18 May 2024
ಕೆನರಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಹೇಗೆ ಪಡೆಯುವುದು?

ಕೆನರಾ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಹೇಗೆ ಪಡೆಯುವುದು? ಯಾವ ದಾಖಲೆಗಳ ಅವಶ್ಯವಿದೆ?

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ ಕೆನರಾ ಬ್ಯಾಂಕ್ ನಿಂದ ಕೆನರಾ ಬಜೆಟ್ ಪ್ರೈಮ್ (Canara budget prime) ಸ್ಕೀಮ್ ಮೂಲಕ ಹೇಗೆ ಪರ್ಸನಲ್ ಲೋನ್ ಪಡೆಯುವುದು, ಈ ಸ್ಕೀಮ್ ಯಾರಿಗೆ ಅನ್ವಯಿಸುವುದು ಎಂಬ ಪೂರ್ಣ ಮಾಹಿತಿಯನ್ನು ಇಂದು ತಿಳಿಯೋಣ.

ಕೆನರಾ ಬ್ಯಾಂಕ್ ನಿಂದ ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಮೊದಲೇ ಗ್ರಾಹಕರರಿದ್ದರೆ ನೆಟ್ ಬ್ಯಾಂಕಿಂಗ್ ಮೂಲಕ ಲೋನ್ ಪಡೆಯಬಹುದು, ಹಾಗೂ ನಿಮಗೆ ಮೊದಲೇ ಅನುಮೋದನೆ ಮಾಡಿ ಲೋನ್ ಆಫರ್  ನೀಡಬಹುದು.

ಕೆನರಾ ಬಜೆಟ್ ಪ್ರೈಮ್ ಸ್ಕೀಮ್ ಗೆ ಯಾರು ಅರ್ಜಿ ಸಲ್ಲಿಸಬಹುದು?

ಕೆನರಾ ಬಜೆಟ್ ಪ್ರೈಮ್ ಸ್ಕೀಮ್ ಗೆ ಸರ್ಕಾರಿ ನೌಕರರು (ಕೇಂದ್ರ ಹಾಗೂ ರಾಜ್ಯ ಸರ್ಕಾರ ), ಡಿಫೆನ್ಸ್ ಅಥವಾ ಸರ್ಕಾರದ ಕಂಪನಿಯ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ನಿಮ್ಮ 25 ತಿಂಗಳ ಸಂಬಳದ  ವರೆಗು ನೀವು ಲೋನ್ ಪಡೆಯಬಹುದು ಹಾಗೂ ಗರಿಷ್ಠ 35 ಲಕ್ಷದ ವರೆಗೂ ಲೋನ್ ಪಡೆಯಬಹುದು.

ನಿಮಗೆ 85 ತಿಂಗಳ ಮರುಪಾವತಿಯ ಅವಧಿ ನೀಡಲಾಗುವುದು ಹಾಗೂ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪ್ರತಿ ತಿಂಗಳು ಎಲ್ಲಾ ಖರ್ಚು ಕಳೆದು ನಿಮ್ಮ ಸಂಬಳದ 25% ಸಂಬಳ ಅಥವಾ ಕನಿಷ್ಟ 10,000 ಉಳಿದಿರಬೇಕು. ಈ ಎಲ್ಲಾ ಕ್ರೈಟೀರಿಯ ನಿಮಗೆ ಅನ್ವಯಿಸಿದರೆ ಕೆನರಾ ಬ್ಯಾಂಕ್ ಲೋನ್ ನೀಡುತ್ತಾರೆ.

ಯಾವ ದಾಖಲೆಗಳನ್ನು ಕೆನರಾ ಬ್ಯಾಂಕ್ ಗೆ ನೀಡಬೇಕು:

KYC ದಾಖಲೆಗಳನ್ನು ನೀಡಬೇಕು ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂಬರ್, ಹೆಸರು ನೀಡಬೇಕು. ಇದನ್ನು ನಿಮ್ಮ ವಾಸಸ್ಥಳದ ಪ್ರೂಫ್ ಎಂದು ಪರಿಗಣಿಸುತ್ತಾರೆ. ಆದಾಯದ ಪ್ರೂಫ್ ಗೆ 6 ತಿಂಗಳ ಸಲಾರಿ ಸ್ಲಿಪ್  ಹಾಗೂ ಪ್ರೋನೋಟ್ ಲೆಟರ್(Pro-note letter) ನಿಮ್ಮ ಕಂಪನಿಯ ಕಡೆಯಿಂದ ನೀಡಬೇಕು.

ಕೆನರಾ ಬ್ಯಾಂಕ್ ನಿಂದ ಲೋನ್ ಪಡೆಯುವುದರಿಂದ ಏನು ಉಪಯೋಗ:

ಕೆನರಾ ಬ್ಯಾಂಕ್ ಸರ್ಕಾರದ ಬ್ಯಾಂಕ್ ಆಗಿರುವುದರಿಂದ ನಿಮ್ಮಗೆ ಮೋಸ ಹೋಗುವ ಸಾಧ್ಯತೆ ಇರುವುದಿಲ್ಲ, ಕಡಿಮೆ ಬಡ್ಡಿದರದಲ್ಲಿ ಅಂದರೆ 9%-16% ನೀಡುತ್ತಾರೆ. ಯಾವುದೇ ಲೋನ್ ಪ್ರೊಸೆಸಿಂಗ್ ಫೀ / prepayment ಪೆನಾಲ್ಟಿ ಇರುವುದಿಲ್ಲ ಹಾಗೂ ಕಡಿಮೆ ಸಮಯದಲ್ಲಿ ಲೋನ್ ಪಡೆಯಬಹುದು.

ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ಲೇಖನವನ್ನು ಓದುತ್ತಿರಿ ಹಾಗೂ ನಿಮಗೆ ಈ ಎಲ್ಲ ಮಾಹಿತಿಗಳು ಸಹಾಯವಾಗಿದೆ ಎಂದರೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.

ಪಾನ್ ಕಾರ್ಡ್ ಮಾಹಿತಿ ಇದ್ದರೆ ಸಾಕು ನಿಮಗೆ 75 ಸಾವಿರವರೆಗು ಪರ್ಸನಲ್ ಲೋನ್!! INDmoney ಅಪ್ಲಿಕೇಶನ್ ಲೋನ್..!

Leave a Reply

Your email address will not be published. Required fields are marked *