19 May 2024

ಗೃಹ ಜ್ಯೋತಿ ಯೋಜನೆಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

ಕರ್ನಾಟಕ ಗೃಹ ಜ್ಯೋತಿ ಯೋಜನೆ ಅಪ್ಲಿಕೇಶನ್

*ಯೋಜನೆಯ ಹೆಸರು:ಕರ್ನಾಟಕ ಗೃಹ ಜ್ಯೋತಿ ಯೋಜನೆ

*ಮೂಲಕ ಪ್ರಾರಂಭಿಸಲಾಯಿತು:ಕರ್ನಾಟಕ ಸರ್ಕಾರದಿಂದ

*ಪ್ರಾರಂಭವಾದ ವರ್ಷ:2023

*ಫಲಾನುಭವಿಗಳು:ಕರ್ನಾಟಕದ ನಿವಾಸಿ

*ಅಪ್ಲಿಕೇಶನ್ ವಿಧಾನ:ಆನ್‌ಲೈನ್ ಅಥವಾ ಆಫ್‌ಲೈನ್

*ಉದ್ದೇಶ:ರಾಜ್ಯದ ನಾಗರಿಕರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವುದು

*ಪ್ರಯೋಜನಗಳು:ರಾಜ್ಯದ ನಾಗರಿಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು.

*ಯಾವ ವರ್ಗ:ಕರ್ನಾಟಕ ಸರ್ಕಾರದ ಯೋಜನೆಗಳು

*ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ sevasindhu.karnataka.gov.in

ಮೊದಲನೇ ಹಂತ – 1

sevasindhugs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
ನೀವು ಮಾಡಬೇಕಿರುವುದು ಇಷ್ಟೇ ಮೊದಲು ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್‌ ಕ್ರೋಮ್‌ ಅಥವಾ ಫೈರ್‌ಫಾಕ್ಸ್‌ ಬ್ರೌಸರ್‌ ಅನ್ನು ಓಪನ್‌ ಮಾಡಿ. ಅಲ್ಲಿನ ಯುಆರ್‌ಎಲ್‌ ಬಾರ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ರೂಪಿಸಲಾದ ಸೇವಾಸಿಂಧು ಪೋರ್ಟಲ್‌ನ ಪ್ರತ್ಯೇಕ ವೆಬ್‌ಸೈಟ್‌ sevasindhugs.karnataka.gov.in ಎಂದು ಟೈಪ್‌ ಮಾಡಿ ಸರ್ಚ್‌ ಮಾಡಿ. ಅದಾದ ಬಳಿಕ ನಿಮಗೆ ಈ ರೀತಿ ವೆಬ್‌ಪೇಜ್‌ ಒಪನ್‌ ಆಗುತ್ತದೆ. ಇಲ್ಲಿ ಅನ್ನಭಾಗ್ಯ ಹೊರತುಪಡಿಸಿ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಸದ್ಯ ಗೃಹಜ್ಯೋತಿಗೆ ಮಾತ್ರ ಅರ್ಜಿ ಸಲ್ಲಿಸುವ ಆಯ್ಕೆ ಇದೆ.

ಹಂತ – 2 ಬಳಿಕ ಗೃಹಜ್ಯೋತಿ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ.

ಹಂತ – 2 ಹಾಗಾಗಿ ಗೃಹಜ್ಯೋತಿ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ. ಗೃಹಜ್ಯೋತಿ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿದ ಬಳಿಕ ನಿಮಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಅರ್ಜಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಹಲವು ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.

ಹಂತ 3 – ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 4 – ಅದಾದ ಬಳಿಕ ನಿಮ್ಮ ವ್ಯಾಪ್ತಿಯ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಆರು ಎಸ್ಕಾಂಗಳು ಇದ್ದು, BESCOM, CHESCOM, HESCOM, GESCOM, MESCOM ಹಾಗೂ ಹುಕ್ಕೇರಿ ಸೊಸೈಟಿ ಎಂಬ ಆಯ್ಕೆಗಳು ಇವೆ. ಅದರಲ್ಲಿ ನಿಮ್ಮ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 5 – ನಿಮ್ಮ ಅಕೌಂಟ್‌ ನಂಬರ್‌ ನಮೂದಿಸಿ!

ಹಂತ 5 – ನಿಮ್ಮ ಅಕೌಂಟ್‌ ನಂಬರ್‌ ನಮೂದಿಸಿ!
ಬೆಸ್ಕಾಂ ಆಯ್ಕೆ ಮಾಡಿಕೊಂಡ ತಕ್ಷಣ ನಿಮ್ಮ ವಿದ್ಯುತ್‌ ಮೀಟರ್‌ಮ ಅಕೌಂಟ್‌ ನಂಬರ್‌ ಅನ್ನು ನಮೂದಿಸಿ. ಆರ್‌ಆರ್‌ ಸಂಖ್ಯೆಯನ್ನು ನೀವು ಇಲ್ಲಿ ನಮೂದಿಸಬಾರದು. ಆರ್‌ಆರ್‌ ಸಂಖ್ಯೆಯೇ ಬೇರೆ, ಅಕೌಂಟ್‌ ಸಂಖ್ಯೆಯೇ ಬೇರೆ. ಈ ಸಂಖ್ಯೆ ನಿಮ್ಮ ಕರೆಂಟ್‌ ಬಿಲ್‌ನಲ್ಲಿ ಆರ್‌ಆರ್‌ ಸಂಖ್ಯೆಯ ಕೆಳಗಡೆ ಇರುತ್ತದೆ. ನೀವು ಅಕೌಂಟ್‌ ನಂಬರ್‌ ನಮೂದಿಸಿದ ಬಳಿಕ ವಿದ್ಯುತ್‌ ಮೀಟರ್‌ ಯಾರ ಹೆಸರಿನಲ್ಲಿದೆಯೋ ಅವರ ಹೆಸರು ಹಾಗೂ ವಿಳಾಸ ಆಟೋಮ್ಯಾಟಿಕ್‌ ಆಗಿ ಅಪ್‌ಡೇಟ್‌ ಆಗಲಿದೆ.

ಹಂತ 6 – ಬಾಡಿಗೆದಾರರೋ ಅಥವಾ ಮನೆ ಮಾಲೀಕರೋ ಆಯ್ಕೆ ಮಾಡಿ!

ನಂತರ ನೀವು ಬಾಡಿಗೆದಾರರೋ ಅಥವಾ ಮನೆ ಮಾಲೀಕರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಎರಡು ಆಯ್ಕೆಗಳಿದ್ದು, ನಿಮಗೆ ಸರಿ ಹೊಂದಿಸುವ ಆಯ್ಕೆಯನ್ನು ಕ್ಲಿಕ್‌ ಮಾಡಿ.

ಹಂತ 7 – ಬಳಿಕ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ. ಆಧಾರ್‌ ಸಂಖ್ಯೆಯನ್ನು ನಮೂದಿಸಿದ ಬಳಿಕ ನಿಮಗೆ ಆಧಾರ್‌ ದೃಢೀಕರಣದ ಆಯ್ಕೆಗಳು ಕಾಣುತ್ತವೆ. ಆಧಾರ್‌ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಒಂದು ವೇಳೆ ಈಗಾಗಲೇ ಆಧಾರ್‌ ದೃಢೀಕರಣ ಆಗಿದ್ದರೆ, ನೀವು ಆಧಾರ್‌ ಸಂಖ್ಯೆ ನಮೂದಿಸಿದ ತಕ್ಷಣ ನಿಮ್ಮ ಹೆಸರು ಕೂಡ ಅಲ್ಲಿ ಆಟೋಮ್ಯಾಟಿಕ್‌ ಆಗಿ ಬರಲಿದೆ.

ಹಂತ 8 – ಮೊಬೈಲ್‌ ನಂಬರ್‌ ನಮೂದಿಸಿ!

ಹಂತ 8 – ಮೊಬೈಲ್‌ ನಂಬರ್‌ ನಮೂದಿಸಿ!
ಆಧಾರ್‌ ದೃಢೀಕರಣದ ಬಳಿಕ ನಿಮ್ಮ 10 ಅಂಕಿಯ ಮೊಬೈಲ್‌ ನಂಬರ್‌ ಅನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರಲಿದೆ. ಆ ಒಟಿಪಿಯನ್ನು ನಮೂದಿಸಿ.

ಹಂತ – 9 ಒಟಿಪಿ ನಮೂದಿಸಿದ ಬಳಿಕ ಕೆಳಗಡೆ ಡಿಕ್ಲರೇಷನ್‌ ಎಂಬ ವಿಭಾಗ ಇದ್ದು, ಅಲ್ಲಿ ಐ ಅಗ್ರಿ ಎಂಬ ಟಿಕ್‌ ಬಾಕ್ಸ್‌ ಅನ್ನು ಕ್ಲಿಕ್‌ ಮಾಡಬೇಕು. ಅದಾದ ನಂತರ ವರ್ಡ್‌ ವೆರಿಫಿಕೇಷನ್‌ ಕೇಳುತ್ತದೆ. ಅಲ್ಲಿರುವ ಸಂಖ್ಯೆಯನ್ನು ನೀವು ಕೊಟ್ಟಿರುವ ಬಾಕ್ಸ್‌ನಲ್ಲಿ ಸರಿಯಾಗಿ ನಮೂದಿಸಬೇಕು.

ಹಂತ 10 – ಅರ್ಜಿಯನ್ನು ಸಬ್ಮಿತ್‌ ಮಾಡಿ!
ಬಳಿಕ ಕೆಳಗಡೆ ಸಬ್ಮಿತ್‌, ಕ್ಯಾನ್ಸಲ್‌ ಹಾಗೂ ಕ್ಲೋಸ್‌ ಎಂಬ ಮೂರು ಆಯ್ಕೆಗಳಿದ್ದು, ಸಬ್ಮಿತ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ. ಇದರ ಬಳಿಕ ಮತ್ತೊಂದು ವೆಬ್‌ಪೇಜ್‌ಗೆ ನೀವು ಹೋಗ್ತೀರಿ. ಅಲ್ಲಿ ನೀವು ನಮೂದಿಸಿರುವ ಮಾಹಿತಿಯನ್ನು ಮತ್ತೊಂದು ಸಲ ವೆಬ್‌ಸೈಟ್‌ ತೋರಿಸುತ್ತದೆ. ಎಲ್ಲ ಸರಿ ಇದೆ ಎಂದು ಖಚಿತಪಡಿಸಿಕೊಂಡ ಬಳಿಕ ನೀವು ಮತ್ತೊಂದು ಸಲ ಸಬ್ಮಿತ್‌ ಬಟನ್‌ ಅನ್ನು ಕ್ಲಿಕ್‌ ಮಾಡಬೇಕು. ಎಡಿಟ್‌ ಮಾಡಲು ಕೂಡ ಅವಕಾಶ ಇದೆ.

ಹಂತ – 11 ಫೈನಲ್‌ ಸಬ್ಮಿಷನ್‌, ಸ್ವೀಕೃತಿ ಪತ್ರ ಪಡೆಯಿರಿ

ಕೊನೆಗೆ ಸಬ್ಮಿತ್‌ ಬಟನ್‌ ಕ್ಲಿಕ್‌ ಮಾಡಿದ ಬಳಿಕ ನಿಮಗೆ ಒಂದು ಸ್ವೀಕೃತಿ ಪತ್ರ ಅಥವಾ ಅಕ್ನಾಲೇಜ್‌ಮೆಂಟ್‌ ಬರಲಿದೆ. ಅದನ್ನು ನೀವು ಎಕ್ಸ್‌ಪೋರ್ಟ್‌ ಪಿಡಿಎಫ್‌ ಎಂದು ಆಯ್ಕೆ ಕೊಟ್ಟರೆ ಸ್ವೀಕೃತಿ ಪತ್ರ ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಸೇವ್‌ ಆಗಲಿದೆ. ಮುಂದೆ ಅರ್ಜಿಯನ್ನು ಪರಿಶೀಲಿಸಲಿರುವ ಸರ್ಕಾರ ನಿಮಗೆ ಉಚಿತವಾಗಿ ವಿದ್ಯುತ್‌ ಅನ್ನು ನೀಡಲಿದೆ. ಸದ್ಯಕ್ಕೆ ಯಾವುದೇ ರೀತಿಯ ದಾಖಲೆಗಳನ್ನು ಅಪ್‌ಲೋಡ್‌ ಮಾಡುವಂತಿಲ್ಲ. ಮುಂದೆ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *