸ್ ಪಕ್ಷವು ಮೊದಲ ಕ್ಯಾಬಿನೆಟ್ ಸಭೆಯಲ್ಲಿ 5 ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಮತ್ತು ಸಭೆಯಲ್ಲಿ ನಾಲ್ಕು ದಿನಗಳ ಹಿಂದೆಯೇ ಜಾರಿಗೆಗೊಳಿಸಲು ಆದೇಶವನ್ನು ಹೊರಡಿಸಿದ್ದಾರೆ.
“ಪಂಚ ಗ್ಯಾರಂಟಿ ” ಆದೇಶಿಸಿದ ರಾಜ್ಯ ಸರ್ಕಾರ.
ಕರ್ನಾಟಕ ಸರ್ಕಾರದ ಕಳೆದ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರು 3.10 ಲಕ್ಷ ಕೋಟಿ ಗಾತ್ರದ ಬಜೆಟನ್ನು ಮಂಡನೆ ಮಾಡಿದ್ದರು. ಸಿದ್ದರಾಮಯ್ಯನವರು ಹೇಳಿದ ಪ್ರಕಾರ ಈ ಐದು ಪಂಚ ಗ್ಯಾರಂಟಿ ಯೋಜನೆ ಗಳಿಗೆ ವರ್ಷಕ್ಕೆ 50,000 ಕೋಟಿ ಖರ್ಚಾಗಬಹುದು ಎಂದು ತಮ್ಮ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

3.ಅನ್ನಭಾಗ್ಯ

ಬಡವರಿಗೆ ಆಹಾರ ಭದ್ರತೆ ಅನ್ನಭಾಗ್ಯ, ಯೋಜನೆಯಡಿ ರಾಜ್ಯದ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ನೀಡಲು ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಆದೇಶವನ್ನು ಹೊರಡಿಸಿದೆ.
ಇಷ್ಟು ದಿನಗಳವರೆಗೆ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರವು ಒದಗಿಸುತ್ತಿತ್ತು. 2023ರ ಚುನಾವಣೆಯ ಮುಂಚೆ ರಾಜ್ಯ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಈ ಹಿಂದೆ ಯೋಜನೆಯನ್ನು ಐದು ಕೆಜಿಯಿಂದ 10 ಕೆಜಿವರೆಗೆ ಹೆಚ್ಚಿಸುತ್ತೇವೆ ಎಂದು ಜನರಲ್ಲಿ ಭರವಸೆ ಮೂಡಿಸಿದ್ದರು. ಅದೇ ರೀತಿ ಜನರ ಭರವಸೆಯನ್ನು ಉಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಪಕ್ಷವು ಈ ಎಂದು ಯೋಜನೆಗೆ ಕೆಲವು ದಿನಗಳ ಮುಂಚೆ ಆದೇಶವನ್ನು ಹೊರಡಿಸಿದೆ.
2013ರಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಗ ಸಿಎಂ ಸಿದ್ದರಾಮಯ್ಯನವರು ಈ ಯೋಜನೆಯಲ್ಲಿ ಪ್ರತಿಯೊಬ್ಬ ಬಿಪಿಎಲ್ ಕುಟುಂಬದ ವ್ಯಕ್ತಿಗೆ 7 ಕೆಜಿ ಅಕ್ಕಿಯನ್ನು ಒದಗಿಸುತ್ತಿದ್ದರು. ನಂತರ 7 ಕೆಜಿ ಯನ್ನು 5 ಕೆಜಿಗೆ ಕಡಿಮೆ ಮಾಡಿದರು. ಮತ್ತು ಕೊರೋನಾ ಸಮಯದಲ್ಲಿ ಈ 7 ಕೆಜಿ ಯನ್ನು 10 ಕೆಜಿಗೆ ಹೆಚ್ಚಿಸಿ ಮತ್ತೆ 5 ಕೆಜಿಗೆ ಕಡಿಮೆ ಮಾಡಿದ್ದರು.
ಈ 5 ಕೆ.ಜಿಯನ್ನು ಮತ್ತೆ ರಾಜ್ಯ ಕಾಂಗ್ರೆಸ್ ಪಕ್ಷವು ಈ ವರ್ಷ 10 ಕೆಜಿಗೆ ಹೆಚ್ಚಿಸಲು ಮುಂದಾಗಿದ್ದಾರೆ. ಈ ಒಂದು ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಪಕ್ಷವು ಅನ್ನಭಾಗ್ಯ ಎಂಬ ಯೋಜನೆಯ ಹೆಸರಿಂದ ಕರೆಯಲಾಗುತ್ತಿದೆ. ಈ ಒಂದು ಯೋಜನೆಯಿಂದ ಅನೇಕ ಬಡ ಕುಟುಂಬಗಳಿಗೆ ಸಹಾಯವಾಗಿದೆ. ಏಕೆಂದರೆ ಅನೇಕ ಬಡ ಕುಟುಂಬದ ವ್ಯಕ್ತಿಗಳು ಒಂದು ಹೊತ್ತು ಊಟಕ್ಕೆ ಪರಿದಾಡುವಂತಹ ಪರಿಸ್ಥಿತಿ ಇಂದು ಇಲ್ಲ. ಈ ಒಂದು ಯೋಜನೆಯಿಂದ ಪ್ರತಿಯೊಬ್ಬ ಬಡ ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯನ್ನು ಪಡೆದುಕೊಳ್ಳಲು ಅನೇಕ ರೀತಿಯ ಅರ್ಹತೆಗಳನ್ನು ಹೊಂದಿರಬೇಕು. ಅವುಗಳೆಂದರೆ, ಪ್ರಮುಖವಾಗಿ ಬಿಪಿಎಲ್ ಕಾರ್ಡ್  ಹೊಂದಿರಬೇಕು. ಮತ್ತು ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿಯೊಂದು ಕುಟುಂಬಕ್ಕೂ ಈ ಯೋಜನೆಯ ಸಹಾಯ ಸಿಗಲಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದರೆ ಸಾಕಾಗದು ಏಕೆಂದರೆ ಪ್ರತಿಯೊಬ್ಬರೂ ಬಿಪಿಎಲ್ ಕಾರ್ಡ್ಗಳಿಗೆ ಆಧಾರ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಲೇಬೇಕು. ಬಿಪಿಎಲ್ ಕಾರ್ಡ್ಗಳಿಗೆ ಆಧಾರ್ ಲಿಂಕ್ ಅನ್ನು ಮಾಡಿಸಲು ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅಥವಾ ನೀವು ಮೊಬೈಲ್ ನಲ್ಲಿಯೇ ಸರ್ಕಾರದ ಒಂದು ವೆಬ್ಸೈಟ್ನಲ್ಲಿ ನೀವು ಆಧಾರ್ ಲಿಂಕ್ ಅನ್ನು ಮಾಡಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಬಿಪಿಎಲ್ ಕಾರ್ಡ್ ವೋಟರ್ ಕಾರ್ಡ್ ಈ ಎಲ್ಲಾ ಸರ್ಕಾರದ ಒಂದು ಐಡೆಂಟಿಟಿ ಕಾರ್ಡ್ ಗಳಿಗೆ ನೀವು ಕಡ್ಡಾಯವಾಗಿ ಆಧಾರ್ ಲಿಂಕ್ ಅನ್ನು ಮಾಡಿಸಲೇಬೇಕು. ಅನ್ನ ಭಾಗ್ಯ ಯೋಜನೆಯನ್ನು ಕಡ್ಡಾಯವಾಗಿ ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಅನ್ನು ಬಿಪಿಎಲ್ ಕಾರ್ಡಿಗೆ ಮಾಡಿಸಬೇಕು.

4.ಯುವನಿಧಿ

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆಯ ಮುಂಚೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದರು. ಈ ಒಂದು ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯೋಜನೆ ಎಂದರೆ ಯುವನಿಧಿ. ಈ ಯೋಜನೆಯಲ್ಲಿ
ನಿರುದ್ಯೋಗಿ ಯುವ ಜನತೆಗೆ ಆರ್ಥಿಕ ಸಹಾಯವನ್ನು ಒದಗಿಸುವ ಒಂದು ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಪದವಿಯನ್ನು ಮುಗಿಸಿ ಯಾವುದೇ ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತುಕೊಂಡ ಯುವ ಜನತೆಗೆ ಒಂದು ಆರ್ಥಿಕ ಸಹಾಯವನ್ನು ನೀಡಲು ಈ ಯೋಜನೆಯನ್ನು ಜಾರಿಗೆಗೊಳಿಸಲು ಮುಂದಾಗಿದೆ. ಯೋಜನೆಯಲ್ಲಿ ಪ್ರಮುಖವಾಗಿ ಪದವೀಧರ ನಿರುದ್ಯೋಗಿ ಯುವ ಜನತೆಗೆ ಮಾಸಿಕವಾಗಿ ಒಂದು ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಪ್ರತಿ ವರ್ಷ ಅನೇಕ ಜನರು ಪದವಿಯನ್ನು ಮುಗಿಸಿ ಯಾವುದೇ ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತ ಸನ್ನಿವೇಶ ಇಂದು ಉಂಟಾಗಿದೆ. ಈ ಒಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಪಕ್ಷವು ಯುವಜನ ಬೇರೆ ಯಾವುದಾದರೂ ದಾರಿಯನ್ನು ಹುಡುಕಿಕೊಂಡು ಈ ಎಂದು ಯೋಜನೆಯನ್ನು ಜಾರಿಗೆ ಗೊಳಿಸಲಾಗುತ್ತಿದೆ.
ಈ ಯೋಜನೆಯನ್ನು ಪಡೆದುಕೊಳ್ಳಲು ಪದವಿಯನ್ನು ಮುಗಿಸಿದರೆ ಸಾಕು. ಯಾವುದೇ ಪದವೇ ಆಗಿರಬಹುದು ಬಿಎ, ಬಿಎಸ್ಸಿ,ಬಿಕಾಂ, ಬಿ.ಟೆಕ್,  ಡಿಪ್ಲೋಮಾ ಮತ್ತು ಮೆಡಿಕಲ್ ಹಾಗೂ ಇತ್ಯಾದಿ ಪದವಿಯನ್ನು ಮುಗಿಸಿ ಮನೆಯಲ್ಲೇ ಕುಳಿತುಕೊಂಡ ಯುವ ಜನತೆಗೆ ಇಂದು ಯೋಜನೆ ಸಹಾಯವಾಗಲಿದೆ. ಈ ಯೋಜನೆಯ  ಸಂಪೂರ್ಣವಾದ ಮಾಹಿತಿ ಈ ಕೆಳಗಿನಂತಿದೆ :
ಪದವಿಯನ್ನು ಮುಗಿಸಿದ ಪದವೀಧರ ನಿರುದ್ಯೋಗಿ ಯುವಕರಿಗೆ ಮತ್ತು ಯುವತಿಯರಿಗೆ ಮಾಸಿಕವಾಗಿ ಪ್ರತಿ ತಿಂಗಳು ರೂಪಾಯಿ 3000 ಅನ್ನು ಕೊಡಲು ನಿರ್ಧರಿಸಿದೆ. ಪ್ರತಿ ತಿಂಗಳ 3000 ಅನ್ನು ಡಿಗ್ರಿ ಮುಗಿಸಿದ ಯುವಜನತೆಗೆ ಕೊಡಲಾಗುತ್ತದೆ. ಮತ್ತು ಅದೇ ರೀತಿ ಒಂದುವರೆ ಸಾವಿರ ರೂಪಾಯಿಯನ್ನು ಡಿಪ್ಲೋಮಾ ಮುಗಿಸಿದ ಪದವೀಧರರಿಗೆ ಕೊಡಲಾಗುತ್ತಿದೆ.

ಈ ಯೋಜನೆಯಿಂದ ಯುವಜನತೆಗೆ ಉಪಯೋಗಬಹುದೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡೆ ಮೂಡುತ್ತದೆ. ಏಕೆಂದರೆ ನಿರುದ್ಯೋಗ ಹೆಚ್ಚಬಹುದ ಎಂಬ ಆತಂಕ ಜನರಲ್ಲಿ ಹುಟ್ಟುತ್ತಿದೆ. ನಾವು ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ, ಏಕೆಂದರೆ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಡಿಗ್ರಿ ಮುಗಿಸಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳಲು ಪ್ರತಿ ತಿಂಗಳ ಖರ್ಚನ್ನು ಮನೆಯಲ್ಲಿ ಕೊಡುತ್ತಿಲ್ಲ ಆದ್ದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಡಿಗ್ರಿ ಮುಗಿಸಿದ ನಂತರ ಸಣ್ಣ ಸಣ್ಣ ಕೆಲಸಗಳಿಗೆ ಹೋಗುತ್ತಿದ್ದಾರೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಡಿಗ್ರಿ ಮುಗಿಸಿದ ನಂತರ ಪ್ರತಿ ತಿಂಗಳ ಕೋಚಿಂಗ್ನ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಈ ಒಂದು ಯೋಜನೆಯು ಮುಖ್ಯ ಸಹಾಯವನ್ನು ಮಾಡುತ್ತದೆ.
ಇದನ್ನು ನಾವು ನಿರುದ್ಯೋಗ ಭತ್ಯೆ ಎಂದು ಕೂಡ ಕರೆಯಬಹುದು.

ಈ ಒಂದು ಯೋಜನೆಯನ್ನು ಜಾರಿಗೊಳಿಸಲು ಕ್ಯಾಬಿನೆಟ್ ಸಂಪುಟದಲ್ಲಿ ಇತ್ತೀಚಿಗೆ ಅನುಮೋದನೆ ಮತ್ತು ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿವೆ. ಈ ಯೋಜನೆಯಿಂದ ಎಷ್ಟು ತಿಂಗಳು ಅಥವಾ ಎಷ್ಟು ವರ್ಷಗಳವರೆಗೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದೆಂದು ಈ ಕೆಳಗೆ ನಾವು ತಿಳಿಸಿಕೊಡುತ್ತೇವೆ. ಈ ಯೋಜನೆಯಿಂದ ಎಷ್ಟು ತಿಂಗಳು ಅಥವಾ ಎಷ್ಟು ವರ್ಷಗಳ ಎಂದು ಮಿತಿಯನ್ನು ರಾಜ್ಯ ಸರ್ಕಾರವು ನಿಗದಿಪಡಿಸಲಾಗಿದೆ.
ನಿರುದ್ಯೋಗ ಜನರಿಗೆ ಸಹಾಯ ಹಸ್ತ ಎಂಬ ಘೋಷಣೆಯ ಮೂಲಕ ಈ ಯೋಜನೆಯನ್ನು ಜಾರಿಗೆ ಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ನಿರುದ್ಯೋಗ ಪದವೀಧರರೆಂದರೆ  ನಮ್ಮ ಕರ್ನಾಟಕದಲ್ಲಿ ಅನೇಕ ಪದವೀಧರ ನಿರುದ್ಯೋಗಿಗಳಿದ್ದಾರೆ. ಆದರೆ ಈ ಒಂದು ಯೋಜನೆಯು ಅನ್ವಯ ಆಗೋದು ಕೇವಲ 2022 ಮತ್ತು 23ರ ನಂತರ ಪದವಿಯನ್ನು ಮುಗಿಸಿದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಮಾತ್ರ. ಈ ಯೋಜನೆಯ ಅಡಿಯಲ್ಲಿ ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000ಯಂತೆ ಸತತವಾಗಿ ಎರಡು ವರ್ಷಗಳವರೆಗೆ ಕೊಡಲಾಗುತ್ತದೆ. ತಿಂಗಳಿಗೆ 3000ವೆಂದರೆ ವರ್ಷಕ್ಕೆ 36,000 ವಾಗುತ್ತದೆ. ಮತ್ತು ಎರಡು ವರ್ಷಗಳಕ್ಕೆ 72 ಸಾವಿರ ಒಟ್ಟು ಮೊತ್ತವಾಗುತ್ತದೆ.ಅದೇ ರೀತಿ ಡಿಪ್ಲೋಮವನ್ನು ಮುಗಿಸಿದ ಪದವೀಧರರಿಗೆ ಪ್ರತಿ ತಿಂಗಳು 1,500 ಯಂತೆ ಎರಡು ವರ್ಷಗಳ ತನಕ ಈ ಯೋಜನೆಯನ್ನು ಅನ್ವಹಿಸಲಾಗುತ್ತದೆ.

ತಿಂಗಳಿಗೆ 1500 ರೂಪಾಯಿ ಎಂದರೆ 12 ತಿಂಗಳಿಗೆ ಒಟ್ಟು 18 ಸಾವಿರ ರೂಪಾಯಿಯ ಮೊತ್ತವಾಗುತ್ತದೆ ಮತ್ತು ಎರಡು ವರ್ಷಗಳಿಗೆ 36,000 ಒಟ್ಟು ಮೊತ್ತವಾಗುತ್ತದೆ. ಇದರಿಂದ ಅನೇಕ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬಹುದು. ಒಟ್ಟಾರೆ ಈ ಒಂದು ಯೋಜನೆಯನ್ನು ವಿದ್ಯಾರ್ಥಿ ಹಿತ ಯೋಜನೆ ಎಂದು ಕರೆಯಬಹುದು.
ಅನೇಕ ಜನರಿಗೆ ಒಂದು ಸಂಶಯ ಮೂಡುತ್ತಿದೆ ಅದೇನೆಂದರೆ ಇದು ಯುವಕರಿಗೆ ಮಾತ್ರ ಅಥವಾ ಯುವತಿಯರಿಗೂ ಕೂಡ ಇದು ಯೋಜನೆ ಜಾರಿಯಾಗುತ್ತದೆ ಎಂದು ಕೇಳ್ತಿದ್ದಾರೆ. ನನ್ನ ಮಿತ್ರರೇ ದಯವಿಟ್ಟು ಯಾವುದೇ ಸಂಶಯವನ್ನು ಮಾಡಿಕೊಳ್ಳಬೇಡಿ. ಈ ಒಂದು ಯೋಜನೆಯು ಯುವಕ ಮತ್ತು ಯುವತಿಯರಿಗೂ ಇಬ್ಬರಿಗೂ ಕೂಡ ಅನ್ವಯಿಸುತ್ತದೆ.
ಎಲ್ಲರ ಒಂದು ಆಶಯದಂತೆ ಈ ಒಂದು ಯೋಜನೆಯು ಆದಷ್ಟು ಬೇಗ ಜಾರಿಗೆ ಆಗಲಿ ಎಂದು ನಾವು ಆಶಿಸೋಣ ಏಕೆಂದರೆ ಇದು ಅನೇಕ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಸಹಾಯವಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಒಂದು ಯೋಜನೆಯಿಂದ ಪ್ರತಿ ವರ್ಷಕ್ಕೆ ಒಬ್ಬ ಡಿಗ್ರಿ ಮುಗಿಸಿದ ಪದವೀಧರರು ತಿಂಗಳಿಗೆ 3000ಯಂತೆ ವರ್ಷಕ್ಕೆ 36,000 ಯನ್ನು ಪಡೆದುಕೊಂಡು ತಮ್ಮ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಮುಂದಿನ ಯಾವುದೇ ರೀತಿಯ ತಮ್ಮ ಒಂದು ಉದ್ಯೋಗಕ್ಕಾಗಿ ಹುಡುಕಿಕೊಳ್ಳಲು ಈ ಒಂದು ಮೊತ್ತವು ಸಹಾಯವಾಗುತ್ತದೆ.
ಇದರಿಂದ ಅನೇಕ ಜನರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ಮತ್ತು ನಾ ನಿಮಗೆ ಒಂದು ಕೇಳಿಕೊಳ್ಳುವುದೇನೆಂದರೆ ಈ ಒಂದು ಯೋಜನೆಯಿಂದ ಸದುಪಯೋಗಿ ಪಡಿಸಿಕೊಂಡು ತಮ್ಮ ಜೀವನವನ್ನು ಸುಂದರವಾಗಿ ಮಾಡಿಕೊಳ್ಳಿ. ಈ ಒಂದು ಯೋಜನೆಯನ್ನು ಯಾವುದೇ ರೀತಿಯ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಬೇಡಿ.

5.ಗೃಹಜ್ಯೋತಿ

ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾದ ಕಾಂಗ್ರೆಸ್ ಪಕ್ಷವು ತನ್ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಎಂಬ ಯೋಜನೆಯು ಅತ್ಯಂತ ಜನಹಿತ ಯೋಜನೆಯಾಗಿದೆ.ಈ ಯೋಜನೆಯಲ್ಲಿ ಪ್ರತಿಯೊಂದು ಮನೆಗೂ ತಿಂಗಳಿಗೆ ಎರಡು ನೂರು ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಈ ಒಂದು ಪ್ರಣಾಳಿಕೆಯ ಹೇಳಿಕೆಯಿಂದ ಅನೇಕ ಜನರು ಆಕರ್ಷಿತಗೊಂಡು ತಮ್ಮ ಭರವಸೆಯನ್ನು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿದ್ದರು ಅದೇ ರೀತಿ ಕಾಂಗ್ರೆಸ್ ಪಕ್ಷವು ಜನರ ಒಂದು ಭರವಸೆಯನ್ನು ಉಳಿಸಿಕೊಳ್ಳಲು ಈ ಒಂದು ಯೋಜನೆಯನ್ನು ಇತ್ತೀಚಿಗೆ ಅನುಮೋದಿಸಲು ಕ್ಯಾಬಿನೆಟ್ ಸಂಪುಟದಲ್ಲಿ ಜಾರಿಗೆ ಗೊಳಿಸಲು ಮುಂದಾಗಿದ್ದಾರೆ.

ಈ ಒಂದು ಯೋಜನೆಯಿಂದ ಅನೇಕ ಬಡ ಕುಟುಂಬದವರು ಇದರ ಉಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಆರಾಮ ಮಾಡಿಕೊಂಡಿದ್ದಾರೆ. ಅತ್ಯಂತ ಬಡ ಕುಟುಂಬದವರಾದ ಜನರು ವಿದ್ಯುತ್ ಬಿಲ್ಲನ್ನು ಕಟ್ಟಲಾಗದೆ ಪರೆದಾಡುತ್ತಿರುವ ಸಂದರ್ಭದಲ್ಲಿ ಈ ಒಂದು ಕಾಂಗ್ರೆಸ್ ಪಕ್ಷದ ಯೋಜನೆಯಿಂದ ಅನೇಕ ಜನರಿಗೆ ಸಹಾಯವಾಗಿದೆ. ಈ ಎಂದು ಯೋಜನೆಯನ್ನು ಕರ್ನಾಟಕದ ಜನರು ಉಚಿತವಾಗಿ ಸಿಗುತ್ತಿದೆ ಎಂದು ಹಾಳು ಮಾಡದೇ ಒಳ್ಳೆಯ ಕೆಲಸಗಳಿಗೆ ಮಾತ್ರ ಇದನ್ನ ಉಪಯೋಗಿಸಿಕೊಳ್ಳಬೇಕೆಂದು ನಾನು ನಿಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತೇನೆ . ಈ ಒಂದು ಯೋಜನೆಯಿಂದ ಅನೇಕ ಜನರಿಗೆ ಸಹಾಯವಾಗುತ್ತದೆ ಹೊರತು ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಇದರಿಂದ ನಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞರಾಗಿರೋಣ.ಒಟ್ಟಾರೆ ಕಾಂಗ್ರೆಸ್ ಪಕ್ಷವು ಜನರ ಹಿತಕ್ಕಾಗಿ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸುತ್ತದೆ ಎಂದು ನಾವು ನಂಬೋಣ ಮತ್ತು ಈ ಎಲ್ಲಾ ಯೋಜನೆಗಳನ್ನು ನಾವು ಸದುಪಯೋಗಪಡಿಸಿಕೊಂಡು ನಮ್ಮ ಕರ್ನಾಟಕ ಸರ್ಕಾರವನ್ನು ಬಲಿಷ್ಠ ಗೊಳಿಸೋಣ.

ಕರ್ನಾಟಕ ರಾಜ್ಯವು ತನ್ನ ಒಳ್ಳೆ ಒಳ್ಳೆ ಯೋಜನೆಗಳಿಂದ ಭಾರತ ಸರ್ಕಾರದ ಜನತೆ ಹೆಸರುವಾಸಿಯಾಗಲು ನಾವು ಎಲ್ಲರೂ ಕೈಜೋಡಿಸಿ ನಮ್ಮ ಕರ್ನಾಟಕ ಸರ್ಕಾರವನ್ನು ಮತ್ತು ಕರ್ನಾಟಕ ರಾಜ್ಯವನ್ನು ಬೆಳೆಸೋಣ ಮತ್ತು ಎಲ್ಲರೂ ಒಂದುಗೂಡಿ ನಾವೆಲ್ಲರೂ ಕನ್ನಡಿಗರೆಂದು ಮುಂದೆ ಬಂದು ಕನ್ನಡವನ್ನು ಉಳಿಸೋಣ ಮತ್ತು ಬೆಳೆಸೋಣ. ಜೈ ಕರ್ನಾಟ ಮಾತೆ.

Leave a Reply

Your email address will not be published. Required fields are marked *