19 May 2024

ಎಲೆಕ್ಟ್ರಿಕ್ ವಾಹನಗಳ ಉಪಯೋಗ ಮತ್ತು ಬಳಕೆ

ಬಂಧುಗಳೇ ನೀವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬೇಕಾ ಹಾಗಿದ್ದರೆ ನಾನು ನಿಮಗೆ ಗೊತ್ತಿರದ ಕೆಲವೊಂದಿಷ್ಟು ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇನೆ. ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲಿಯಂ ಆಧಾರಿತ ವಾಹನಗಳೆಲ್ಲವೂ ಮಾಯವಾಗಿ ಎಲೆಕ್ಟ್ರಿಕ್ ವಾಹನಗಳದ್ದೇ ದರ್ಬಾರ್ ಆಗುವುದೆಂದು ಖಚಿತವಾಗಿದೆ. ಏಕೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡುತ್ತಿವೆ.  ಈ ಲೇಖನದಲ್ಲಿ ನಾನು ನಿಮಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಹೇಗೆ ಖರೀದಿಸಬೇಕು ಮತ್ತು ಬಜೆಟ್ ಎಷ್ಟಿರ್ಬೇಕು ಎಂಬ ಇತ್ಯಾದಿ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇನೆ.

ಇಡೀ ವಿಶ್ವದಾದ್ಯಂತ ಇಂದಿನ ಕಾಲದಲ್ಲಿ ಎಲೆಕ್ಟ್ರಿಕ್ ವಾಹನಗಳು ಅತ್ಯಂತ ಜನಪ್ರಿಯವಾಗಿ  ಸುದ್ದಿ ಮಾಡುತ್ತಿವೆ. ನಮ್ಮ ದೇಶದಲ್ಲಿ ಈಗ ಸದ್ದು ಮಾಡುತ್ತಿವೆ ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಇವು ಸಾಮಾನ್ಯವಾಗಿವೆ. ಭಾರತವು ಸೇರಿದಂತೆ ಮತ್ತು 10 ಹಲವಾರು ದೇಶಗಳಲ್ಲಿ ಎಲೆಕ್ಟ್ರಿಕ್ ವಾನಗಳು ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದು ಮಾರುಕಟ್ಟೆಯಲ್ಲಿ ಅತ್ಯಂತ ಸದ್ದು ಮಾಡುತ್ತಿವೆ.

ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಯೋಚನೆ ಇದೆಯಾ?  ಹಾಗಾದರೆ ಇಲ್ಲಿ ಓದಿ ನಿಮಗಿದೆ ಬಂಪರ್ ಸುದ್ದಿ ಮತ್ತು ಬಂಪರ್ ಆಫರ್..!

ನಮಸ್ತೆ ಬಂಧುಗಳೇ ಈ ಒಂದು ಲೇಖನದಲ್ಲಿ ನಾವು ನಿಮಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನಗಳ ಒಂದು ವಿಶೇಷವೇನೆಂದರೆ, ಇವುಗಳು ಎಂಜಿನ್ ಇಲ್ಲದೆ ರಸ್ತೆಯ ಮೇಲೆ ಚಲಿಸುತ್ತವೆ. ಮತ್ತು ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್ ನ ಖರ್ಚನ್ನು ಕೂಡ ಅವರರಿಗೆ ಕಡಿಮೆ ಮಾಡುತ್ತದೆ. ಎಲೆಕ್ಟ್ರಿಕ್ ವಾಹನಗಳು ಇತ್ತೀಚಿಗೆ ಒಂದು ಟ್ರೆಂಡ್ ಆಗಿದ್ದು, ಪ್ರತಿಯೊಬ್ಬರು ಎಲೆಕ್ಟ್ರಿಕ್ ವಾಹನಗಳನ್ನು ಇಂದು  ಖರೀದಿಸುತ್ತಿದ್ದಾರೆ.
ಎಲೆಕ್ಟ್ರಿಕ್ ಆನೆಗಳ ಒಂದು ವಿಶೇಷವೇನೆಂದರೆ ಇವುಗಳನ್ನು ಖರೀದಿಸಲು ಸರ್ಕಾರವೇ ಸವಾರರಿಗೆ ಸಬ್ಸಿಡಿಯನ್ನು ನೀಡಲು ಮುಂದಾಗಿದೆ.

ವಿಶೇಷತೆ :

ಇತ್ತೀಚಿನ ದಿನಗಳಲ್ಲಿ ಎಲ್ಲ ಹೊಸ ಎಲೆಕ್ಟ್ರಿಕ್ ಆನೆಗಳನ್ನು ಖರೀದಿಸುವವರಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಿಕ್ಕಿಲ್ಲ ಏಕೆಂದರೆ ಮುಂದೆ ಬರುವ ದಿನಗಳಲ್ಲಿ ಅಂದರೆ 2025 26ರವರೆಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ ಸರ್ಕಾರಕ್ಕೆ ಯಾವುದೇ ಟ್ಯಾಕ್ಸ್ ಅನ್ನು ಕಟ್ಟುವಂತಿಲ್ಲ ಜೊತೆಗೆ ನೋಂದಣಿ ಕೂಡ ಉಚಿತವಾಗಿ ಮಾಡಿಕೊಡುತ್ತಾರೆ ಎಂಬ ಸುದ್ದಿಯು ಇದೆ.
ಎಲೆಕ್ಟ್ರಿಕ್ ಆನೆಗಳನ್ನು ಖರೀದಿಸುವ ಮುಖ್ಯ ಉದ್ದೇಶವೇನೆಂದರೆ ಪೆಟ್ರೋಲಿನ ಖರ್ಚನ್ನು ಕಡಿಮೆ ಮಾಡಬಹುದು ಮತ್ತು ಪರಿಸರದಲ್ಲಿ ವಾಯು ಮಾಲಿನ್ಯವನ್ನು ಕೂಡ ಕಡಿಮೆ ಮಾಡಬಹುದು.
ಇಂದಿನ ಕಾಲದಲ್ಲಿ ಪೆಟ್ರೋಲ್ ಗಾಡಿಯನ್ನು ಉಪಯೋಗಿಸುವುದರಿಂದ ಸುತ್ತಮುತ್ತಲಿನ ಗಾಳಿ ಪರಿಸರದಲ್ಲಿ ಪೂರ್ತಿ ಹದಗೆಟ್ಟಿದೆ ಮತ್ತು ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕೂಡ ಜನರು ಅನುಭವಿಸುತ್ತಿದ್ದಾರೆ. ಈ ತರಹದ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ.ಮತ್ತು ನೀವು ಎಲೆಕ್ಟ್ರಿಕ್ ವಾನವನ್ನು ಖರೀದಿಸುವುದರಿಂದ ಹೆಚ್ಚಿನ ಮೊತ್ತವನ್ನು ಉಳಿಸಬಹುದು ಏಕೆಂದರೆ ಪ್ರತಿದಿನ ಒಬ್ಬ ವ್ಯಕ್ತಿ ಸಣ್ಣಪುಟ್ಟ ಕೆಲಸಗಳಿಗೂ ಕೂಡ ಹೋಗಲು ವಾನವನ್ನೇ ಬಳಸುತ್ತಿದ್ದಾನೆ. ಇದರಿಂದ ಅವನ ಆದಾಯದ ಎಷ್ಟು ಹಣವನ್ನು ಪೆಟ್ರೋಲಿಗೆ ಖರ್ಚು ಮಾಡುತ್ತಿದ್ದಾನೆ. ಈ ಕರ್ಚನ್ನು ನಾವು ಹೇಗೆ ತಡೆಗಟ್ಟಬಹುದೆಂದರೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದರಿಂದ, ನಾವು ಬೇಕಾದಾಗಲೆಲ್ಲ ಚಾರ್ಜ್ ಮಾಡಿಕೊಂಡು ಬೇಕಾದ ಸ್ಥಳಗಳಿಗೆ ಹೋಗಿ ಬರಬಹುದು.

ಮತ್ತು ಎಲೆಕ್ಟ್ರಿಕ್ ವಾಹನಗಳು ಇಂದು ದೇಶದಾದ್ಯಂತ ಮತ್ತು ವಿಶ್ವದಾದ್ಯಂತ ಬಹಳ ಸುದ್ದಿಯಲ್ಲಿವೆ. ಇದರ ಒಂದು ಕಾರಣವನ್ನು ನಾವು ಈ ಕೆಳಗಿನ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮತ್ತು ಅರ್ಥೈಸಿಕೊಂಡು ಇದರ ಲಾಭವನ್ನು ಪಡೆದುಕೊಳ್ಳೋಣ.

ಇತ್ತೀಚಿಗೆ ನೀತಿ ಆಯೋಗ ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಗಳಿಗಾಗಿ ಒಂದು ಕರಡು ಬ್ಯಾಟರಿಯ ವಿನಿಮಯ ನೀತಿಯನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಈ ನೀತಿಯಲ್ಲಿ ಏನು ಹೇಳಿದ್ದಾರೆಂದರೆ ನಾವು ಬಳಸುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಮತ್ತು ಎಲೆಕ್ಟ್ರಿಕ್ ಇತರೆ ವಾಹನಗಳು ಬ್ಯಾಟರಿ ವಿನಿಮಯ ಪರಿಸರದ ವ್ಯವಸ್ಥೆಯನ್ನು ದಕ್ಷತೆಯ ಹೆಚ್ಚಿಸಲು ಈ ಗುರಿಯನ್ನು ಹೊಂದಿದ್ದಾರೆ ಇದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬಹಳ ಸಹಕಾರಿಯಾಗಲಿದೆ ಎಂದು ಸರ್ಕಾರವು ಹೇಳಿದೆ.
ಈ ಒಂದು ಕರುಣ ನೀತಿಯ ಪ್ರಕಾರ 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ದೊಡ್ಡ ದೊಡ್ ನಗರಗಳಲ್ಲಿ ಡ ಮೊದಲನೇ ಒಂದು ಹಂತದಲ್ಲಿ ಬಿಡುಗಡೆ ಮಾಡಲು ಆದ್ಯತೆ ನೀಡುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳೆಂದರೇನು?

ಯಾವ ವಾಹನಗಳು ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸಿ ಚಲಾಯಿಸಲ್ಪಡುತ್ತವೋ ಆ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೆಂದು ಕರೆಯುವರು. ಈ ವಾಹನಗಳಿಂದ ಪರಿಸರದಲ್ಲಿ ಯಾವುದೇ ಮಾಲಿನ್ಯವಾಗುವುದಿಲ್ಲ, ಮತ್ತು ಪೆಟ್ರೋಲಿಯಂ ಪ್ರಾಡಕ್ಟ್ಸ್ ಗಳನ್ನು ಬೇರೆ ಬೇರೆ ಉಪಯೋಗಕ್ಕಾಗಿ ಬಳಸಬಹುದು.

ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಹೆಚ್ಚಿನ ಆದ್ಯತೆ ಮತ್ತು ಹೆಚ್ಚಿನ ಸಬ್ಸಿಡಿ ಇತರೆ ಯೋಜನೆಗಳನ್ನು ತರುತ್ತಿದ್ದಾರೆ ಏಕೆಂದರೆ ಈ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ  ಅನೇಕ ರೀತಿಯ ಉಪಯೋಗಗಳಿದ್ದು ಅವುಗಳಲ್ಲಿ ಈ ಕೆಲವೊಂದಿಷ್ಟು ಉಪಯೋಗಗಳನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ.
1. ಪರಿಸರ ಮಾಲಿನ್ಯ ತಡೆಗಟ್ಟುವಿಕೆ.
2. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುತ್ತದೆ.
3. ಪೆಟ್ರೋಲ್ ಖರ್ಚು ಇಲ್ಲದಿರುವುದು.
4. ಶುದ್ಧವಾದ ಗಾಳಿ ಪರಿಸರದಲ್ಲಿ ಇರುವುದು.

ಇದೇ ರೀತಿ ಹತ್ತು ಹಲವಾರು ಉಪೇಯಗಳು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪಡೆಯಬಹುದು.
ಮೊದಲೇಯನದಾಗಿ ಪರಿಸರ ಮಾಲಿನ್ಯ ತಡೆಗಟ್ಟುವಿಕೆ.
ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪರಿಸರದ ಮಾಲಿನ್ಯವನ್ನು ಹೇಗೆ ತಡೆಯಬಹುದೆಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ನಾವು ನಿಮಗೆ ಹೇಳುತ್ತೇವೆ.
ಪೆಟ್ರೋಲ್ ನಿಂದ ಚಲಾಯಿಸಲ್ಪಡುವ ವಾಹನಗಳು ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೊರ ಸೂರಿಸುತ್ತವೆ. ಈ ಇಂಗಾಲದ ಡೈಯಾಕ್ಸೈಡ್ ಹೆಚ್ಚಿಸುವುದರಿಂದ ಪರಿಸರದಲ್ಲಿರುವ ಆಕ್ಸಿಜನ್ ಗಾಳಿಯು ಮಲಿನವಾಗಿ ಗಾಳಿಯ ಶುದ್ಧತೆಯನ್ನು ಕಳೆದುಕೊಳ್ಳುತ್ತದೆ. ಗಾಳಿಯ ಶುದ್ಧತೆಯನ್ನು ಕಳೆದುಕೊಳ್ಳುವುದರಿಂದ ಜನರು ಈ ಅಶುದ್ಧ ಗಾಳಿಯನ್ನು ತೆಗೆದುಕೊಂಡು ತಮ್ಮ ಆರೋಗ್ಯವನ್ನು ತಿಳಿಸಿ ಕೊಡುತ್ತಾರೆ. ಪರಿಸರದ ಮಾಲಿನ್ಯದಿಂದ ಬರುವ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಯನ್ನು ನಾನು ಈ ಕೆಳಗೆ ನಿಮಗೆ ತಿಳಿಸಿ ತಿಳಿಸಿಕೊಡುತ್ತೇನೆ.

ಪರಿಸರ ಮಾಲಿನ್ಯದಿಂದ ಬರುವ ಆರೋಗ್ಯ ಸಮಸ್ಯೆಗಳು :

1. ಅಸ್ತಮಾ:   ಈ ಒಂದು ರೋಗವು ಶಾಸನಾದ ಮೇಲೆ ಪರಿಣಾಮ ಬೀರುವುದು. ಶ್ವಾಶಕೋಶಗಳು ನಮ್ಮ ದೇಹದಲ್ಲಿ ಗಾಳಿಯನ್ನು ಹೊರಗೆ ಮತ್ತು ಒಳಗೆ ತೆಗೆದುಕೊಳ್ಳುವ ಒಂದು ಕೆಲಸವನ್ನು ಮಾಡುತ್ತಿರುತ್ತೇವೆ. ಕೆಲಸಕ್ಕೆ ಅಸ್ತಮಾ ಎಂಬ ರೋಗವು ಅಡ್ಡಿ ಮಾಡುತ್ತದೆ. ಅಸ್ತಮಾ ಬಂದಾಗ ಈ ಕೆಳಗಿನ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅವುಗಳೆಂದರೆ,
ಒಮ್ಮಿಂದ ಮೇಲೆ ಕೆಮ್ಮು ಬರುವುದು ಉಸಿರಾಟದಲ್ಲಿ ತೊಂದರೆ ಬರಬಹುದು ಮತ್ತು ಎದೆ ಬಿಗಿತ ಬರಬಹುದು.
ಈ ಅಸ್ತಮಾ ಬರುವುದು ಒಂದೇ ರೀತಿಯಲ್ಲಿರುವುದಿಲ್ಲ ಕೆಲವು ಬಹಳ ತೇಲುವಾಗಿರಬಹುದು ಮತ್ತೊಂದು ಸಮಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಂಡು ಹೋಗಬಹುದು. ನಾವು ಅಸ್ತಮಾ ರೋಗದ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅದಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದರೆ ಹೇಗೆ?
ಮೊದಲ ನಾವು ಪರಿಸರ ಮಾಲಿನ್ಯ ಮಾಡುವುದನ್ನು ತಡೆಗಟ್ಟಬೇಕು. ಏಕೆಂದರೆ ಪರಿಸರ ಮಾಲಿನ್ಯ ಮಾಡುವುದರಿಂದ ಪರಿಸರದಲ್ಲಿರುವ ಶುದ್ಧ ಗಾಳಿ ಹಾಳಾಗಿ, ಅಶುದ್ಧವಾಗಿ ಅಶುದ್ಧ ಗಾಳಿಯನ್ನು ನಾವು ಸೇವಿಸುವುದರಿಂದ ನಮ್ಮಲ್ಲಿ ಅನೇಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅವುಗಳಲ್ಲಿ ಅಸ್ತಮಾ ಒಂದು ದೊಡ್ಡ ರೋಗ. ಇನ್ನೊಂದು ಹೇಳಬೇಕೆಂದರೆ ಅಸ್ತಮಾ ಬಂದಾಗ ತುರ್ತು ಪರಿಸ್ಥಿತಿಯಲ್ಲಿ ಮನುಷ್ಯ ಸಾವನ್ನಪ್ಪುವ ಸಾಧ್ಯತೆಗಳು ಕೂಡ ಇರುತ್ತವೆ. ಆದ್ದರಿಂದ ನಾವೆಲ್ಲರೂ ಶುದ್ಧವಾದ ಪರಿಸರವನ್ನು ನಿರ್ಮಾಣ ಮಾಡೋಣ ಮತ್ತು ಪ್ರತಿಯೊಬ್ಬರು ಇದಕ್ಕಾಗಿ ಕೆಲಸ ಮಾಡಬೇಕು.

ವಿದ್ಯುತ್ ವಾಹನಗಳನ್ನು ಚಲಿಸುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು :

ಅಧ್ಯಾಯ ಇಂದಿನ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಭಾರಿಸದ್ದನ್ನು ಮಾಡುತ್ತಿವೆ ಏಕೆಂದರೆ ಇವುಗಳು ಪರಿಸರಸ್ನೇಹಿ ಮತ್ತು ಹೆಚ್ಚಿನ ಅನುಕೂಲಗಳನ್ನು ಗ್ರಾಹಕರಿಗೆ ಮಾಡಿಕೊಡುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟು ಅನಾನುಕೂಲಗಳು ಕೂಡ ಇವೆ. ಆದ್ದರಿಂದ ಪ್ರತಿಯೊಬ್ಬ ಗ್ರಾಹಕರು ಎಲೆಕ್ಟ್ರಿಕ್ವನಗಳನ್ನು ಖರೀದಿಸುವ ಮುಂಚೆ 10 ಹಲವಾರು ಬಾರಿ ಯೋಚನೆ ಮಾಡಿ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಈ ಕೆಳಗಿನ ಒಂದು ಸಾರಾಂಶದಲ್ಲಿ ನಾನು ನಿಮಗೆ ಎಲೆಕ್ಟ್ರಿಕ್ ವಾನಗಳನ್ನು ಖರೀದಿಸುವುದರಿಂದ ಅನುಕೂಲಗಳು  ಯಾವುವು ಎಂದು ತಿಳಿಸಿಕೊಡುತ್ತಿದ್ದೇನೆ.

ಅನುಕೂಲಗಳು :

1. ಪರಿಸರಸ್ನೇಹಿ

ದಿನದಿಂದ ದಿನಕ್ಕೆ ಪೆಟ್ರೋಲಿಯಂ ವಾಹನಗಳನ್ನು ಚಲಿಸುವುದರಿಂದ ಪರಿಸರದಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಜಾಗತಿಕ ತಾಪಮಾನವು ಕೂಡ ಹೆಚ್ಚುತ್ತಿದೆ. ಈ ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಅತ್ಯಂತ ಸೂಕ್ತವಾಗಿದೆ ಎಂದು ಅನೇಕ ಜನರು ಭಾವಿಸುತ್ತಾರೆ. ಏಕೆಂದರೆ ಪರಿಸರ ಮಾಲಿನ್ಯವೂ ಮತ್ತು ಜಾಗತಿಕ ತಾಪಮಾನವು ಮನುಷ್ಯನಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಲು ಸಹಾಯ ಮಾಡುತ್ತವೆ. ಆದ್ದರಿಂದ ನಾವು ಎಲೆಕ್ಟ್ರಿಕ್ ಅನೆಗಳನ್ನು ಬಳಸಿ ಈ ಸಮಸ್ಯೆಗಳನ್ನು ತಡೆಗಟ್ಟೋಣ.

2. ಗ್ಯಾಸ್ ಅಥವಾ ಇಂಧನಕ್ಕಾಗಿ ಹಣವನ್ನು ಖರ್ಚು ಮಾಡುವಂತಿಲ್ಲ.


ಎಲೆಕ್ಟ್ರಿಕ್ ವಾಹನಗಳಿಗೆ ಇಂಧನವಾಗಿ ನಾವು ವಿದ್ಯುತ್ ಶಕ್ತಿಯನ್ನು ಬಳಸಬಹುದು. ಏಕೆಂದರೆ, ಎಲೆಕ್ಟ್ರಿಕ್ ವಾಹನಗಳು ವಿದ್ಯುತ್ತನ್ನು ಇಂಧನವಾಗಿ ಬಳಸಿಕೊಂಡು ಚಲಾಯಿಸಲ್ಪಡುತ್ತವೆ.
ಮತ್ತು ಈ ಎಲೆಕ್ಟ್ರಿಕ್ ವಾನಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 100 ಮೈಲಿ ಚಲಿಸುವ ಸಾಮರ್ಥ್ಯವನ್ನು ಪಡೆದಿರುತ್ತವೆ ಎಂದು ವಿಜ್ಞಾನಿಗಳು ಭಾವಿಸುತ್ತಾರೆ.

3.ಇತರೆ ಪೆಟ್ರೋಲಿಯಂ ವಾಹನಗಳಿಗಿಂತ ಹೆಚ್ಚಿನ ಅನುಕೂಲಕರವಾಗಿದೆ.

ನಾವು ಪೆಟ್ರೋಲ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಹಾಕಿಸಿಕೊಳ್ಳಲು ಪ್ರತಿ ಬಾರಿ ಪೆಟ್ರೋಲ್ ಬಂಕಗಳಿಗೆ ಹೋಗಬೇಕಾಗುತ್ತದೆ, ಆದರೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ನಾವು ಮನೆಯಲ್ಲಿಯೇ ಬೇಕಾದಷ್ಟು ಚಾರ್ಜ್ ಮಾಡಿಕೊಂಡು ಬೇಕಾದಷ್ಟು ದೂರ ಹೋಗಿ ಮತ್ತು ಬರಬಹುದು. ಈ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಮನೆಯಲ್ಲಿಯೇ ನಿಯಮಿತವಾದ ಒಂದು ಸಾಕೆಟ್ ಇದ್ದರೆ ಸಾಕು.ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಮನೆಯಲ್ಲಿಯೇ ಚಾರ್ಜ್ ಮಾಡಿಕೊಳ್ಳಬಹುದು ಮತ್ತು ಪ್ರತಿಬಾರಿ ಬೇರೆ ದೂರ ಕಡೆ ಸ್ಟೇಷನ್ ಗೆ ಹೋಗುವ ಅವಶ್ಯಕತೆ ಬೀಳುವುದಿಲ್ಲ. ಮತ್ತು ನಾವು ಇವುಗಳನ್ನು ಚಾರ್ಜ್ ಮಾಡಲು ಅತ್ಯಂತ ಸೂಕ್ಷ್ಮವಾದ ಒಂದು ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಏಕೆಂದರೆ ನಿಯಮಿತವಾದ ಒಂದು ಕಾಲದಲ್ಲಿ ಇವುಗಳನ್ನು ಚಾರ್ಜ್ ಮಾಡಿ ಉಪಯೋಗಿಸಿಕೊಳ್ಳಬೇಕು.

4. ವ್ಯಾಪಕ ವೇಗ

ವಿದ್ಯುತ್ ಕಾರುಗಳನ್ನು ಒಂದು ಬಾರಿ ಚಾರ್ಜ್ ಮಾಡುವುದರಿಂದ ಸರಿಸುಮಾರು ನೂರರಿಂದ ಎರಡು ನೂರು ಮೈಲುವರೆಗೆ ಚಲಿಸಬಲ್ಲವೂ. ಪೆಟ್ರೋಲಿಯಂ ಕಾರುಗಳಿಗೆ ಹೋಲಿಸಿದರೆ ವಿದ್ಯುತ್ ಕಾರುಗಳು ಎಷ್ಟೋ ಮುಂಚೂಣಿಯಲ್ಲಿವೆ ಎಂದು ಹೇಳಬಹುದು.

5. ಅತ್ಯಂತ ಕಡಿಮೆ ಬೆಲೆಯಲ್ಲಿ ಕಾರ್ಯ ನಿರ್ವಹಣೆಯನ್ನು ಮಾಡಬಹುದು.

ಇಂದಿನ ಕಾಲದಲ್ಲಿ ವಿದ್ಯುತ್ ದರಗಳು ಅತ್ಯಂತ ಕಡಿಮೆ ಆಗುತ್ತಿವೆ ಮತ್ತು ಈ ಕಾರಣದಿಂದ ವಿದ್ಯುತ್ ವಾಹನಗಳನ್ನು ಬಳಸಲು ಯಾವುದೇ ತೊಂದರೆ ಇಲ್ಲ. ಇಂದಿನ ಕಾಲದಲ್ಲಿ ಪೆಟ್ರೋಲ್ ದರ ಅತ್ಯಂತ ಹೆಚ್ಚಿಗೆ ಆಗುತ್ತಿದ್ದು ಕಾರಣದಿಂದ ನಾವು ವಿದ್ಯುತ್ತನ್ನು ಬಳಸಿ ವಿದ್ಯುತ್ ವಾಹನಗಳನ್ನು ಬಳಸಬಹುದು. ವಿದ್ಯುತ್ ವಾಹನಗಳು ಸ್ನೇಹಿಯಾಗಿದ್ದು ಇವುಗಳನ್ನು ಬಳಸುವುದರಿಂದ ಅತ್ಯಂತ ಉಪಯೋಗವಾಗಲಿದೆ.

6.ಅತ್ಯಂತ ಕಡಿಮೆ ಶಬ್ದವನ್ನು ಮಾಡುತ್ತವೆ.


ವಿದ್ಯುತ್ ವಾಹನಗಳನ್ನು ಬಳಸುವುದರಿಂದ ಮತ್ತೊಂದು ಹೆಚ್ಚಿನ ಅನುಕೂಲವೆಂದರೆ ಅದು ಶಬ್ದ ಮಾಲಿನ್ಯವನ್ನು ತಡೆಗಟ್ಟಬಹುದು. ಏಕೆಂದರೆ ವಿದ್ಯುತ್ ವಾಹನಗಳು ಅಥವಾ ಎಲೆಕ್ಟ್ರಿಕ್ ವಾನಗಳು ಅತ್ಯಂತ ಹೆಚ್ಚಿನ ಶಬ್ದವನ್ನು ಒಟ್ಟ ಮಾಡುವುದಿಲ್ಲ. ಇದರಿಂದ ನಾವು ಪರಿಸರದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಬಹುದು. ಈ ವಾಹನಗಳನ್ನು ಚಲಿಸುವುದರಿಂದ ಸವಾರರಿಗೆ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಮತ್ತು ಯಾವುದೇ ತಲೆನೋವು ಇರುವುದಿಲ್ಲ. ಅದೇ ರೀತಿ ನಾವು ಪೆಟ್ರೋಲಿಯಂ ವಾಹನಗಳನ್ನು ಚಲಿಸುವುದರಿಂದ ಅವು ಹೆಚ್ಚಿನ ಸೌಂಡ್ ಅನ್ನು ಮಾಡುತ್ತೇವೆ, ಈ ಶಬ್ದದಿಂದ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತದೆ. ಈ ಕಿರಿಕಿರಿಯನ್ನು ತಡೆಗಟ್ಟಲು ನಾವು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದು ಅತ್ಯುತ್ತಮ ಏಕೆಂದರೆ ಇವುಗಳು ಶಬ್ದ ರೈತ ಚಾಲನೆಯನ್ನು ಸವಾರರಿಗೆ ನೀಡುತ್ತವೆ.

7. ಕಡಿಮೆ ಬೆಲೆಯಲ್ಲಿ ಬ್ಯಾಟರಿ ಲಭ್ಯ.

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಯನ್ನು ಇತ್ತೀಚಿಗೆ ಲಿಥಿಯಂ ನಲ್ಲಿ ತಯಾರು ಮಾಡುತ್ತಿರುವ ಕಾರಣದಿಂದ ಬ್ಯಾಟರಿಯ ಬೆಲೆ ಕಡಿಮೆಯಾಗಿದ್ದು, ನಾವು ಇದಕ್ಕಾಗಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಒಂದು ಬಾರಿ ನಾವು ಬ್ಯಾಟರಿಯನ್ನು ಖರೀದಿ ಮಾಡಿದರೆ ಹತ್ತು ವರ್ಷಗಳವರೆಗೆ ಇದು ಬಾಳಿಕೆ ಬರುತ್ತದೆ.

ಇಲ್ಲಿಯವರೆಗೆ ನಾವು ಎಲೆಕ್ಟ್ರಿಕ್ ವಾಹನಗಳ ಅನುಕೂಲಗಳನ್ನು ತಿಳಿದುಕೊಂಡೆವು. ನೀವು ಯಾವುದೇ ಒಂದು ವಸ್ತುವನ್ನು ತೆಗೆದುಕೊಂಡರು ಅದರ ಅನಾನುಕೂಲಗಳನ್ನು ತಿಳಿದುಕೊಳ್ಳುವುದು ಕೂಡ ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಎಷ್ಟೋ ಬಾರಿ ನಾವು ಅನಾನುಕೂಲಗಳನ್ನು ತೆಗೆದುಕೊಳ್ಳದೆ ಅನುಕೂಲಗಳನ್ನು ನೋಡಿ ಮೋಸ ಹೋಗುತ್ತೇವೆ. ಗ್ರಾಹಕರು ಮೋಸ ಹೋಗುವುದನ್ನು ತಡೆಗಟ್ಟಲು ನಾವು ನಿಮಗೆ ಅನಾನುಕೂಲಗಳ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಏಕೆಂದರೆ ಪ್ರತಿಯೊಂದು ವಸ್ತು ಕೂಡ ತನ್ನದೇ ಆದಂತಹ ಅನಾನುಕೂಲಗಳನ್ನು ಹೊಂದಿದೆ. ಈ ಕೆಳಗಿನ ಒಂದು ಲೇಖನದಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳ ಅನಾನುಕೂಲಗಳನ್ನು ನಿಮಗೆ ತಿಳಿಸಿಕೊಡಲು ಪ್ರಯತ್ನಿಸುತ್ತೇವೆ.

1. ಪೆಟ್ರೋಲಿಯಂ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿ ಇದೆ.

ಪೆಟ್ರೋಲಿಯಂ ವಾಹನಗಳ ಬೆಲೆಗಿಂತ ಎಲೆಕ್ಟ್ರಿಕ್ವನಗಳ ಬೆಲೆ ಅತ್ಯಂತ ದುಬಾರಿಯಾಗಿದೆ ಎಂದು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ ಏಕೆಂದರೆ ಇವಳನ್ನು ತಯಾರಿಸಲು ನಮ್ಮ ದೇಶದ ಕಂಪನಿಗಳು ಬೇರೆ ದೇಶದ ಕಂಪನಿಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಇದರ ಬೆಲೆ ಹೆಚ್ಚಾಗಿದೆ ಎಂದು ನಾವು ತಿಳಿದುಕೊಳ್ಳಬಹುದು.

2. ಪೆಟ್ರೋಲಿಯಂ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಶಕ್ತಿ ಕಡಿಮೆ ಇದೆ.

ನಾವು ಪೆಟ್ರೋಲಿಯಂ ವಾಹನಗಳಿಗೆ ನೀಡುವ ಹೆಚ್ಚಿನ ತೂಕವನ್ನು ಎಲೆಕ್ಟ್ರಿಕ್ ವಾನಗಳಿಗೆ ನೀಡುವ ಹಾಗಿಲ್ಲ ಏಕೆಂದರೆ ಇವು ಲೈಟ್ವೇಟ್ ವಾಹನಗಳಾಗಿದ್ದು ಹೆಚ್ಚಿನ ತೂಕವನ್ನು ತಡೆದುಕೊಳ್ಳುವುದಿಲ್ಲ. ಆದ್ದರಿಂದ ಇವುಗಳ ಶಕ್ತಿ ಕಡಿಮೆ ಎಂದು ಹೇಳಬಹುದು. ನಾವು ಎಲೆಕ್ಟ್ರಿಕ್ ಆನೆಗಳನ್ನು ಖರೀದಿಸುವ ಮುಂಚೆ ಈ ಒಂದು ಅಂಶವನ್ನು ಗಮದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ.

3. ಚಾರ್ಜಿಂಗ್ ಸ್ಟೇಷನ್ ನ ಕೊರತೆ.

ಒಂದು ವೇಳೆ ನಾವು ಲಾಂಗ್ ಡ್ರೈವ್ ಹೋದರೆ ಚಾರ್ಜ್ ಖಾಲಿಯಾದರೆ, ನಮ್ಮ ದೇಶದಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಕೊರತೆ ಅತ್ಯಂತ ಹೆಚ್ಚು ಇದೆ. ಆದ್ದರಿಂದ ನಾವು ಲಾಂಗ್ ಡ್ರೈವ್ ಹೋಗುವುದನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಸೂಚಿಸುವುದಿಲ್ಲ.
ಅಂದರೆ ಮಧ್ಯಂತರದಲ್ಲಿ ನಾವು ಚಾರ್ಜಿಂಗ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದೇ ನಾವು ಪೆಟ್ರೋಲಿಯ ಮೋಹನಗಳಿಗಾದರೆ ಒಂದು ಬಾಟಲ್ ನಲ್ಲಿ ಪೆಟ್ರೋಲ್ ಅನ್ನು ತೆಗೆದುಕೊಂಡು ಹೋಗಿ ನಾವು ಪೆಟ್ರೋಲ್ ಹಾಕಿಕೊಂಡು ನಮ್ಮ ಸವಾರಿಯನ್ನು ಮುಂದೆ ನಡೆಸಬಹುದು, ಆದರೆ ಎಲೆಕ್ಟ್ರಿಕ್ ವಾಹನಗಳಲ್ಲಿ ಹಾಗೆ ಮಾಡಲಾಗುವುದಿಲ್ಲ. ಬದಲಿಗೆ ನಾವು ಒಂದು ನೆಚ್ಚಿನ  ಬ್ಯಾಟರಿಯನ್ನು ಇಟ್ಟುಕೊಂಡು ಹೋಗುವುದು ಅನುಕೂಲವಾಗಬಹುದು.

ಇಲ್ಲಿ ನೀಡಲಾರದಾಯ ಕೆಲವೊಂದಿಷ್ಟು ಅನಾನುಕೂಲಗಳನ್ನು ನಾವು ಎಲೆಕ್ಟ್ರಿಕ್ ವಾಹನಗಳ ಖರೀದಿಸುವ  ಮುಂಚೆ ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ.
ಈ ಎಲೆಕ್ಟ್ರಿಕ್ ವಾಹನಗಳು ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಜನರು ತಮ್ಮ ಹಳೆಯ ಪೆಟ್ರೋಲಿಯಂ ವಾಹನಗಳನ್ನು ಮಾರಾಟ ಮಾಡಿ ಎಲೆಕ್ಟ್ರಿಕ್ ವಾಹನ ಖರೀದಿಸಲು ಮುಂದಾಗಿದ್ದಾರೆ. ಏಕೆಂದರೆ ಪೆಟ್ರೋಲಿಯಂ ವಾಹನಗಳು ಅತ್ಯಂತ ಪರಿಸರ ದ್ರೋಹಿಯಾಗಿದ್ದು, ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹ ಆಗಿದ್ದರಿಂದ ಸರ್ಕಾರವೂ ಕೂಡ ಇವುಗಳನ್ನು ಖರೀದಿಸಲು ಜನರಿಗೆ ಉತ್ತೇಜಿಸುತ್ತಿದೆ. ಈ ಹತ್ತು ಹಲವಾರು ಲಾಭಗಳನ್ನು ಹೊಂದಿರುವುದರಿಂದ ಅನೇಕ ಜನ ಎಲೆಕ್ಟ್ರಿಕ್ ವಾನಗಳನ್ನು ಕರಗಿಸಲು ಮುಂದಾಗುತ್ತಿದ್ದಾರೆ.
ಆದರೆ ಅನೇಕ ಜನರಿಗೆ ಇದರ ಬಗ್ಗೆ ಹೆಚ್ಚಿನ ಅನುಮಾನಗಳು ಸಂಶಯಗಳು ಮತ್ತು ಹೆಚ್ಚಿನ ಜ್ಞಾನವನ್ನು ಹೊಂದಿಲ್ಲದದ್ದರಿಂದ ನಾವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹೇಳಲು ಆದಷ್ಟು ಪ್ರಯತ್ನಿಸಿದ್ದೇವೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದು ಹೆಚ್ಚಿನ ಉತ್ತಮವಾಗಿದ್ದು, ಇದರ ಅನುಕೂಲಗಳು ಅನಾನುಕೂಲಗಳನ್ನು ನೀವು ತಿಳಿದುಕೊಳ್ಳಬೇಕಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಮೊದಲಿಗೆ ನಾವು ಯಾವುದೇ ಒಂದು ವಸ್ತುವನ್ನು ಖರೀದಿಸುವ ಮುಂಚೆ ಅದರ ಬೆಲೆ ನಮ್ಮ ಬಜೆಟ್ ಗೆ ಹೊಂದುತ್ತದೆ ಇಲ್ಲವೋ  ಎಂದು ನೋಡಿಕೊಳ್ಳಬೇಕು. ನಮ್ಮ ಬಜೆಟ್ಗೆ ಹೊಂದುವುದಾದರೆ ನಾವು ಅದನ್ನು ಖರೀದಿಸಲು ಮುಂದಾಗಬೇಕು ಇಲ್ಲವಾದರೆ ಅನೇಕ ಬ್ಯಾಂಕುಗಳು ಸಾಲದ ಸೌಲಭ್ಯವನ್ನು ಒದಗಿಸುತ್ತೇವೆ. ಈ ಸಾಲದ ಸೌಲಭ್ಯವನ್ನು ಪಡೆದುಕೊಂಡು ಕೂಡ ನೀವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು.

ಕೆಲವೊಂದಿಷ್ಟು ಎಲೆಕ್ಟ್ರಿಕ್ ವಾಹನಗಳನ್ನು ನಾನು ನಿಮಗೆ ತಿಳಿಸುತ್ತೇನೆ.
1. ಎಲೆಕ್ಟ್ರಿಕ್ ಕಾರ್
2. ಎಲೆಕ್ಟ್ರಿಕ್ ಸ್ಕೂಟರ್
3. ಎಲೆಕ್ಟ್ರಿಕ್ ಬೈಕ್
4. ಎಲೆಕ್ಟ್ರಿಕ್ ಆಟೋ
5. ಎಲೆಕ್ಟ್ರಿಕ್ ಬಸ್
6. ಎಲೆಕ್ಟ್ರಿಕ್ ಟ್ರೈನ್
7. ಎಲೆಕ್ಟ್ರಿಕ್ ಸೈಕಲ್ ಇತ್ಯಾದಿಗಳು.

ಮಾರುಕಟ್ಟೆಯಲ್ಲಿ ಬಹುತೇಕ ಕಂಪನಿಗಳು ತಮ್ಮದೇ ಆದ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುತ್ತದೆ.
ನಾವು ಮೊಟ್ಟಮೊದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಮುನ್ನ ಎಷ್ಟು ಚಾರ್ಜ್ ಮಾಡಿದರೆ ಎಷ್ಟು ಕಿಲೋಮೀಟರ್ ನವರಿಗೆ ಓಡುತ್ತದೆ ಎಂದು ತಿಳಿದುಕೊಂಡಿರಬೇಕು. ಏಕೆಂದರೆ ಎಲೆಕ್ಟ್ರಿಕ್ ವಾಹನಗಳಲ್ಲಿ, ಹೆಚ್ಚಿನ ಮೈಲೇಜ್ ಹೊಂದಿರುವ ವಾಹನವು ಅತ್ಯಂತ ಉಪಕಾರಿಯಾಗಿರುತ್ತದೆ.
ಇನ್ನೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡಿರಬೇಕಾಗಿರುವುದು ಚಾರ್ಜಿಂಗ್ ವ್ಯವಸ್ಥೆ. ಎಂದರೆ ಎಲೆಕ್ಟ್ರಿಕ್ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದು ಚಾರ್ಜಿಂಗ್ ವ್ಯವಸ್ಥೆ. ಆದ್ದರಿಂದ ನಾವು ಎಲೆಕ್ಟ್ರಿಕ್ ವಾಹನಗಳನ್ನು ಚಲಾಯಿಸಲು ಮೊದಲು ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರಬೇಕು ಅಥವಾ ಕಂಡುಹಿಡಿದುಕೊಂಡಿರಬೇಕು. ಮತ್ತು ಎಲೆಕ್ಟ್ರಿಕ್ ವೆಹಿಕಲ್ ಅನ್ನು ಕರಿದಿಸುವಾಗ ಪೂರ್ತಿಯಾಗಿ ಚಾರ್ಜ್ ಮಾಡಲು ಎಷ್ಟು ತಾಸುಗಳ ಸಮಯ ಹಿಡಿಯುತ್ತದೆ ಎಂದು ನೋಡಿಕೊಳ್ಳಬೇಕು. ಈ ಎಲ್ಲಾ ಮೇಲಿನ ವಿಷಯಗಳಿಗೆ ತಕ್ಕ ಹಾಗೆ ನಾವು ಎಲೆಕ್ಟ್ರಿಕ್ ಚಾರ್ಜಿಂಗ್ ವ್ಯವಸ್ಥೆಯನ್ನು ಮಾಡಿಕೊಂಡು ನಂತರ ವಾಹನವನ್ನು ಖರೀದಿಸಿಕೊಳ್ಳಬೇಕು ಹೀಗಾದರೆ ನಾವು ಒಂದು ಎಲೆಕ್ಟ್ರಿಕ್ ವಾಹನವನ್ನು ಅತ್ಯುತ್ತಮವಾಗಿ ಮೇಂಟೇನ್ ಮಾಡಲು ಸಾಧ್ಯವಾಗುತ್ತದೆ.

ಈ ಚಾರ್ಜಿಂಗ್ ವ್ಯವಸ್ಥೆಗಳನ್ನು ನಾವು ಹೇಗೆ ಮಾಡಿಕೊಳ್ಳಬೇಕೆಂದರೆ ಅನೇಕ ಪ್ರೈವೇಟ್ ಕಂಪನಿಗಳು ಮತ್ತು ಸರ್ಕಾರ ವತಿಯಿಂದ ಚಾರ್ಜಿಂಗ್ ಸ್ಟೇಷನ್ಗಳನ್ನು ಒದಗಿಸುತ್ತಿದ್ದಾರೆ.
ನಾವು ಇಲ್ಲಿಯ ತನಕ ಎಲೆಕ್ಟ್ರಿಕಲ್ ವಾಹನಗಳ ಬಗ್ಗೆ ತಿಳಿದುಕೊಂಡೆವು ಮತ್ತು ಖರೀದಿ ಮಾಡುವ ಮುಂಚೆ ಯಾವುದೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಮಾಹಿತಿಯನ್ನು ಕೂಡ ತಿಳಿದುಕೊಂಡೆವು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಎಲೆಕ್ಟ್ರಿಕ್ ವಾಹನಗಳತ್ತ ಹೋಗುತ್ತಿದ್ದಾರೆ. ಈ ಒಂದು ಉತ್ತಮ ಸಮಯದಲ್ಲಿ ನಾವು ಏಕೆ ಇದನ್ನು ಬಿಸಿನೆಸ್ ಆಗಿ ಮಾಡಿಕೊಳ್ಳಬಾರದು? ಮತ್ತು ಎಲೆಕ್ಟ್ರಿಕ್ ವಾಹನಗಳ ಬಿಸಿನೆಸ್ ಮಾಡುವುದು ಉತ್ತಮವಲ್ಲವೇ?
ಈ ಒಂದು ಬಿಜಿನೆಸ್ ಅನ್ನು ಹೇಗೆ ಆರಂಭ ಮಾಡಬಹುದು ಎಂಬ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.

ಎಲೆಕ್ಟ್ರಿಕ್ ವೆಹಿಕಲ್ಸ್ ಗಳ ಒಂದು ಬಿಜಿನೆಸ್ ಆಗಿ ಹೇಗೆ ಮಾಡಬಹುದೆಂದರೆ, ನಾವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆಗೆಯುವುದರ ಮೂಲಕ ಈ ಒಂದು ಬಿಜಿನೆಸ್ ಗೆ ಖಾಲಿಡಬಹುದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ . ಆದ್ದರಿಂದ ಇದು ಸೂಕ್ತವಾದ ಸಮಯ ಈ ಬಿಸಿನೆಸ್‌ಗೆ ಕಾಲಿಡಲು.
ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಗಳು ಕಾಣಿಸುತ್ತವೆ, ಏಕೆಂದರೆ ಇದರ ಅನುಕೂಲಗಳು ಬಹಳಷ್ಟುವೇ ಆದ್ದರಿಂದ ಆದಷ್ಟು ಬೇಗ ಈ ಬಿಸಿನೆಸ್ ಗೆ ನೀವು ಕಾಲಿಡಬಹುದು. ಈ ಬಿಸಿನೆಸ್ ಅನ್ನು ಹೇಗೆ ಸ್ಟಾರ್ಟ್ ಮಾಡಬೇಕು, ಯಾವ ಯಾವ ಉಪಾಯಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ನಾನು ನಿಮಗೆ ತಿಳಿಸುತ್ತೇನೆ.

ಕೇಂದ್ರ ಸರ್ಕಾರವು ಭಾರತದ ಅತ್ಯಂತ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಇಂಧನ ಇಲಾಖೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ತಮಿಳುನಾಡು ಕೇರಳ ಸೇರಿದಂತೆ ದಕ್ಷಿಣದ ಹಲವಾರು ರಾಜ್ಯಗಳಲ್ಲಿ ಪ್ರತಿ ಯೂನಿಟ್ಗೆ ರೂ.5 ದರದಲ್ಲಿ ವಿದ್ಯುತ್ ಅನ್ನು ಪೂರೈಸಲಾಗುತ್ತಿದೆ. ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯಲು ಕಾರವು ಅತ್ಯಂತ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇಂಧನ ಇಲಾಖೆಯು ಕರ್ನಾಟಕದ ರಾಜ್ಯಾದ್ಯಂತ ಹೆಚ್ಚು ಕಡಿಮೆ ಒಂದು ಸಾವಿರಕ್ಕಿಂತ ಹೆಚ್ಚಿನ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡುವ ಸಾಧ್ಯವಿದೆ. ಒಂದು ಯೋಜನೆಯನ್ನು ಪಡೆಯಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಒಂದು ಉದ್ಯಮವನ್ನು ಪ್ರಾರಂಭಿಸಲು ಅನೇಕ ಕಂಪನಿಗಳು ಈಗಾಗಲೇ ಸಾಕಷ್ಟು ಲಾಭವನ್ನು ಕೂಡ ಮಾಡಿಕೊಳ್ಳುತ್ತಿವೆ.

ಈ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆಯಲು ಎಷ್ಟು ಬಂಡವಾಳದ ಅವಶ್ಯಕತೆ ಇದೆ?

ಎಲೆಕ್ಟ್ರಿಕ್ ಸ್ಟೇಷನ್ಗಳಲ್ಲಿ ಎರಡು ತರಹದ ಚಾರ್ಜರ್ಗಳು ಲಭ್ಯವಿವೆ. ಅವುಗಳಲ್ಲಿ
1. ಒಂದು ವೇಗವಾಗಿ ಚಾರ್ಜ್ ಮಾಡುವ ಯಂತ್ರ.
2. ಮತ್ತೊಂದು ನಿಧಾನಗತಿಯಲ್ಲಿ ಚಾರ್ಜ್ ಮಾಡುವ ಯಂತ್ರ.

ನಿಧಾನ ಗತಿಯಲ್ಲಿ ಚಾರ್ಜ್ ಮಾಡುವ ಯಂತ್ರಕ್ಕೆ ಹೆಚ್ಚು ಕಡಿಮೆ ಒಂದು ಲಕ್ಷ ರೂಪಾಯಿ ವೆಚ್ಚವಾಗಲಿದ್ದು ಈ ಒಂದು ಯಂತ್ರವು ವೇಗವಾಗಿ ಚಾರ್ಜ್ ಮಾಡುವ ಯಂತ್ರಕ್ಕಿಂತ ಸ್ವಲ್ಪ ಕಡಿಮೆ ವೇಗದಲ್ಲಿ ಚಾರ್ಜ್ ಮಾಡುತ್ತದೆ. ಆದ್ದರಿಂದ ವೇಗವಾಗಿ ಚಾರ್ಜ್ ಮಾಡುವ ಯಂತ್ರವನ್ನು ತೆಗೆದುಕೊಳ್ಳುವುದೇ ಸೂಕ್ತವೆಂದು ನಾನು ನಿಮಗೆ ಹೇಳುತ್ತೇನೆ.
ವೇಗವಾಗಿ ಚಾರ್ಜ್ ಮಾಡುವ ಯಂತ್ರಕ್ಕೆ ಹೆಚ್ಚು ಕಡಿಮೆ ಹತ್ತರಿಂದ ಹದಿನೈದು ಲಕ್ಷ ರೂಪಾಯಿಯ ವೆಚ್ಚ ಇರುವ ಸಾಧ್ಯತೆ ಇದೆ.
ಒಂದು ಉದ್ಯಮವನ್ನು ಆರಂಭಿಸಿದರೆ ಮುಂದಿನ ದಿನಮಾನಗಳಲ್ಲಿ ಲಾಭಗಳಿಸುವುದಂತು  ಪಕ್ಕಾ ಎನ್ನುತ್ತಿದ್ದಾರೆ ಹೂಡಿಕೆದಾರರು.
ಇಲ್ಲಿವರೆಗೆ ನಮ್ಮ ಕರ್ನಾಟಕ ರಾಜ್ಯದ್ಯಂತ ಒಟ್ಟು 300ಕ್ಕಿಂತ ಹೆಚ್ಚು ಚಾರ್ಜಿಂಗ್ ಸ್ಟೇಷನ್ ಗಳು ಆರಂಭವಾಗಿದೆ.
ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಅನ್ನು ಆರಂಭಿಸುವುದು ಹೇಗೆ?

ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಈ ಉದ್ಯಮವನ್ನು ಆರಂಭಿಸಲು ಮೊದಲೆ ನಮಗೆ ಬೇಕಾಗಿರುವುದು ಒಂದು ಖಾಲಿ ಜಾಗ. ಈ ಜಾಗದ ಪ್ರತಿಯೊಂದು ದಾಖಲೆಗಳನ್ನು ನಾವು ಉದ್ಯಮವನ್ನು ಆರಂಭಿಸುವಾಗ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಡಬೇಕಾಗುತ್ತದೆ. ತರ ಜೊತೆಗೆ ಆ ಜಾಗದ ಮಾಲೀಕರ ವಿವರವನ್ನು ಕೂಡ ಕೊಡುವ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಪ್ರತಿ ಕಿಲವಾಟಿಗೆ ಒಂದು ಸಾವಿರ ರೂಪಾಯಿಯಂತೆ ನಾವು ಹಣವನ್ನು ಬೆಸ್ಕಾಂ ಕಚೇರಿಯಲ್ಲಿ ಠೇವಣಿಯಾಗಿ ನೀಡುವ ಅವಶ್ಯಕತೆ ಇರುತ್ತದೆ. ಇವುಗಳ ಜೊತೆಗೆ ನಾವು ಬೆಸ್ಕಾಂಗೆ ಅರ್ಜಿ ಸಲ್ಲಿಸಬೇಕು.
ಬೆಸ್ಕಾಂನ ಅಧಿಕಾರಿಗಳು ಖಾಲಿ ಜಾಗಕ್ಕೆ ಬಂದು ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ಮಾಡಿ ನಮಗೆ ಅನುಮತಿ ಕೊಡಬೇಕು ಇಲ್ಲವೋ ಎಂದು ಅವರೇ ನಿರ್ಧರಿಸುತ್ತಾರೆ. ನಿರ್ಧರಿಸಿದ ಬಳಿಕ ಮುಂದಿನ ವಿಧಾನಗಳು ಪ್ರಾರಂಭವಾಗುತ್ತವೆ. ಮತ್ತು ಈ ವಿದ್ ಸ್ಟೇಷನನ್ನು ಆರಂಭಿಸಲು ನಮ್ಮ ಕಾಲಿ ಜಾಗದಲ್ಲಿ ಟ್ರಾನ್ಸ್ಫಾರ್ಮರ್ ಇರುವ ಅವಶ್ಯಕತೆ ಇರುತ್ತದೆ ಒಂದು ವೇಳೆ ಇಲ್ಲದಿದ್ದರೆ ಅದಕ್ಕೆ ಹೆಚ್ಚಿನ ಮೊತ್ತವನ್ನು ನಾವು ಬೆಸ್ಕಾಂಗೆ ನೀಡಬೇಕಾಗಿ ಪಾವತಿಸಬೇಕಾಗುತ್ತದೆ. ಇಂತಿ ಬೇರೆ ರಾಜ್ಯಗಳಲ್ಲಿ ಉಚಿತ ಟ್ರಾನ್ಸ್ಫಾರ್ಮರ್ ವ್ಯವಸ್ಥೆ ಇದ್ದು ರಾಜ್ಯದಲ್ಲಿ ಈ ಸೌಕರ್ಯವನ್ನು ಕಲ್ಪಿಸಲು ಮೂರು ಲಕ್ಷ ರೂಪಾಯಿ ಪಡೆಯಬೇಕಾಗುತ್ತದೆ.

ಇವಿ ಉದ್ಯಮವನ್ನು ಆರಂಭಿಸಿದ ನಂತರ ಮುಂದಿನ ದಿನಮಾನಗಳಲ್ಲಿ ಭವಿಷ್ಯ ಹೇಗಿದೆ?

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಪೆಟ್ರೋಲಿಯಂ ವೆಹಿಕಲ್ ಗಳನ್ನು ಬಿಟ್ಟು ಎಲೆಕ್ಟ್ರಿಕಲ್ ವೆಹಿಕಲ್ ಗಳತ್ತ ಮೊರೆ ಹೋಗುತ್ತಿದ್ದಾರೆ. ಪೆಟ್ರೋಲು ಡೀಸೆಲ್ ಈ ದರಗಳನ್ನು ಚಾರ್ಜಿಂಗ್ ಮೊತ್ತಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನದಾಗಿದೆ.
ರಿಂದ ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಎಲೆಕ್ಟ್ರಿಕಲ್ ವೆಹಿಕಲ್ ಗಳನ್ನು ಖರೀದಿಸಿಕೊಂಡು ಉಪಯೋಗಿಸುವ ಸಾಕಷ್ಟು ಸಾಧ್ಯತೆಗಳಿವೆ. ಮತ್ತು ಈ ಉದ್ಯಮದಲ್ಲಿ ಮತ್ತೊಂದು ವಿಶೇಷವೇನೆಂದರೆ ಒಮ್ಮೆ ನೀವು ಹೂಡಿಕೆ ಮಾಡಿದರೆ ಇದರ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ ಇರುತ್ತದೆ ಎಂದು ತಿಳಿದವರು ಹೇಳುತ್ತಾರೆ.
ಬನ್ನಿ ಎಲ್ಲರೂ ಎಲೆಕ್ಟ್ರಿಕಲ್ ವೆಹಿಕಲ್ ಗಳನ್ನು ಬಳಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟೋಣ, ಮತ್ತು ಪೆಟ್ರೋಲ್ ಡೀಸೆಲ್ಗಳ ಬಳಕೆಯನ್ನು ಕಡಿಮೆ ಮಾಡಿ, ವಾಯು ಮಾಲಿನ್ಯವನ್ನು ಕೂಡ ಕಡಿಮೆ ಮಾಡೋಣ. ಒಟ್ಟಾರೆ  ಹೇಳಬೇಕೆಂದರೆ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುವುದು ಉತ್ತಮ ಹಾಗೂ ಲಾಭದಾಯಕವಾಗಿದೆ.

Leave a Reply

Your email address will not be published. Required fields are marked *