17 May 2024

ಭಾರತೀಯ ವಾಯುಪಡೆ 3500 ಹುದ್ದೆಗಳ ನೇಮಕಾತಿ 40,000 ಮಾಸಿಕ ಸಂಬಳ ಈಗಲೇ ಅರ್ಜಿ ಸಲ್ಲಿಸಿ

ನಮಸ್ಕಾರ ಕರ್ನಾಟಕ ಜನತೆಗೆ!
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು, ಅರ್ಹತೆಗಳನ್ನು ಮತ್ತು ಇತರೆ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಂಡ ನಂತರ ನೀವು ಅರ್ಹರಿದ್ದರೆ ತಡ ಮಾಡದೆ ಈ ಕೂಡಲೇ ಅರ್ಜಿ ಸಲ್ಲಿಸಿ.

ಯಾವ ಹುದ್ದೆಗಳು –
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಅಗ್ನಿವೀರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಮೂರುವರೆ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಕೆಲಒಂದಿಷ್ಟು ಅರ್ಹತೆಗಳನ್ನು ನಿಗಧಿಪಡಿಸಲಾಗಿದ್ದು ಕೆಳಗಿನ ಸಂಪೂರ್ಣ ಮಾಹಿತಿಯನ್ನು ಓದಿ.

ಅರ್ಹತೆಗಳು :
ವಾಯುಪಡೆಯಲ್ಲಿ ಖಾಲಿ ಇರುವ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 12ನೇ ತರಗತಿಯನ್ನು ಶೇ. 50 ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. PUC ಯನ್ನು ಹೊರತುಪಡಿಸಿ ಡಿಪ್ಲೋಮ ಮಾಡಿದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಇತರೆ ಅರ್ಹತೆಗಳು :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಯೋಮಿತಿ ಹೊಂದಿದವರು ಮಾತ್ರ ಅರ್ಹತೆಯನ್ನು ಹೊಂದಿರುತ್ತಾರೆ.
ಅಭ್ಯರ್ಥಿಗಳು 02.01.2004 ರಿಂದ 02.07.2007 ರ ನಡುವೆ ಜನಿಸಿದವರು ಮಾತ್ರ ಅರ್ಹತೆಯನ್ನು ಹೊಂದಿರುತ್ತಾರೆ.

ಆಯ್ಕೆಯಾದವರಿಗೆ ಮಾಸಿಕ ಸಂಬಳ ಏಷ್ಟು?

ಅಗ್ನಿವೀರ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ಸಂಬಳದ ಜೊತೆಗೆ ಇತರೆ ಹಲವಾರು ಪ್ರಯೋಜನಗಳು ಕೂಡ ಇರುತ್ತವೆ.
ಮಾಸಿಕ ಸಂಬಳದ ವಿವರವನ್ನು ತಿಳಿದುಕೊಳ್ಳಿ.
ಈ ಹುದ್ದೆಗಳಿಗೆ ಆಯ್ಕೆಯಾದವರು ವಾಯುಪಡೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗಿರುತ್ತದೆ.
ಮೊದಲನೇ ವರ್ಷ 30 ಸಾವಿರ ಇರುತ್ತದೆ ಹಾಗೂ 2ನೇ ವರ್ಷ 33,000, 3ನೇ ವರ್ಷ 36500 ಮತ್ತು ಕೊನೆಯ ವರ್ಷ 40 ಸಾವಿರ ರೂಪಾಯಿ ಸಂಬಳ ಇರುತ್ತದೆ.

ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ ಲೈನ್ ಮುಕಾಂತರ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು 550 ರೂ. ಅರ್ಜಿ ಶುಲ್ಕವನ್ನು ವಿಧಿಸಬೇಕು.
ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು 2ನೇ ಫೆಬ್ರವರಿ 2024 ಕೊನೆಯ ದಿನಾಂಕವಾಗಿರುತ್ತದೆ. ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಏಕೆಂದರೆ ಕೊನೆಯ ದಿನಾಂಕದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಅರ್ಜಿ ಸಲ್ಲಿಸುವ ಲಿಂಕ್ : https://agnipathvayu.cdac.in

ಇದೇ ರೀತಿ ನಮ್ಮ ಈ ಜಾಲತಾಣದಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮತ್ತು ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಹಾಯವಾಗುವಂತಹ ಅನೇಕ ಮಾಹಿತಿಗಳನ್ನು ಪ್ರತಿದಿನ ಒದಗಿಸುತ್ತಿದ್ದು ಎಲ್ಲ ಮಾಹಿತಿಗಳು ನಿಮಗೆ ಉಪಯುಕ್ತನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *