17 May 2024
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!! ಈ ವಾರ ತಿದ್ದುಪಡಿಗೆ ಅವಕಾಶ ಕೊಟ್ಟಾಗ ಈ ರೀತಿ ಮಾಡಿ

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ನಮಗೆ ಎಲ್ಲಾ ಗೊತ್ತಿರುವ ಹಾಗೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಪ್ರತಿ ವಾರ ಒಂದು ಅಥವಾ ಏರಡು ಬಾರಿ ಲಿಂಕ್ ಆಕ್ಟಿವ್ ಮಾಡಿ ಅವಕಾಶ ನೀಡಲಾಗುತ್ತಿದೆ. ಈ ವಾರ ಕೂಡ ಅರ್ಜಿ ಸಲ್ಲಿಸಲು ಒಂದು/ ಏರಡು ಅವಕಾಶ ನೀಡುವ ಸಾಧ್ಯತೆ ಇದೆ .

ಹಾಗಾಗಿ ಯಾವಾಗ ಅರ್ಜಿ ಸಲ್ಲಿಸಲು ಬಿಡಬಹುದು? ಹೇಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದು ತಿಳಿಯುವುದು? ಮತ್ತು ಯಾವ ದಾಖಲೆಗಳ ಅವಶ್ಯವಿದೆ ಎಂಬ ಪೂರ್ಣ ಮಾಹಿತಿ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಓದಿ ಮಾಹಿತಿ ಉಪಯುಕ್ತವಾಗಿದೆ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಯಾವ ದಾಖಲೆಗಳ ಅವಶ್ಯವಿದೆ?

BPL ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಎಲ್ಲಾ ಸದ್ಯದರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೆಯೇ ಆರು ವರ್ಷದ ಒಳಗೆ ಇರುವ ಮಗುವಿದ್ದರೆ ಜನ್ಮ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಕಡ್ಡಯವಾಗಿ ಇರಬೇಕು.

ಎಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಎಲ್ಲಾ ಸದ್ಯಸರ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇರಬೇಕು. ಹಾಗೂ ನೀವು ಅರ್ಜಿಯನ್ನು  ಸಲ್ಲಿಸಲು ಅವಕಾಶ ನೀಡಿದಾಗ ಬೆಂಗಳೂರ್ ಒನ್ , ಗ್ರಾಮ ಒನ್  ಮತ್ತು ಸೈಬರ್ ಸೆಂಟರ್ ಅಲ್ಲಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಈ ವಾರ ಯಾವಾಗ ಲಿಂಕ್ ಆಕ್ಟಿವ್ ಮಾಡಬಹುದು?

ಪ್ರತಿ ವಾರದ ಹಾಗೆ ಈ ವಾರ ಕೂಡ ಒಂದು ಅಥವಾ ಎರಡು ಗಂಟೆಯ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು. ಆದರೆ ಯಾವ ಸಮಯ ಎಂದು ಮುಂಚಿತವಾಗಿ ತಿಳಿಸುವುದಿಲ್ಲ. ಹಾಗಾಗಿ ನಮ್ಮ ಅರ್ಜಿ ಸಲ್ಲಿಸಲು ಸೈಬರ್ ಸೆಂಟರ್, ಅವರಿಗೆ ವೆಬ್ಸೈಟ್ ಇಂದ ಲಿಂಕ್ ಆಕ್ಟಿವ್ ನಂತರ ನೋಟಿಫೈ ಆಗುವುದು.

ನಿಮ್ಮ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳನ್ನು ಸೈಬರ್ ಸೆಂಟರ್ ನಲ್ಲಿ ನೀಡಿ ಅವರಿಗೆ ಅರ್ಜಿ ಸಲ್ಲಿಸಲು ತಿಳಿಸಿದರೆ ಅವರು OTP ಮೂಲಕ ನಿಮ್ಮ ಅರ್ಜಿ ಸಲ್ಲಿಸುತ್ತಾರೆ. ಹಾಗೂ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಇರಬೇಕು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿ ಇರಬೇಕು.

ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ಲೇಖನವನ್ನು ಓದುತ್ತಿರಿ ಹಾಗೂ  ಈ ಎಲ್ಲ ಮಾಹಿತಿಗಳು ಸಹಾಯವಾಗಿದೆ ಎಂದರೆ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ.

ಹೊಸ ರೇಷನ್ ಕಾರ್ಡ್ ಅಪ್ರುವಲ್ ಮಾಡಿಸುವುದು ಹೇಗೆ? ಈ ಸುಲಭ ಮಾರ್ಗ ಫಾಲೋ ಮಾಡಿ ಅಪ್ರೂವಲ್ ಆಗುತ್ತೆ!!

Leave a Reply

Your email address will not be published. Required fields are marked *