16 May 2024

ಸರ್ಕಾರದಿಂದ ಉಚಿತ ಉಪಕರಣಗಳಿಗಾಗಿ ಅರ್ಜಿ ಆಹ್ವಾನ |ಇವರು ಮಾತ್ರ ಅರ್ಜಿ ಸಲ್ಲಿಸಬಹುದು Free tool kit application

ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಸಣ್ಣ ಸ್ವಯಂ ಉದ್ಯೋಗಿಗಳ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಸದ್ಯಕ್ಕೆ ಈ ಕೆಳಗಿನ ಜಿಲ್ಲೆಯವರಿಗೆ ಉಚಿತವಾಗಿ ಉಪಕರಣಗಳನ್ನು ನೀಡಲು ಅರ್ಜಿ ಆಹ್ವಾನಿಸಿದೆ. ನೀವು ಅರ್ಹರಿದ್ದರೆ ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

Free tool kit application – ಕರ್ನಾಟಕ ರಾಜ್ಯ ಸರ್ಕಾರದ, ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ ಜಿಲ್ಲಾ ಪಂಚಾಯತ್ ಕಚೇರಿಯಿಂದ 2023-24 ನೇ ಸಲಿಗೆ ಅರ್ಹ ಕುಶಲಕರ್ಮಿಗಳಿಗೆ ಉಚಿತವಾಗಿ ಉಪಕರಣಗಳನ್ನು ನೀಡಲು ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಯಾವ ಕುಶಲಕರ್ಮಿಗಳು ಮತ್ತು ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೂ ಓದಿ.

ನೀವು ಅರ್ಹರಾ?


ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶದವರಾಗಿರಬೇಕು ಹಾಗೂ ಈ ಕೆಳಗಿನ ವೃತ್ತಿಯಲ್ಲಿ ತೊಡಗಿರಬೇಕು. ವೃತ್ತಿಗಳು ಯಾವುವು ಎಂಬುದನ್ನು ನೋಡುವುದಾದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗೌಂಡಿ, ಕ್ಷೌರಿಕ ಅಥವಾ ದೋಬಿ ವೃತ್ತಿಯಲ್ಲಿ ತೊಡಗಿರಬೇಕು.
ಅರ್ಹರಿದ್ದವರಿಗೆ ಈ ಉದ್ಯಮಕ್ಕೆ ಅಗತ್ಯವಿರುವ ಉಪಕರಣಗಳನ್ನು ಸರ್ಕಾರವು ಉಚಿತವಾಗಿ ನೀಡುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ :
ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಟ 55 ವರ್ಷದ ಒಳಗಿರಬೇಕು.

ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
Free tool kit application process :
ಈ ಯೋಜನೆಯ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸಲು ಫೆಬ್ರವರಿ 1ನೇ ತಾರೀಕು ಕೊನೆಯ ದಿನಾಂಕವಾಗಿದ್ದು, ನೀವು ಅರ್ಹತೆಯನ್ನು ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಿ. ಅರ್ಜಿ ನಮೂನೆ ಮತ್ತು ದಾಖಲಾತಿಗಳ ವಿವರಗಳನ್ನು : vijayapura.nic.in ನಲ್ಲಿ ಪಡೆಯಬಹುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿಗೆ ದೂರವಾಣಿ ಸಂಖ್ಯೆ : 08352-254851. ಕೈಗಾರಿಕಾ ವಿಸ್ತರಣಾಧಿಕಾರಿಗಳು ವಿಜಯಪುರ/ಸಿಂದಗಿ/ಇಂಡಿ ಮೊಬೈಲ್

ಸಂಖ್ಯೆ : 9972162222 ಮತ್ತು ಮುದ್ದೇಬಿಹಾಳ/ಬಾಗೇವಾಡಿ ಮೊಬೈಲ್ ಸಂಖ್ಯೆ : 9945779798 ಸಂಪರ್ಕಿಸಬುಹುದಾಗಿದೆ.

ಅರ್ಜಿ ಸಲ್ಲಿಸಲು ಕಛೇರಿ ವಿಳಾಸ :

ಉಪನಿರ್ದೇಶಕರ ರವರ ಕಛೇರಿ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ ಸ್ಟೇಶನ್ ಬ್ಯಾಕ್ ರೋಡ, ಶಿಕಾರಖಾನೆ ವಿಜಯಪುರ-586104

Leave a Reply

Your email address will not be published. Required fields are marked *