18 May 2024

ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ.

ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ.
ಭಾರತ ದೇಶದಾದ್ಯಂತ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಇರುವ 183 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನಲ್ಲಿ ಒಟ್ಟು 183 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಹಾಕುವುದು, ಹುದ್ದೆಗಳ ವಿವರ, ಅರ್ಜಿ ಹಾಕಲು ಬೇಕಾದ ವೆಬ್ಸೈಟ್, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹುದ್ದೆಗಳಿಗೆ ಬೇಕಾದ ಅರ್ಹತೆಗಳನ್ನು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಈ ಸುವರ್ಣ ಅವಕಾಶವನ್ನು ತಪ್ಪಿಸಿಕೊಳ್ಳದೆ ಈ ಹುದ್ದೆಗಳನ್ನು ನಿಮ್ಮದಾಗಿಸಿಕೊಳ್ಳಿ.

ಹುದ್ದೆಗಳ ವಿವರ: ಕಾನೂನು ವ್ಯವಸ್ಥಾಪಕರು, ಐಟಿ ಅಧಿಕಾರಿ, ರಾಜಭಾಷಾ ಅಧಿಕಾರಿ, ವಿದೇಶಿ ವಿನಿಮಯ ಅಧಿಕಾರಿ ಸೇರಿದಂತೆ ಒಟ್ಟು 183 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು ಜುಲೈ 12.

ಹುದ್ದೆಗಳಿಗೆ ಅರ್ಹತೆ :

ಐಟಿ ಆಫೀಸರ್, ಐಟಿ ಮ್ಯಾನೇಜರ್, ಡಿಜಿಟಲ್ ಮ್ಯಾನೇಜರ್ ಮತ್ತು ಸಾಫ್ಟ್ ವೇರ್ ಡೆವಲಪರ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಥವಾ ಇ ಸಿ ಇ, ಮಾಹಿತಿ ತಂತ್ರಜ್ಞಾನ ಈ ಮೇಲಿನ ಯಾವುದಾದರೂ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಎಂ ಸಿ ಎ ಅಧ್ಯಯನ ಮುಗಿಸಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ರಾಜಭಾಷಾ ಅಧಿಕಾರಿ ಹುದ್ದೆಗಳಿಗೆ ರಾಷ್ಟ್ರಭಾಷೆಯಾಗಿರುವಂತಹ ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವವರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಲಾ ಮ್ಯಾನೇಜರ್ ಹುದ್ದೆಗಳಿಗೆ ಕಾನೂನು ಪದವಿಯನ್ನು ಮುಗಿಸಿರುವವರು ಅರ್ಜಿ ಸಲ್ಲಿಸಬಹುದು.
ಚಾರ್ಟೆಡ್ ಅಕೌಂಟೆಂಟ್ ಹುದ್ದೆಗಳಿಗೆ ಸಿಎ ಅಧ್ಯಯನ ಮಾಡಿ ಎರಡು ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ / ಬಿ ಟೆಕ್ ಪದವಿ ಮುಗಿಸಿ ಮತ್ತು ಐದು ವರ್ಷಗಳ ಸೇವಾನುಭವ ಹೊಂದಿರುವುದು ಕಡ್ಡಾಯವಾಗಿದೆ.

ಅರ್ಜಿ ಶುಲ್ಕದ ವಿವರ : ಹಿಂದುಳಿದ ವರ್ಗಗಳು, ಸಾಮಾನ್ಯ ವರ್ಗಗಳು ಮತ್ತು ಆರ್ಥಿಕ ದುರ್ಬಲ ವರ್ಗಗಳಿಗೆ ಅರ್ಜಿ ಶುಲ್ಕವಾಗಿ ರೂ.1003 ನಿಗದಿಪಡಿಸಲಾಗಿದೆ.

ಎಸ್ ಸಿ, ಎಸ್ ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.150 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಮೊದಲಿಗೆ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಿ ನಂತರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆನ್ ಲೈನ್ ಪರೀಕ್ಷೆಯು ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮತ್ತು ಸಂದರ್ಶನವು ದಿಲ್ಲಿಯಲ್ಲಿ ಮಾತ್ರ ನಡೆಯಲಿದೆ.

ಕರ್ನಾಟಕ ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು : ಬೆಂಗಳೂರು, ಧಾರವಾಡ,ಹುಬ್ಬಳ್ಳಿ, ಮಂಗಳೂರು.

ಅರ್ಜಿ ಸಲ್ಲಿಸಲು ವೆಬ್ಸೈಟ್ : https://punjabandsindbank.co.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 12, 2023.

Leave a Reply

Your email address will not be published. Required fields are marked *